Viral Video: ಅಪ್ಪ ಇವತ್ತು ಅಡುಗೆ ನಾನು ಮಾಡಿರೋದು, ಕೈತುತ್ತು ಕೊಟ್ಟ ಮಗಳಿಗೆ ತಂದೆ ಹೇಳಿದ್ದೇನು ಗೊತ್ತಾ?
ನಾನೇ ಮಾಡಿರೋದು ಊಟ ಮತ್ತು ಸಾಂಬರ್ ಎಂದು ಹೇಳಿ ತನ್ನ ತಂದೆಗೆ ಪ್ರೀತಿಯ ಕೈತುತ್ತು ನೀಡಿದ ಪುಟ್ಟ ಬಾಲೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ತಂದೆ ಮಗಳ ಭಾಂದವ್ಯವನ್ನು ಬಿಂಬಿಸುವ ವೀಡಿಯೋ ಇಲ್ಲಿದೆ. ಅಪ್ಪ ಮಗಳ ಭಾಂದವ್ಯಕ್ಕೆ ಸರಿಸಾಟಿಯಾದು ಬೇರೊಂದಿಲ್ಲ.
ನಾನೇ ಮಾಡಿರೋದು ಊಟ ಮತ್ತು ಸಾಂಬರ್ ಎಂದು ಹೇಳಿ ತನ್ನ ತಂದೆಗೆ ಪ್ರೀತಿಯ ಕೈತುತ್ತು ನೀಡಿದ ಪುಟ್ಟ ಬಾಲೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ತಂದೆ ಮಗಳ ಭಾಂದವ್ಯವನ್ನು ಬಿಂಬಿಸುವ ವೀಡಿಯೋ ಇಲ್ಲಿದೆ. ಅಪ್ಪ ಮಗಳ ಭಾಂದವ್ಯಕ್ಕೆ ಸರಿಸಾಟಿಯಾದು ಬೇರೊಂದಿಲ್ಲ. ಪ್ರತಿಯೊಬ್ಬ ತಂದೆಗೂ ಆತನ ಹೆಣ್ಣು ಮಗುವೆಂದರೆ ಅದು ಎಲ್ಲಿಲ್ಲದ ಪ್ರೀತಿ. ತನ್ನ ಮಗಳನ್ನು ರಾಜಕುಮಾರಿಯಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ಅದೇ ರೀತಿ ಮಗಳಿಗೆ ತಾಯಿಗಿಂತಲೂ ತಂದೆಯ ಮೇಲೆ ಜಾಸ್ತಿ ಪ್ರೀತಿ. ಅದೇನಿದ್ದರೂ ಮಗಳು ತಂದೆ ಬಳಿಯೇ ಮೊದಲು ಹೇಳಿಕೊಳ್ಳುತ್ತಾಳೆ. ತಂದೆ ಮಗಳ ಬಂಧವು ಗಾಢವಾಗಿರುತ್ತದೆ. ಇದೇ ರೀತಿಯ ತಂದೆ ಮಗಳ ಭಾಂದವ್ಯವನ್ನು ಬಿಂಬಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೋದಲ್ಲಿ ಒಂದು ಪುಟ್ಟ ಮಗು ತನ್ನ ತಂದೆಗೆ ಕೈಯಾರೆ ಕೈತುತ್ತು ನೀಡುತ್ತಾ ಚೆನ್ನಾಗಿದೆಯಾ ಊಟ ಎಂದು ಕೇಳುತ್ತಾಳೆ. ಆಗ ತಂದೆ ಹೂಂ ಊಟ ಚೆನ್ನಾಗಿದೆ ಯಾರು ಮಾಡಿದ್ದು ಇದನ್ನು ಅಂತ ಕೇಳುತ್ತಾರೆ. ತನ್ನ ಮುದ್ದಾದ ಧ್ವನಿಯಲ್ಲಿ ನಾನೇ ಮಾಡಿದ್ದು, ಸಾಂಬರ್ ಕೂಡಾ ನಾನೇ ಮಾಡಿದ್ದು ಎಂದು ಹೇಳಿ ಇನ್ನೊಂದು ಬಾರಿ ಕೈತುತ್ತು ತಿನ್ನಿಸುತ್ತಾಳೆ.
View this post on Instagram
ಸಾಕು ನನಗೆ ಹೊಟ್ಟೆ ತುಂಬಿತು ಎಂದು ತಂದೆ ಹೇಳಿದರೂ, ಊಟ ಸೂಪರ್ ಆಗಿದೆ, ತಿನ್ನಿ ಎನ್ನುತ್ತಾ ಊಟ ಮಾಡಿಸುತ್ತಾಳೆ. ಮಗಳ ಈ ಪ್ರೀತಿಯನ್ನು ಕಂಡ ತಂದೆ ನಾನೇ ಪುಣ್ಯವಂತ ಎಂದು ಮಗಳ ಬಳಿ ಹೇಳಿದಾಗ, ನಿಷ್ಟಲ್ಮಶ ಮನಸ್ಸಿನ ಪುಟ್ಟ ಮಗು ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತದೆ. ತಂದೆ ಮಗಳ ಸಂಭಾಷಣೆಯ ಮುದ್ದಾದ ವೀಡಿಯೋ ಮನ ಮುಟ್ಟುವಂತಿದೆ.
ಇದನ್ನೂ ಓದಿ: Viral Video: ಯಾರಿಗೆ ಹೇಳೋಣ ಕುಳ್ಳಿಯರ ಪ್ರಾಬ್ಲಮ್, ನಮ್ಮ ಗೋಳು ಕೇಳೋರು ಯಾರೂ ಇಲ್ವಾ?
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡೀಯೋ ನಿಮ್ಮ ಮುಖದಲ್ಲಿ ಮುಗುಳ್ನಗೆಯನ್ನು ಮೂಡಿಸುವುದಂತೂ ನಿಜ. ತಂದೆ ಮಗಳ ನಿಷ್ಟಲ್ಮಶ ಪ್ರೀತಿಯನ್ನು ಈ ವೀಡಿಯೋದಲ್ಲಿ ಕಾಣಬಹುದು. ಈ ಮುದ್ದಾದ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ಜೊತೆಗೆ ಅನೇಕ ಜನರು ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾದರು ನೀವು ತುಂಬಾ ಪುಣ್ಯ ಮಾಡಿದ್ದೀರಾ ಇಂತಹ ಮಗಳನ್ನು ಪಡೆಯೋಕೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಹೆಣ್ಣು ಮಕ್ಕಳ ಇದೇ ರೀತಿ ಜೀವನ ಪೂರ್ತಿ ಇರಬೇಕಿತ್ತಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ಈ ವೀಡಿಯೋ ನೋಡಿ ಕಣ್ತುಂಬಿ ಬಂತು ಎಂದು ಕಮೆಂಟ್ ಮಾಡಿದ್ದಾರೆ.