ಸೋಷಿಯಲ್ ಮೀಡಿಯಾದಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಎಂಬುದು ಯಾರಿಗೂ ಗೊತ್ತಿರಲ್ಲ. ಕೆಲವರ ವಿಡಿಯೋ ಅಚಾನಕ್ ಆಗಿ ವೈರಲ್ ಆದರೆ, ಇನ್ನೂ ಕೆಲವರು ವೈರಲ್ ಆಗಲೆಂದೇ ವಿಡಿಯೋ ಮಾಡುತ್ತಾರೆ. ಹೀಗೆ ಎಲ್ಲರನ್ನು ಮೆಚ್ಚಿಸಲೆಂದು ಮಾಡುವ ಸಾಹಸಗಳಿಂದ ಅನೇಕರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಅಂತಹದ್ದೇ ಅನಾಹುತವೊಂದನ್ನು ಮಾಡಿಕೊಂಡಿದ್ದಾನೆ ಯುವ ಬೈಕರ್.
ಹೌದು, ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗುವ ಹುಚ್ಚಿಗೆ ದುಸ್ಸಾಹಸಕ್ಕೆ ಕೈ ಹಾಕಿದ್ದನು. ಅದರಂತೆ ಬೈಕ್ನಲ್ಲಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ಹೈವೆ ರಸ್ತೆಯಲ್ಲಿ ವೇಗವಾಗಿ ಬೈಕ್ ಬಂದ ಈತ ಅದರ ಮೇಲೆ ನಿಂತುಕೊಂಡು ಸಾಹಸ ಮೆರೆಯಲು ಮುಂದಾಗಿದ್ದಾನೆ. ಈ ವೇಳೆ ಸಮತೋಲನ ತಪ್ಪುತ್ತಿರುವುದನ್ನು ಅರಿತ ಆತ ಬೈಕ್ ಮೇಲೆ ಕೂರಲು ಯತ್ನಿಸಿದ್ದಾನೆ. ಅದಾಗಲೇ ವೇಗದಲ್ಲಿದ್ದ ಬೈಕ್ ಮುಂದಕ್ಕೆ ಹೋದರೆ ಸವಾರ ರೋಡ್ನಲ್ಲಿ ಬಿದಿದ್ದ.
ಈ ವೀಡಿಯೋವನ್ನು ಮಹಿಚೌಧರಿ 8570 ಎಂಬವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ (ಬೈಕ್ ಸ್ಟಂಟ್ ವಿಡಿಯೋ) ಗೆ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಯುವಕರು ತಮ್ಮ ಜೀವವನ್ನು ಹೀಗೆ ಪಣಕ್ಕಿಡಬಾರದು ಎಂದು ಅನೇಕರು ಬುದ್ದಿಮಾತು ಹೇಳುತ್ತಿದ್ದಾರೆ.