‘ಮಾಡಿದ್ದುಣ್ಣೋ ಮಹರಾಯ’ ಅನ್ನೋ ಉತ್ತಮವಾದ ಹಳೆಯ ಗಾದೆಯನ್ನ ಈ ವಿಡಿಯೊ ಚೆನ್ನಾಗಿ ವಿವರಿಸುತ್ತದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಾಮನ್ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ, ಅದರಲ್ಲಿ ಯಾರೋ ಒಬ್ಬ ಮರವನ್ನು ಬೀಳಿಸಲು ನಿರಂತರವಾಗಿ ಕಾಲಿನಿಂದ ಒದೆಯುವುದನ್ನು ಕಾಣಬಹುದು. ಆದರೆ, ಒದೆಯುತ್ತಿರುವವನಿಗೆ ಅದರ ಫಲಿತಾಂಶ ಏನಾಗಬಹುದು ಎಂಬ ಕಲ್ಪನೆಯೇ ಇರಲಿಲ್ಲ!
‘ಈಡಿಯಟ್ಸ್ ಫೈಟಿಂಗ್ ಥಿಂಗ್ಸ್‌ನ’ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ಈ 14 ಸೆಕೆಂಡುಗಳ ವಿಡಿಯೊದಲ್ಲಿ ಒಬ್ಬ ಮನುಷ್ಯ ಮರ ಒಂದನ್ನ ಕೆಳಕ್ಕೆ ಎಳೆಯಲು ನಿರಂತರವಾಗಿ ಕಾಲಿನಿಂದ ಒದೆಯುತ್ತಾನೆ. ಕೊನೆಯಲ್ಲಿ ಮರವು ಬೀಳುವಾಗ, ಅದು ಅವನ ಮೇಲೆಯೇ ಬೀಳುತ್ತದೆ, ಅವನು ಗಾಯಗೊಳ್ಳುತ್ತಾನೆ.
“ನೀವು ಏನೇ ಮಾಡಿದರೂ ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ ಎಲ್ಲವೂ ನಿಮಗೆ ಹಿಂತಿರುಗುತ್ತದೆ” ಎಂದು ಸುಧಾ ರಾಮನ್ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
“ಅದು ಕರ್ಮ” ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನೀವು ಮಾಡುವ ದುಷ್ಟತೆಯು ನಿಮ್ಮೊಂದಿಗೇ ಉಳಿಯುತ್ತದೆ ಮತ್ತೆ ನೀವು ಮಾಡುವ ಒಳ್ಳೆಯ ಕೆಲಸ ನಿಮ್ಮ ಬಳಿಗೆ ಮರಳಿ ಬರುತ್ತದೆ ” ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೊ ಇಲ್ಲಿದೆ:
ಇದನ್ನೂ ನೋಡಿ: Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡಬಲ್ಲ ಚಿತ್ರವಿದು, ಇದರಲ್ಲಿ ಹಿಮ ಚಿರತೆಯನ್ನು ಹುಡುಕಿ ನೋಡೋಣ!
ಇದನ್ನೂ ನೋಡಿ: Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್
(Viral Video of tree falling on a man)