Viral Video: ಮದುವೆ ಮನೆಯಲ್ಲಿ ಸೀರೆಯುಟ್ಟು ದೇಸಿ ಗರ್ಲ್​ ಹಾಡಿಗೆ ಹೆಜ್ಜೆ ಹಾಕಿದ ಗಂಡುಮಕ್ಳು, ಸೊಂಟ ಬಳುಕಿಸುವ ರೀತಿಗೆ ನೆಟ್ಟಿಗರು ಫಿದಾ

ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಂತೂ ಮದುವೆ ಎಂದರೆ ಹಬ್ಬ. ಮದುವೆ ಎಂದರೆ ವಧು, ವರರಿಗೆ,  ಮನೆಗೆ ಅಲಂಕಾರ ಮಾಡುವುದಷ್ಟೇ ಅಲ್ಲ ಮನಸ್ಸಿಗೂ ಒಂದು ರೀತಿಯ ಅಲಂಕಾರವಾಗಿರುತ್ತದೆ.

Viral Video: ಮದುವೆ ಮನೆಯಲ್ಲಿ ಸೀರೆಯುಟ್ಟು ದೇಸಿ ಗರ್ಲ್​ ಹಾಡಿಗೆ ಹೆಜ್ಜೆ ಹಾಕಿದ ಗಂಡುಮಕ್ಳು, ಸೊಂಟ ಬಳುಕಿಸುವ ರೀತಿಗೆ ನೆಟ್ಟಿಗರು ಫಿದಾ
ಮದುವೆಯಲ್ಲಿ ಸೀರೆತೊಟ್ಟು ಪುರುಷರ ನೃತ್ಯ

Updated on: Feb 28, 2023 | 12:40 PM

ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಂತೂ ಮದುವೆ ಎಂದರೆ ಹಬ್ಬ. ಮದುವೆ ಎಂದರೆ ವಧು, ವರರಿಗೆ,  ಮನೆಗೆ ಅಲಂಕಾರ ಮಾಡುವುದಷ್ಟೇ ಅಲ್ಲ ಮನಸ್ಸಿಗೂ ಒಂದು ರೀತಿಯ ಅಲಂಕಾರವಾಗಿರುತ್ತದೆ. ನೃತ್ಯ, ಸಂಗೀತ, ಬಗೆಬಗೆಯ ತಿನಿಸುಗಳು, ಮೋಜು ಮಸ್ತಿ ಇವೇ ತುಂಬಿರುತ್ತದೆ. ಹಾಗೆಯೇ ಮದುವೆಯೊಂದರಲ್ಲಿ ಗಂಡುಮಕ್ಕಳು ಸೀರೆಯುಟ್ಟು ಪ್ರಿಯಾಂಕಾ ಚೋಪ್ರಾ ಅವರ ದೇಸಿ ಗರ್ಲ್​ ಹಾಡಿಗೆ ಹೆಜ್ಜೆ ಹಾಕಿದ್ದು, ಎಲ್ಲರೂ ಬಾಯಿಯ ಮೇಲೆ ಬೆರಳಿಡುವಂತೆ ಮಾಡಿತ್ತು. ಸೊಂಟ ಬಳುಕಿಸುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಹುಡುಗರು ತಮ್ಮ ಸಾಂಪ್ರದಾಯಿಕ ಉಡುಪಿನ ಮೇಲೆಯೇ ಸೀರೆಯನ್ನು ಧರಿಸಿದ್ದರು. ದೋಸ್ತಾನಾ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಇಬ್ಬರು ಹೆಣ್ಣುಮಕ್ಕಳು ಕೂಡ ಅವರ ನೃತ್ಯಕ್ಕೆ ಸಾಥ್ ನೀಡಿದರು. ಹೆಣ್ಣುಮಕ್ಕಳಿಗಿಂತ ನಾವೇನು ಕಡಿಮೆ ಎಂದು ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಮತ್ತಷ್ಟು ಓದಿ: Viral Video: ಯಾರಿಗೆ ಹೇಳೋಣ ಕುಳ್ಳಿಯರ ಪ್ರಾಬ್ಲಮ್, ನಮ್ಮ ಗೋಳು ಕೇಳೋರು ಯಾರೂ ಇಲ್ವಾ?

ವೈರಲ್ ಆಗಿರುವ ಈ ವಿಡಿಯೋ ಕ್ಷಣಾರ್ಧದಲ್ಲಿ ಎಲ್ಲರ ಕಣ್ಮನ ಸೆಳೆದಿದೆ. ಕೊರಿಯೋಗ್ರಾಫರ್ ರೇವತಿ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೇಸಿ ಗರ್ಲ್ ಚಿತ್ರ ಪ್ರಿಯಾಂಕಾ ಚೋಪ್ರಾ, ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ ಒಳಗೊಂಡ ಜನಪ್ರಿಯ ಚಿತ್ರವಾಗಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:40 pm, Tue, 28 February 23