ಈ ಗಿಳಿಗೆ ಬಾತ್ರೂಮ್​ ಸಿಂಗರ್ ಎನ್ನಲು ಮನಸ್ಸಾದೀತೆ; ನಶೆಗೆ ಬಿದ್ದೀರಿ ಜೋಕೆ

| Updated By: ಶ್ರೀದೇವಿ ಕಳಸದ

Updated on: Nov 09, 2022 | 1:17 PM

Parrot Sings : ನೆಟ್ಟಿಗರ ಪ್ರಕಾರ ಈ ಗಿಳಿ ಹಾಡುತ್ತಿರುವುದು ಸ್ಪ್ಯಾನಿಷ್ ಹಾಡು, ಮಿರಿಯಮ್ ಹೆರ್ನಾಂಡೆಝ್​ನ ‘ಎಲ್ ಹೊಂಬ್ರೆ ಕ್ಯು ಯೊ ಅಮೊ’. ಈ ಗಿಳಿಯ ಹಾಡಿನೊಂದಿಗೆ ಮಿರಿಯಮ್​ ಹಾಡನ್ನೂ ಕೇಳಬಹುದು. ಹುಚ್ಚು ಹಿಡೀಬಹುದು ಹುಷಾರು!

ಈ ಗಿಳಿಗೆ ಬಾತ್ರೂಮ್​ ಸಿಂಗರ್ ಎನ್ನಲು ಮನಸ್ಸಾದೀತೆ; ನಶೆಗೆ ಬಿದ್ದೀರಿ ಜೋಕೆ
Follow us on

Viral Video : ನಮಗೆ ಸಂತೋಷವಾದಾಗ ಏನು ಮಾಡುತ್ತೇವೆ? ನಮ್ಮಷ್ಟಕ್ಕೆ ನಮಗರಿವಿಲ್ಲದೆಯೇ ಹಾಡಿಕೊಳ್ಳುತ್ತೇವೆ. ಎಲ್ಲಿ ಹಾಡಿಕೊಳ್ಳುತ್ತೇವೆ? ಸಾಮಾನ್ಯವಾಗಿ ಬಾತ್ರೂಮಿನಲ್ಲಿಯೂ. ಈಗ ಈ ಗಿಳಿಯೂ ನಾನೇನು ಕಡಿಮೆ ಎಂದು ಬಾತ್ರೂಮಿನಲ್ಲಿ ಮನಬಿಚ್ಚಿ ಹಾಡಿಕೊಳ್ಳುತ್ತಿದೆ. ಇದಕ್ಕೆ ಹೇಗೆ ತಿಳಿಯಿತೋ ಕಮೋಡ್​ನ ಅಕಾಸ್ಟಿಕ್​ ಚೆನ್ನಾಗಿರುತ್ತದೆ ಎಂದು? ಏಕೆಂದರೆ ಸಾಕಷ್ಟು ಕಲಾವಿದರು ಹೀಗೆ ಬಾತ್ರೂಮಿನ ಅಕಾಸ್ಟಿಕ್​ಗೆ ಮೊರೆ ಹೋಗುವುದುಂಟು.

ಮೈನವಿರೇಳಿಸುವಂತಿಲ್ಲವೆ ಇದರ ಧ್ವನಿ, ಏರಿಳಿತ, ಲಯ, ಮಾಧುರ್ಯ ಮತ್ತು ಭಾವ… ಈಗಾಗಲೇ ಈ ವಿಡಿಯೋ ಅನ್ನು 7,50,000 ಜನರು ನೋಡಿದ್ದಾರೆ. 23,500 ಜನರು ಮೆಚ್ಚಿದ್ದಾರೆ. ಒಮ್ಮೆ ಕೇಳಿದರೆ ಇಡೀ ದಿನ ಗುಂಗಿಗೆ ಈ ಧ್ವನಿ ಕೆಡವುವಲ್ಲಿ ಸಂದೇಹವೇ ಇಲ್ಲ. ಎಂಥ ಗತಿ ಇದೆ ಇದರ ಹಾಡಿನಲ್ಲಿ. ಅದೆಷ್ಟು ಸಲ ಇದು ಮೂಲ ಹಾಡನ್ನು ಕೇಳಿರಬಹುದು? ನೆಟ್ಟಿಗರ ಪ್ರಕಾರ ಈ ಗಿಳಿ ಹಾಡುತ್ತಿರುವುದು ಸ್ಪ್ಯಾನಿಷ್ ಹಾಡು. ಮಿರಿಯಮ್ ಹೆರ್ನಾಂಡೇಝ್ ಹಾಡಿರುವ ಎಲ್ ಹೊಂಬ್ರೆ ಕ್ಯು ಯೊ ಅಮೊ.

 

ಗಿಳಿಗಳು ಮನುಷ್ಯನ ಮಾತನ್ನು, ಧ್ವನಿಯನ್ನು, ಹಾಡನ್ನು ಅತ್ಯಂತ ಸಮರ್ಥವಾಗಿ ಅನುಕರಿಸುವ ಪಕ್ಷಿಗಳು. ಇವುಗಳ ಬುದ್ಧಿವಂತಿಕೆಗೆ ಯಾರೂ ಮಾರುಹೋಗಲೇಬೇಕು. ಹಾಗಾಗಿ ಜಗತ್ತಿನಾದ್ಯಂತ ಅನೇಕರು ಗಿಳಿಗಳನ್ನು ಸಾಕುತ್ತಾರೆ. ಎಂಥ ಚೆಂದ ಅಲ್ಲವೆ? ಆದರೂ ಬಾತ್ರೂಮಿನಲ್ಲಿ ಹಾಡಿದ ಗಿಳಿಯ ಹಾಡು ಕೇಳಿ, ಇದು ಸಾಧ್ಯವೇ? ಎಂಬ ಅನುಮಾನ ಬಂದಿತು. ಆಗ ಇಂಟರ್​ನೆಟ್​ನಲ್ಲಿ ಮತ್ತಷ್ಟು ಗಿಳಿಗಳ ಹಾಡುಗಳನ್ನು ಕೇಳಲಾಗಿ…

ಬೆಕ್ಕುಗಳೂ ಕೂಡ ಹೀಗೆಯೇ ತಮ್ಮ ಪಾಡಿಗೆ ತಾವು ಹಾಡಿಕೊಳ್ಳುತ್ತವೆ ಎಂದು ಅನೇಕರು ಟ್ವೀಟ್ ಮಾಡಿ ವಿಡಿಯೋ ಹಾಕಿದ್ದಾರೆ. ಕೆಲವರು ತಮ್ಮ ಗಿಳಿಗಳು ಹಾಡಿದ್ದನ್ನು ಟ್ವೀಟ್ ಮಾಡಿದ್ಧಾರೆ. ಏನೇ ಹೇಳಿ ಬಾತ್ರೂಮಿನ ಗಿಳಿಯ ಹಾಡಿನ ಗುಂಗು ಮಾತ್ರ ನಶೆ ಹಿಡಿಸಿದೆ. ನಂಬಲಾಗದಷ್ಟು ರಮ್ಯ!

ಏನನ್ನಿಸಿತು ಇದೆಲ್ಲವನ್ನೂ ನೋಡಿದ ನಿಮಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:06 pm, Wed, 9 November 22