Viral Video : ಲಗಾನ್ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಗ್ರೇಸಿ ಸಿಂಗ್ ಅಭಿನಯದ ಈ ಹಾಡನ್ನು ಹೇಗೆ ಮರೆಯಲು ಸಾಧ್ಯ? ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಉದಿತ್ ನಾರಾಯಣ್, ಆಶಾ ಭೋಸ್ಲೆ ಹಾಡಿರುವ ಈ ಹಾಡಿಗೆ ಅದೆಷ್ಟೋ ಜನರು ದನಿಯಾಗಿದ್ದಾರೆ. ಹೆಜ್ಜೆ ಹಾಕಿದ್ದಾರೆ. ಮತ್ತೂ ಮತ್ತೂ ಈ ಹಾಡು ಕೇಳುಗರನ್ನು ನೋಡುಗರನ್ನು ಮರುಳು ಮಾಡುತ್ತಲೇ ಇರುತ್ತದೆ. ಅಂಥ ಛಂದದ ಸಾಹಿತ್ಯ, ಸಂಗೀತ ಇದಕ್ಕಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಹಾಡಿಗೆ ಈ ಬೆಡಗಿ ನರ್ತಿಸಿದ ರೀತಿ ಆನಂದಿಸಿ.
ನೆಟ್ಟಿಗರನೇಕರು ಈಕೆಯ ನೃತ್ಯವನ್ನು ನೋಡಿ ವಾಹ್ ಎಂದಿದ್ದಾರೆ. ಯಾರೋ ಒಬ್ಬರು, ಅರೆ ರಾಧಾ ನಿಮ್ಮ ಹೈಟ್ ಎಷ್ಟು ಎಂದು ಕಾಲೆಳೆದಿದ್ದಾರೆ. ಇಂಥಾ ಬಿಸಿಲಿಲ್ಲ ಮಹಡಿ ಮೇಲೆ ಅದೂ ಇಂಥ ಬಟ್ಟೆ ಹಾಕಿಕೊಂಡು ಅದು ಹೇಗೆ ನರ್ತಿಸಿದ್ದೀರಿ ರಾಧೇ? ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ನೃತ್ಯ ನನಗೆ ತುಂಬಾ ಇಷ್ಟವಾಯಿತು ಎಂದು ಮಗದೊಬ್ಬರು ಹೇಳಿದ್ಧಾರೆ.
ಇದನ್ನೂ ಓದಿ : ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ
2001 ರಲ್ಲಿ ಬಿಡುಗಡೆಯಾದ ಈ ಸಿನೆಮಾಗೆ ಫಿಲ್ಮ್ ಫೇರ್ ಅವಾರ್ಡ್, ಬೆಸ್ಟ್ ಲಿರಿಸಿಸ್ಟ್ ಅವಾರ್ಡ್ ಸಂದಿದೆ. 22 ವರ್ಷಗಳ ನಂತರವೂ ಈ ಹಾಡು ಇನ್ನೂ ಈ ಪೀಳಿಗೆಯನ್ನು ಹಿಡಿದಿಟ್ಟಿದೆ ಎಂದರೆ!? ಇದು ಭಾರತೀಯ ಸಿನೆಮಾಗಳ ವೈಶಿಷ್ಟ್ಯತೆ. ಭಾರತೀಯ ಕಲಾಪ್ರಕಾರಗಳಿಂದ ಪೋಷಿತವಾದ ನಮ್ಮ ಸಿನೆಮಾಗಳನ್ನು ವಿದೇಶಿಗರು ಕೂಡ ಅಷ್ಟೇ ಆಸ್ಥೆಯಿಂದ ಇಂದಿಗೂ ನೋಡುತ್ತಾರೆ. ನಮ್ಮ ಕಲೆ ಸಂಸ್ಕೃತಿಯ ಹಿರಿಮೆ ಇದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:07 pm, Sat, 13 May 23