Viral Video: ಒಂದು ಬದಿ ಬ್ಲ್ಯಾಕ್​ ಅಂಡ್​ ವೈಟ್​ ಪ್ರಿಂಟೌಟ್​ಗೆ 9 ರೂಪಾಯಿ; ಡೆಲಿವರಿ ಚಾರ್ಜ್​ 25 ರೂ. !

Blinkit: ಒಂದು ಪುಟ ಪ್ರಿಂಟೌಟ್​ಗೆ ರೂ 9. ಡೆಲಿವರಿ ಶುಲ್ಕ ಪ್ರತ್ಯೇಕ. ಇದು ಗ್ರೋಸರಿ ಮತ್ತು ಗೂಡ್ಸ್​ ಅಪ್ಲಿಕೇಶನ್​ ಬ್ಲಿಂಕಿಟ್​ನ ಹೊಸ ಸೌಲಭ್ಯ. ನೆಟ್ಟಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Viral Video: ಒಂದು ಬದಿ ಬ್ಲ್ಯಾಕ್​ ಅಂಡ್​ ವೈಟ್​ ಪ್ರಿಂಟೌಟ್​ಗೆ 9 ರೂಪಾಯಿ; ಡೆಲಿವರಿ ಚಾರ್ಜ್​ 25 ರೂ. !
Follow us
TV9 Web
| Updated By: Digi Tech Desk

Updated on:Aug 22, 2022 | 12:32 PM

Blinkit :ನಿಮ್ಮ ಶಾಲಾಕಾಲೇಜು ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಆ ಹತ್ತಿರ ಇದ್ದ ಒಂದೇ ಒಂದು ಝೆರಾಕ್ಸ್​ ಅಂಗಡಿ. ಅಲ್ಲಿ ಒಬ್ಬರ ಮೇಲೊಬ್ಬರು ಮುಗಿಬಿದ್ದು ಐವತ್ತು ಪೈಸೆ, ಒಂದು ರೂಪಾಯಿ ನಾಣ್ಯ ಹಿಡಿದುಕೊಂಡು ಒಂದೊಂದು ಪ್ರತಿಗಾಗಿ ಕಾಯುತ್ತಿದ್ದದ್ದು… ಈಗಲೂ ಆ ಝೆರಾಕ್ಸ್​ ಕಾಲ ಹಾಗೇ ಇದೆ. ಜೊತೆಗೆ ಪ್ರಿಂಟರ್ ಕಾಲವೂ. ಎರಡೂ ಒಟ್ಟೊಟ್ಟಿಗೇ ಚಲಿಸುತ್ತಿವೆ. ಆದರೆ ಆನ್​ಲೈನ್​ ಕಲಿಕೆ ಶುರುವಾದಾಗಿನಿಂದ ಪ್ರಿಂಟೌಟ್​ಗೆ ಬೇಡಿಕೆ ಹೆಚ್ಛೇ ಆಯಿತು. ಮುಕ್ಕಾಲು ಜನರು ಪ್ರಿಂಟರ್​ ಅಂಗಡಿಗೆ ಓಡುವುದು ಅನಿವಾರ್ಯವಾಯಿತು. ಪ್ರಿಂಟೌಟ್​ ಕುರಿತಂತೆ ಬ್ಲಿಂಕಿಟ್​ ಪರಿಚಯಿಸಿದ ಹೊಸ ವ್ಯವಸ್ಥೆ ಅಚ್ಚರಿ ಮತ್ತು ಆಘಾತಕಾರಿ ಅನ್ನಿಸುವಂತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.  ಹಾಗಾಗಿಯೇ ನೆಟ್ಟಿಗರು ಈ ಹೊಸ ಸೌಲಭ್ಯದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನಸಿ ಮತ್ತು ನಿತ್ಯಬಳಕೆಯ ಸಾಮಾನುಗಳನ್ನು ವಿತರಿಸುವ ಬ್ಲಿಂಕಿಟ್​ ಅಪ್ಲಿಕೇಶನ್ (ಹಳೆಯ ಹೆಸರು ಗ್ರೋಫರ್ಸ್) ಹೊಸ ಪ್ರಿಂಟ್‌ಔಟ್ ಸೌಲಭ್ಯವನ್ನು ಆರಂಭಿಸಿದೆ. ಕಪ್ಪುಬಿಳುಪಿನ ಪ್ರತಿ ಪುಟಕ್ಕೆ ರೂ. 9, ಬಣ್ಣದ ಪುಟಕ್ಕೆ ರೂ.19 ಶುಲ್ಕ ವಿಧಿಸಿದೆ. ಸದ್ಯ ಗುರುಗ್ರಾಮ್‌ನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ಪ್ರತಿ ಪ್ರಿಂಟಿಂಗ್ ಆರ್ಡರ್‌ಗೆ ರೂ. 25 ವಿತರಣಾ ಶುಲ್ಕ ಪ್ರತ್ಯೇಕವಾಗಿರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಬೆಲೆಯ ವಿವರ ನೋಡಿ ಬೆಚ್ಚಿಬಿದ್ದಿದ್ದಾರೆ. ಮುದ್ರಣ ಮಳಿಗೆಗಳಲ್ಲಿ ಎರಡೂ ಬದಿ ಮುದ್ರಣ ವೆಚ್ಚ ಕೇವಲ ರೂ. ಎರಡರಿಂದ ಮೂರು. ಆದರೆ ಬ್ಲಿಂಕಿಟ್​ನ ಈ ಯೋಜನೆ ತುಟ್ಟಿಯದ್ದಾಗಿದೆ. ಇದು ವಿಫಲವಾಗುವ ಸಾಧ್ಯತೆ ಇದೆ ಎಂಬ ಚರ್ಚೆ ನೆಟ್ಟಿಗರಲ್ಲಿ ಶುರುವಾಗಿದೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮಗೆ ಈ ಸೌಲಭ್ಯ ಸೂಕ್ತವೆನ್ನಿಸಿತೆ?

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:06 pm, Mon, 22 August 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ