ಚೆನ್ನೈ: ವಿದ್ಯಾಭ್ಯಾಸದ ಜೊತೆಗೆ ಪಾರ್ಟ್ ಟೈಂ ಕೆಲಸ ಮಾಡುತ್ತಾ ಕುಟುಂಬಕ್ಕೆ ನೆರವಾಗುತ್ತಿರುವ ತಮಿಳುನಾಡಿನ ಯುವಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ತರುಲ್ ರಾಯನ್ ಸಂಜೆಯ ಹೊತ್ತಿನಲ್ಲಿ ಬೀದಿ ಬದಿಯಲ್ಲಿ ಸಣ್ಣ ಫುಡ್ ಸ್ಟಾಲ್ ಇಟ್ಟುಕೊಂಡು ಆರ್ಥಿಕವಾಗಿ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾರೆ.
ಅಮೆರಿಕದ ಖ್ಯಾತ ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಗೂಗಲ್ ಮ್ಯಾಪ್ ಸಹಾಯದಿಂದ ತರುಲ್ ರಾಯನ್ ನಡೆಸುತ್ತಿದ್ದ ಫುಡ್ ಸ್ಟಾಲ್ಗೆ ಭೇಟಿ ಕೊಟ್ಟಿದ್ದು, ಈ ಯುವಕ ಪಿಎಚ್‌ಡಿ ವಿದ್ಯಾರ್ಥಿ ಎಂದು ತಿಳಿದು ಲೂಯಿಸ್ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ವ್ಲಾಗರ್ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
Respect 🔥🔥🔥 Such Stories Need to be Shared Widely. Have an Inspiring Day Ahead…#FI pic.twitter.com/i9vOBZqGJS
— Fundamental Investor ™ 🇮🇳 (@FI_InvestIndia) September 3, 2024
ಇದನ್ನೂ ಓದಿ: ವ್ಯಾಪಾರಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು 8.5 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ವಿಡಿಯೋದಲ್ಲಿ ಯುವಕ “ನೀವು ನನ್ನ ಹೆಸರನ್ನು ಗೂಗಲ್ ಮಾಡಿದರೆ, ನನ್ನ ಸಂಶೋಧನಾ ಲೇಖನಗಳು ಸಿಗುತ್ತವೆ” ಎಂದು ಹೇಳಿರುವುದು ಸೆರೆಯಾಗಿದೆ. ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಲ್ಲಿ ಬಯೋಟೆಕ್ನಾಲಜಿಯಲ್ಲಿ ರಾಯನ್ ಪಿಎಚ್‌ಡಿ ಮಾಡುತ್ತಿದ್ದು, ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಪಾರ್ಟ್ ಟೈಂ ಫುಡ್ ಸ್ಟಾಲ್ ಇಟ್ಟುಕೊಂಡಿರುವುದಾಗಿ ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ