Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?

| Updated By: ಸಾಧು ಶ್ರೀನಾಥ್​

Updated on: Sep 06, 2022 | 10:28 PM

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ.

Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ಭಾರೀ ಗಾತ್ರದ ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
Follow us on

ವೈರಲ್ ವಿಡಿಯೋ: ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ.

ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ. ತಮ್ಮ ಮೇಲೆ ದಾಳಿ ಮಾಡಲು ಬರುವ ಪ್ರಾಣಿಗಳನ್ನು ವಿರೋಧಿಸುತ್ತವೆ. ಇಬ್ಬರ ನಡುವೆ ಘೋರ ಕಾಳಗ ನಡೆದರೂ ಕೊನೆಗೆ ಜೀವಿಯೊಂದನ್ನು ಬಲಿ ಕೊಡಬೇಕಾಗುತ್ತದೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ದುಃಖಕರವಾಗಿದ್ದರೆ, ಮತ್ತೆ ಕೆಲವು ಆಘಾತಕಾರಿ.

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ. ಆದರೆ ಸಮಯಕ್ಕೆ ಸರಿಯಾಗಿ ನಾಯಿಯ ಕಿರುಚಾಟವನ್ನು ಕಂಡು ಸ್ಥಳೀಯರು ಸಹಾಯ ಮಾಡಿದರು.

ಹಾವು ಹಿಡಿಯುವವರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿದ್ದರಿಂದ ಜಾಣತನದಿಂದ ಹಾವಿನ ಕಡಿತದಿಂದ ನಾಯಿಯನ್ನು ರಕ್ಷಿಸಿದ್ದಾರೆ. ಬಳಿಕ ನಾಗರ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾಕೆ ತಡ, ವಿಡಿಯೋ ನೋಡಿ.