Video Viral: ಕಿಕ್ಕಿರಿದು ತುಂಬಿದ ರೈಲಿನಲ್ಲಿ ನೇತಾಡುತ್ತಾ ಪ್ರಯಾಣ; ಎದೆ ನಡುಕ ಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ

|

Updated on: May 21, 2024 | 1:58 PM

ವೈರಲ್​​ ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆಯರು ಕಿಕ್ಕಿರಿದು ತುಂಬಿದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ, ಮತ್ತು ಆಕೆಯನ್ನು ರೈಲಿನ ಒಳಗೆ ತಳ್ಳುತ್ತಾನೆ. ನಂತರ, ಭಾರವಾದ ಲ್ಯಾಗೇಜ್​ ಬ್ಯಾಗ್​​ ಜೊತೆಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

Video Viral: ಕಿಕ್ಕಿರಿದು ತುಂಬಿದ ರೈಲಿನಲ್ಲಿ ನೇತಾಡುತ್ತಾ ಪ್ರಯಾಣ; ಎದೆ ನಡುಕ ಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ
Follow us on

ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ರೈಲಿನಲ್ಲಿ ಬಾಗಿಲಿನ ಹೊರಗೂ ಜನರು ನೇತಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋ ಕಂಡು ನೆಟ್ಟಿಗರು ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ವೈರಲ್​​ ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆಯರು ಕಿಕ್ಕಿರಿದು ತುಂಬಿದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ, ಮತ್ತು ಆಕೆಯನ್ನು ರೈಲಿನ ಒಳಗೆ ತಳ್ಳುತ್ತಾನೆ. ನಂತರ, ಭಾರವಾದ ಲ್ಯಾಗೇಜ್​ ಬ್ಯಾಗ್​​ ಜೊತೆಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

@IndianTechGuide ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಮೇ 20ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ವಿಡಿಯೋ 2.5 ಮಿಲಿಯನ್​​ ಅಂದರೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ