Viral Video: ವಿಡಿಯೋ ಲೀಕ್ ಪ್ರಕರಣ; ಕಚೇರಿಯಲ್ಲಿ ಅಶ್ಲೀಲವಾಗಿ ತೊಡಗಿಕೊಂಡ ಅಧಿಕಾರಿ ವಜಾ

| Updated By: Rakesh Nayak Manchi

Updated on: Aug 21, 2022 | 4:39 PM

ಕಚೇರಿಯಲ್ಲಿ ಮಹಿಳೆಯನ್ನು ಚುಂಬಿಸುತ್ತಾ ಮುದ್ದಾಡಿದ ಅಧಿಕಾರಿಯೊಬ್ಬರು ವಿಡಿಯೋ ಲೀಕ್ ಆಗಿದೆ. ಸದ್ಯ ತನಿಖೆಯ ನಂತರ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಲಾಗಿದೆ.

Viral Video: ವಿಡಿಯೋ ಲೀಕ್ ಪ್ರಕರಣ; ಕಚೇರಿಯಲ್ಲಿ ಅಶ್ಲೀಲವಾಗಿ ತೊಡಗಿಕೊಂಡ ಅಧಿಕಾರಿ ವಜಾ
ಪ್ರಾತಿನಿಧಿಕ ಚಿತ್ರ
Follow us on

ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಅಜೆರ್‌ಬೈಜಾನ್‌ನ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಲಾಗಿದೆ. ತುರ್ತು ಪರಿಸ್ಥಿತಿಗಳ ಸಚಿವಾಲಯದ ರಾಜ್ಯ ಅಗ್ನಿಶಾಮಕ ರಕ್ಷಣಾ ಸೇವೆಯ ಮುಖ್ಯಸ್ಥರ ಸಹಾಯಕ ಕರ್ನಲ್ ಜೌರ್ ಮಿರ್ಜಾಯೆವ್ ಅವರನ್ನು ಕಚೇರಿಯ ದುರುಪಯೋಗ, ಅಶ್ಲೀಲ ವಸ್ತುಗಳ ಅಕ್ರಮ ವಿತರಣೆ ಮತ್ತು ಗೌಪ್ಯತೆಯ ಉಲ್ಲಂಘನೆ ಸೇರಿದಂತೆ ವಿವಿಧ ಅಪರಾಧಗಳಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳು ಹೇಳುವ ಪ್ರಕಾರ, ಮಿರ್ಜಾಯೆವ್ ಅವರು ತಮ್ಮ ಕಚೇರಿಯಲ್ಲಿ ಲೈಂಗಿಕವಾಗಿ ತೊಡಗಿಕೊಂಡ ದೃಶ್ಯಾವಳಿಗಳು ಸೇವಾ ಕಂಪ್ಯೂಟರ್‌ನಲ್ಲಿ ರಹಸ್ಯವಾಗಿ ರೆಕಾರ್ಡ್ ಆಗಿವೆ. ಸಮವಸ್ತ್ರ ಧರಿಸಿದ್ದ ಮಿರ್ಜಾಯೆವ್ ಅವರು ಮಹಿಳೆ ಕಚೇರಿಗೆ ಆಗಮಿಸಿದಾಗ ಕಚೇರಿಯ ಬಾಗಿಲು ಹಾಕಿಕೊಂಡು ಆಕೆಯನ್ನು ಚುಂಬಿಸಿ ಮುದ್ದಿಸಿದ್ದಾರೆ. ಇದು ಕಚೇರಿಯಲ್ಲಿನ ಕಂಪ್ಯೂಟರ್​ನ ಗೌಪ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದಲ್ಲದೆ ಲೀಕ್ ಕೂಡ ಆಗಿತ್ತು.

2013-2019ರ ಅವಧಿಯಲ್ಲಿ ಮಿರ್ಜಾಯೆವ್ ಅವರು ಲೈಂಗಿಕ ಸಂಭೋಗ ಮತ್ತು ಇತರ ರೀತಿಯ ನಿಕಟ ಸಂಬಂಧಗಳನ್ನು ಹೊಂದಿರುವಾಗ ವಿಡಿಯೋ ಮತ್ತು ಫೋಟೋ ಶೂಟ್‌ಗಳನ್ನು ತೆಗೆದುಕೊಂಡಿದ್ದಾರೆ. ಇದು 2022ರ ಆಗಸ್ಟ್ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈರಲ್ ಆದ ವಿಡಿಯೋದಲ್ಲಿನ ಟೈಮ್​ಸ್ಟ್ಯಾಂಪ್ ಪ್ರಕಾರ, ಈ ವಿಡಿಯೋ 2014ರಲ್ಲಿ ರೆಕಾರ್ಡ್ ಮಾಡಲಾಗಿದೆ.

ಈ ವಿಡಿಯೋ ಸೋರಿಕೆಯಾಗಿದೆಯೇ? ಅಥವಾ ಮಿರ್ಜಾಯೆವ್ ಅವರೇ ಪೋಸ್ಟ್ ಮಾಡಿದ್ದಾರೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಸದ್ಯ ಅವರ ನಡೆಗಳು ಸಚಿವಾಲಯದ ಪ್ರತಿಷ್ಠೆಗೆ ಧಕ್ಕೆ ತಂದ ಹಿನ್ನೆಲೆ ಅವರ ವಿರದ್ಧ ತನಿಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವೀಡಿಯೊದಲ್ಲಿರುವ ಮಹಿಳೆಯ ಗುರುತು ಸ್ಪಷ್ಟವಾಗಿಲ್ಲ, ಆದರೂ ಕನಿಷ್ಠ ಒಂದು ಫೇಸ್‌ಬುಕ್ ಬಳಕೆದಾರರ ಗುಂಪು ಆಕೆ ಅದೇ ಸಚಿವಾಲಯದ ಇನ್ನೊಂದು ವಿಭಾಗದ ಮುಖ್ಯಸ್ಥೆ ಎಂದು ಹೇಳಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ