Viral Video: ಸ್ಕೂಬಾ ಡೈವಿಂಗ್​ಗೆ ಸಿದ್ದವಾಗುತ್ತಿದ್ದ ಮಹಿಳೆ ನುಂಗಲು ಬಂದ ಶಾರ್ಕ್, ಕೂದಲೆಳೆ ಅಂತರದಲ್ಲಿ ಬಚಾವ್

ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ತಯಾರಾಗಿ ನಿಂತಿದ್ದ ಮಹಿಳೆ ಇನ್ನೇನು ಸಮುದ್ರಕ್ಕೆ ಜಂಪ್ ಮಾಡಬೇಕು ಎನ್ನುವಾಗಲೇ ಆಕೆ ತನ್ನ ಜೀವನದಲ್ಲೇ ಎಂದೂ ಅನುಭವಿಸದ ಅಪಾಯಕಾರಿ ಅನುಭವವನ್ನು ಪಡೆದಿದ್ದಾಳೆ.

Viral Video: ಸ್ಕೂಬಾ ಡೈವಿಂಗ್​ಗೆ ಸಿದ್ದವಾಗುತ್ತಿದ್ದ ಮಹಿಳೆ ನುಂಗಲು ಬಂದ ಶಾರ್ಕ್, ಕೂದಲೆಳೆ ಅಂತರದಲ್ಲಿ ಬಚಾವ್
ವೈರಲ್ ವಿಡಿಯೋನ ದೃಶ್ಯ

Updated on: Mar 18, 2023 | 7:42 AM

ಕರ್ನಾಟಕ ರತ್ನ, ನಗುವಿನ ಒಡೆಯ ದಿ. ಡಾ. ಪುನೀತ್ ರಾಜ್​ಕುಮಾರ್(Puneeth Rajkumar) ಅವರ ಗಂಧದ ಗುಡಿ(Gandhadagudi) ಚಿತ್ರ ನೋಡಿದ ಬಹುತೇಕ ಮಂದಿಗೆ ಪುನೀತ್ ಅವರು ಮಾಡಿದ ಸ್ಕೂಬಾ ಡೈವಿಂಗ್( Scuba Diving) ನೋಡಿ ನಾವು ಕೂಡ ಒಮ್ಮೆ ಇದನ್ನು ಟೈ ಮಾಡಬೇಕು ಎನ್ನಿಸಿಯೇ ಇರುತ್ತೆ. ಸ್ಕೂಬಾ ಡೈವಿಂಗ್ ಒಂದು ವಿಶಿಷ್ಟ ಅನುಭವ. ಎಂದೂ ಕಾಣದ ಸಮುದ್ರದಾಳದೊಳಗಿನ ಜೀವ ರಾಶಿಯ ನೋಡುವ ವಿಸ್ಮಯ ಕ್ಷಣ. ಇದು ಎಷ್ಟು ಅದ್ಭುತವೂ ಅಷ್ಟೇ ಭಯಾನಕ ಕೂಡ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಅದು ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.

ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ತಯಾರಾಗಿ ನಿಂತಿದ್ದ ಮಹಿಳೆ ಇನ್ನೇನು ಸಮುದ್ರಕ್ಕೆ ಜಂಪ್ ಮಾಡಬೇಕು ಎನ್ನುವಾಗಲೇ ಆಕೆ ತನ್ನ ಜೀವನದಲ್ಲೇ ಎಂದೂ ಅನುಭವಿಸದ ಅಪಾಯಕಾರಿ ಅನುಭವವನ್ನು ಪಡೆದಿದ್ದಾಳೆ. ಇನ್ನೇನು ಸಮುದ್ರಕ್ಕೆ ಇಳಿಯಬೇಕು ಎನ್ನುವಾಗಲೇ ಸಡನ್ ಆಗಿ ಬಂದ ಶಾರ್ಕ್ ಬಾಯಿ ತೆರೆದು ಆಕೆಯನ್ನು ನುಂಗಲು ಯತ್ನಿಸಿದೆ. ತಕ್ಷಣ ಎಚ್ಚೆತ್ತ ಮಹಿಳೆ ಹಿಂದೆ ಸರಿದಿದ್ದಾಳೆ. ಸಾವಿನ ದವಡೆಯಿಂದ ಮಹಿಳೆ ಪಾರಾಗಿದ್ದಾಳೆ. ಈ ವಿಡಿಯೋ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Shark: ಡಾಲ್ಫಿನ್​ಗಳೊಂದಿಗೆ ನದಿಯಲ್ಲಿ ಈಜುತ್ತಿದ್ದ ಬಾಲಕಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಶಾರ್ಕ್​ ಮೀನು

ಮಾರ್ಚ್ 17ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:41 am, Sat, 18 March 23