ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್​ಲೈನ್​ ಚಳವಳಿ

| Updated By: ಶ್ರೀದೇವಿ ಕಳಸದ

Updated on: Jan 31, 2023 | 2:40 PM

Ber Fruit : ಜುಜುಬೆ ಇದು, ಕ್ರ್ಯಾನ್​ಬೆರ್ರಿ ತಾನೆ? ಇದು ನಮ್ಮಲ್ಲಿ ಫಲ್ಸಾ, ಇದಕ್ಕೆ ಧಮ್ನಾ ಅಂತೀವಿ... ಪುಟ್ಟಪುಟ್ಟ ಹುಳಿಸಿಹಿ ಬಾರೇಹಣ್ಣಿಗೆ ಜಗತ್ತಿನ ಮಂದಿಯೆಲ್ಲಾ ಮುಗಿಬಿದ್ದು ಬಾಯಲ್ಲಿ ನೀರೂರಿಸಿಕೊಳ್ಳುತ್ತಿದ್ದಾರೆ. ನೋಡಿ ವಿಡಿಯೋ.

ಬೇಕೇಬೇಕು ಬಾರೇಹಣ್ಣು ಬೇಕು; ಕಾವೇರಿದ ಆನ್​ಲೈನ್​ ಚಳವಳಿ
ಬಾರೇಹಣ್ಣು
Follow us on

Viral Video : ಸಿಹಿಹುಳಿಯಾದ ಈ ಬಾರೇಹಣ್ಣು, ಬೋರೆಹಣ್ಣಿನ (Ber Fruit) ಋತುಮಾನವೀಗ. ಎರಡು ವಾರಗಳ ಹಿಂದೆಯಷ್ಟೇ ಸಂಕ್ರಾಂತಿ ಸಮಯದಲ್ಲಿ ಮಾರುಕಟ್ಟೆ ತುಂಬಾ ಇವುಗಳದೇ ಸುರಿಮಳೆ. ಕಂದುಬಣ್ಣದ ಪುಟ್ಟಪುಟ್ಟ ಈ ಹಣ್ಣುಗಳು ಮುಟ್ಟಿದರೆ ಪುಳುಪುಳು ಎನ್ನುವಷ್ಟು ಮೃದು. ಈ ವಿಡಿಯೋ ನೋಡುತ್ತಿದ್ದಂತೆ ಬಾಲ್ಯದಲ್ಲಿ ಜೇಬಿನಲ್ಲಿಟ್ಟುಕೊಂಡು ಟೀಚರ್ ಕಣ್ತಪ್ಪಿಸಿ ಮೆಲ್ಲಗೆ ತಿನ್ನುತ್ತಿದ್ದ ಆ ದಿನಗಳು ನಿಮ್ಮ ಕಣ್ಣಮುಂದೆ ಖಂಡಿತ ಬರುತ್ತವೆ. ಅಷ್ಟೇ ಯಾಕೆ ಬಾಯಲ್ಲಿ ಚಿಲ್​ ಎಂದು ನೀರು ಚಿಮ್ಮದೇ ಇರದು.

ಈಗಾಗಲೇ ಈ ವಿಡಿಯೋ ಅನ್ನು ನಾಲ್ಕು ಮಿಲಿಯನ್ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನರು  ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಬಾಯಲ್ಲಿ ನೀರೂರುತ್ತಿದೆ, ನನ್ನ ಬಾಲ್ಯದ ಜಗತ್ತಿಗೆ ಕರೆದೊಯ್ದಿದ್ದಕ್ಕೆ ಧನ್ಯವಾದ. ಈ ಹಣ್ಣು ಎಲ್ಲಿ ಸಿಗುತ್ತವೆ ಎಂದಿದ್ದಾರೆ ಹಲವಾರು ಜನರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಈ ಹಣ್ಣನ್ನು ನಮ್ಮ ಕಾಶ್ಮೀರದಲ್ಲಿ ಫಲ್ಸಾ ಎನ್ನುತ್ತಾರೆ ಎಂದಿದ್ದಾರೆ ಒಬ್ಬರು. ಅದಕ್ಕೆ ಅವರು ಅಲ್ಲ ಫಲ್ಸಾ ಜಾಂಬಳಿ ಬಣ್ಣದ್ದಿರುತ್ತವೆ ಎಂದಿದ್ದಾರೆ. ಮರಾಠಿಯಲ್ಲಿ ಧಮ್ನಾ ಎನ್ನುತ್ತಾರೆ ಇವಕ್ಕೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ಧಮ್ನಾ ಅಲ್ಲ, ಬೋರ್​ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ‘ಚಂದ್ರನ ಬಳಿ ಸಿಲುಕಿಕೊಂಡಿದ್ದೇನೆ’; ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದ ಮುಂಬೈ ಪೊಲೀಸರು

ಇದು ಕ್ರ್ಯಾನ್​ಬೆರ್ರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇಲ್ಲ ಇದು ಜುಜುಬೆ ಎಂದು ಹೇಳಿದ್ದಾರೆ ಇನ್ನೊಬ್ಬರು. ಹೌದು ಇದು ಇಂಡಿಯನ್​ ಜುಜುಬೆ ಹಣ್ಣು ಎಂದು ಮತ್ತೂ ಒಬ್ಬರು ಹೇಳಿದ್ದಾರೆ. ಪಹೇಲಿ ಸಿನೆಮಾದಲ್ಲಿ ಈ ಹಣ್ಣು ನೋಡಿದಾಗಿನಿಂದ ನನಗೆ ತಿನ್ನಬೇಕು ಎನ್ನಿಸುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಸಿಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಎಲ್ಲಿ ಸಿಗುತ್ತದೆ ಅಡ್ರೆಸ್​ ಹೇಳಿ ಎಂದು ಮತ್ತೊಬ್ಬರು. ಇದು ನನ್ನ ಬಾಲ್ಯದ ಸಿಹಿಯಾದ ನೆನಪು ಎಂದು ಮಗದೊಬ್ಬರು. ನಮ್ಮ ತೋಟದಲ್ಲಿ ನೂರು ಗಿಡಗಳಿವೆ ಎಂದು ಒಬ್ಬರು. ದಯವಿಟ್ಟು ಕಳಿಸಿಕೊಡಿ ಎಂದು ಅನೇಕರು ಅವರಿಗೆ ಮುಗಿಬಿದ್ದಿದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಈ ಹಣ್ಣಿಗೆ ಏನೆನ್ನುತ್ತಾರೆ ಎನ್ನುವುದರ ಚರ್ಚೆ ಸಾಕಷ್ಟು ಜೋರಾಗಿ ನಡೆದಿದೆ. ಆಹಾ ಎಷ್ಟೊಂದು ವೈವಿಧ್ಯತೆ!

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:36 pm, Tue, 31 January 23