Video: ನೀವು ಮೊಮೊಸ್ ಪ್ರೀಯರಾ? ಈ ವಿಡಿಯೋ ನೋಡಿದ ಮೇಲೂ ನಿಮ್ಮ ಅಭಿಪ್ರಾಯ ಬದಲಾಗೋದಿಲ್ಲವಾ?

ಮೊಮೊಸ್ ಇಷ್ಟ ಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಮೊಮೊಸ್ ಪ್ರೀಯರಾಗಿದ್ದು ಅದರ ರುಚಿಯನ್ನು ಇಷ್ಟಪಡುತ್ತಾರೆ. ಅಂತವರಲ್ಲಿ ನೀವು ಒಬ್ಬರಾ? ಹಾಗಿದ್ದರೆ, ಈ ವೀಡಿಯೊವನ್ನು ನೀವು ನೋಡಲೇ ಬೇಕು. ಇದನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯ ಹಾಗೆಯೇ ಇರುತ್ತದೆಯೋ ಅಥವಾ ಬದಲಾಗುತ್ತದೆಯೋ ಎಂಬುದನ್ನು ನೀವೇ ನೋಡಿ. ಮೊಮೊಸ್ ತಯಾರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರೆಲ್ ಆಗಿದ್ದು ಮೊಮೊಸ್ ಪ್ರೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ನೀವೇ ನೋಡಿ.

Video: ನೀವು ಮೊಮೊಸ್ ಪ್ರೀಯರಾ? ಈ ವಿಡಿಯೋ ನೋಡಿದ ಮೇಲೂ ನಿಮ್ಮ ಅಭಿಪ್ರಾಯ ಬದಲಾಗೋದಿಲ್ಲವಾ?
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 8:07 PM

ಇತ್ತೀಚಿನ ದಿನಗಳಲ್ಲಿ, ಮೊಮೊಸ್ ಇಷ್ಟ ಪಡುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಮೊಮೊಸ್ ಪ್ರೀಯರಾಗಿದ್ದು ಅದರ ರುಚಿಯನ್ನು ಇಷ್ಟಪಡುತ್ತಾರೆ. ಅಂತವರಲ್ಲಿ ನೀವು ಒಬ್ಬರಾ? ಹಾಗಿದ್ದರೆ, ಈ ವೀಡಿಯೊವನ್ನು ನೀವು ನೋಡಲೇ ಬೇಕು. ಇದನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯ ಹಾಗೆಯೇ ಇರುತ್ತದೆಯೋ ಅಥವಾ ಬದಲಾಗುತ್ತದೆಯೋ ಎಂಬುದನ್ನು ನೀವೇ ನೋಡಿ. ಮೊಮೊಸ್ ತಯಾರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರೆಲ್ ಆಗಿದ್ದು ಮೊಮೊಸ್ ಪ್ರೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ನೀವೇ ನೋಡಿ.

ಮಧ್ಯಪ್ರದೇಶದ ಜಬಲ್ಪುರದ ಒಂದು ಪ್ರದೇಶದಲ್ಲಿ ಮೊಮೊಸ್ ತಯಾರಿಸುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನೀವು ಇದನ್ನು ನೋಡಿದ ಮೇಲೆ ಎಂದಿಗೂ ಮೊಮೊಸ್ ತಿನ್ನುವುದಿಲ್ಲ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಮೊಸ್ ತಯಾರಿಸಲು ಹಿಟ್ಟನ್ನು ಕಲಸುತ್ತಿರುವುದನ್ನು ನೀವು ನೋಡಬಹುದಾಗಿದೆ. ಇದರಲ್ಲಿ ವಿಶೇಷ ಏನಿದೆ ಎನಿಸಬಹುದು, ಆದರೆ ಆತ ಹಿಟ್ಟು ಕಲುಸುತ್ತಿರುವುದು ಕೈಗಳಿಂದಲ್ಲ, ಬದಲಾಗಿ ಆತನ ಪಾದಗಳಿಂದ. ಹೌದು, ನಿಜ ಆತ ಒಂದು ದೊಡ್ಡ ಪಾತ್ರೆಯಲ್ಲಿ ಹಿಟ್ಟನ್ನು ಹಾಕಿ ಅದರೊಳಗೆ ನಿಂತು ತನ್ನ ಪಾದಗಳಿಂದ ಹಿಟ್ಟನ್ನು ಮೆಟ್ಟುತ್ತಿದ್ದಾನೆ. ಈ ವೈರಲ್ ವೀಡಿಯೊ ನೋಡಿದ ಅಲ್ಲಿನ ಸ್ಥಳೀಯ ನಾಗರಿಕರು ಮತ್ತು ಇತರರು ಆ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್​ಗಳ ಕಿತ್ತಾಟ, ಈ ದೃಶ್ಯ ನೋಡಿ ನೆಟ್ಟಿಗರು ಸುಸ್ತೋ ಸುಸ್ತು

ವೈರಲ್​​ ವಿಡಿಯೋ ಇಲ್ಲಿದೆ  ನೋಡಿ:

ಜಬಲ್ಪುರದ ಬರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜಸ್ಥಾನದ ಇಬ್ಬರು ಯುವಕರಾದ ರಾಜ್ ಕುಮಾರ್ ಗೋಸ್ವಾಮಿ ಮತ್ತು ಸಚಿನ್ ಗೋಸ್ವಾಮಿ ಮೊಮೊಸ್ ಅಂಗಡಿ ನಡೆಸುತ್ತಿದ್ದರು. ಈ ಇಬ್ಬರು ಯುವಕರು ರಾಜಸ್ಥಾನದ ಜೋಧಪುರ ನಿವಾಸಿಗಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ರಾಜೇಂದ್ರ ಜಬಲ್ಪುರದ ಬರ್ಗಿ ಪ್ರದೇಶದ ಚೌಕ್ಸೆ ಎಂಬ ವ್ಯಕ್ತಿಯ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು ಜೊತೆಗೆ ಅಲ್ಲಿಂದಲೇ ತಮ್ಮ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ವಿಡಿಯೋ ನೋಡಿದ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲನೆ ಮಾಡದ ಹಿನ್ನಲೆಯಲ್ಲಿ, ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ