‘ದೋಸೆ ಮಾಡೋದಕ್ಕಿಂತ ಚೆಲ್ಲೋದೇ ಜಾಸ್ತಿಯಾಯ್ತಲ್ಲಣ್ಣೋ’ ನೆತ್ತಿಗೇರಿದ ನೆಟ್ಟಿಗರ ಕೋಪ

| Updated By: ಶ್ರೀದೇವಿ ಕಳಸದ

Updated on: May 16, 2023 | 2:40 PM

Dosa : ಇವ ದೋಸೆ ಹುಯ್ಯುವ ರೀತಿಗೆ ಬ್ಯಾಕ್ಟೀರಿಯಾಗಳೂ ಆತ್ಮಹತ್ಯೆ ಮಾಡಿಕೊಂಡುಬಿಡುತ್ತವೆ! ಅಣ್ಣಾ, ಈ ಕೆಲಸ ನೀ ಬಿಟ್ಟುಬಿಡು, ಸಣ್ಣಮಕ್ಕಳು ನಿನ್ನನ್ನು ಅನುಕರಿಸಿದರೆ ಗತಿ ಏನು? ನೆಟ್ಟಿಗರು ಪರಿಪರಿಯಾಗಿ ಪ್ರತಿಕ್ರಿಯಿಸಿದ್ದಾರೆ.

ದೋಸೆ ಮಾಡೋದಕ್ಕಿಂತ ಚೆಲ್ಲೋದೇ ಜಾಸ್ತಿಯಾಯ್ತಲ್ಲಣ್ಣೋ ನೆತ್ತಿಗೇರಿದ ನೆಟ್ಟಿಗರ ಕೋಪ
ಜೈಪುರದ ದೋಸಾ ಕೆಫೆಯಲ್ಲಿ ದೋಸೆ ಮಾಡುವ ಪರಿ!
Follow us on

Viral Video : ಜೈಪುರದ ಮಾಲ್ವಿಯಾನಗರದ ದೋಸಾ ಕೆಫೆಯಲ್ಲಿ ಹೀಗೆ ಅದ್ಭುತವಾಗಿ ಈತ ರವೆದೋಸೆ ಮಾಡುತ್ತಿದ್ದಾನೆ. ಅವನ ಈ ಕೌಶಲವನ್ನು ನೀವು ಕಣ್ಣಾರೆ ನೋಡಲೇಬೇಕು. ನೆಟ್ಟಿಗರು ಇವನ ಮೇಲೆ ಯಾಕೆ ಇಷ್ಟೊಂದು ಕೋಪಗೊಂಡಿದ್ದಾರೆ ಎನ್ನುವ ಸತ್ಯ ಅರ್ಥವಾಗುತ್ತದೆ. ಫುಡ್ ಬ್ಲಾಗರ್​ ರೇಕಿಬ್ ಅಲಮ್​ ಎನ್ನುವವರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಏ. 9ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 2 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಆಹಾ ದೋಸೆ ಎನ್ನುವ ಬದಲು ಏನಾಗಿದೆಯೋ ನಿನಗೆ, ಇಷ್ಟೊಂದು ಹಿಟ್ಟು ಹಾಳು ಮಾಡುತ್ತಿದ್ದೀಯಾ, ಎಲ್ಲಿಂದ ಕಲಿತೆ ಹೀಗೆ ದೋಸೆ ಮಾಡುವುದನ್ನು ಎಂದು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ.

ಇದನ್ನೂ ಓದಿ : ಅಮ್ಮ ಎಲ್ಲಿ ಹೋದಳೋ?; ಪರ್ವಾಗಿಲ್ಲ, ಫೀಡಿಂಗ್​ ಟಂಬ್ಲರಮ್ಮ ಇದಾಳಲ್ಲ

ಶೇ. 80 ರಷ್ಟು ತವಾ ಮೇಲಿದೆ, ಶೇ. 20 ರಷ್ಟು ವ್ಯರ್ಥವಾಗುತ್ತಿದೆ. ಇವನಿಗೆ ಕೆಲಸ ಕೊಟ್ಟವರು ಗಮನಿಸುತ್ತಿಲ್ಲವೆ? ಎಂದು ಕೇಳಿದ್ದಾರೆ ಕೆಲವರು. ವೇಗವಾಗಿ ಮಾಡಿದರೂ ಹಿಟ್ಟು ವ್ಯರ್ಥವಾಗದಂತೆ ಮಾಡಪ್ಪಾ ಎಂದು ಅನೇಕರು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

ಇಷ್ಟು ಕೆಟ್ಟದಾಗಿ ದೋಸೆ ಮಾಡುವುದನ್ನು ಈತನಕ ಎಲ್ಲಿಯೂ ನೋಡಿಲ್ಲ. ರವೆದೋಸೆ ತಿನ್ನುವ ಆಸೆಯೇ ಕಡಿಮೆಯಾಯಿತು ಎಂದು ಒಬ್ಬರು ಬೇಸರಿಸಿಕೊಂಡಿದ್ದಾರೆ. ಅಣ್ಣಾ ನೀನು ದೋಸೆ ಮಾಡುವುದಕ್ಕಿಂತ ಮೊದಲು ಶುಚಿತ್ವವನ್ನು ರೂಢಿಸಿಕೊಂಡರೆ ಒಳ್ಳೇಯದು ಎಂದಿದ್ದಾರೆ ಮತ್ತೊಬ್ಬರು. ಹೀಗೆ ದೋಸೆ ಹುಯ್ದರೆ ನಿನಗೆ ಯಾರಾದರೂ ಬಹುಮಾನ ಕೊಡುತ್ತೇನೆಂದು ಹೇಳಿದ್ದಾರೋ ಏನೋ? ಎಂದು ಕೇಳಿದ್ದಾರೆ ಮಗದೊಬ್ಬರು.

ಇದನ್ನು ಓದಿ : ಆಮ್​ರಸ್​ ಚೀಝ್​ ದೋಸೆ; ಕೊಲ್ಲಬೇಡಿರೋ ದೋಸೆಯನ್ನು ಎನ್ನುತ್ತಿರುವ ನೆಟ್ಟಿಗರು

ಬ್ಯಾಕ್ಟೀರಿಯಾಗಳು ಸೋಂಕು ತಗುಲಿ ಸತ್ತೇ ಹೋಗುತ್ತವೇ ಇವ ದೋಸೆ ಮಾಡುವ ರೀತಿಗೆ ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಮೂರ್ಖತನದ ಪರಮಾವಧಿ ಮೊದಲು ಇವನನ್ನು ಓಡಿಸಬೇಕು. ಇಲ್ಲವಾದರೆ ದೋಸೆ ಮಾಡುವ ವಿಧಾನ ಹೀಗೆಯೇ ಎಂದು ತಿಳಿದುಕೊಳ್ಳುತ್ತದೆ ಯುವಪೀಳಿಗೆ ಎಂದಿದ್ದಾರೆ ಇನ್ನೂ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:40 pm, Tue, 16 May 23