Viral Video: ಪಿಎಚ್‌ಡಿ ಮಾಡುತ್ತಲೇ ಬೀದಿಬದಿ ಸಣ್ಣ ಫುಡ್​​​ ಸ್ಟಾಲ್​ ಇಟ್ಟುಕೊಂಡು ಕುಟುಂಬಕ್ಕೆ ನೆರವಾಗುತ್ತಿರುವ ಯುವಕ

ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಲ್ಲಿ ಬಯೋಟೆಕ್ನಾಲಜಿಯಲ್ಲಿ ರಾಯನ್ ಪಿಎಚ್‌ಡಿ ಮಾಡುತ್ತಿದ್ದು, ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಪಾರ್ಟ್ ಟೈಂ ಫುಡ್​​​ ಸ್ಟಾಲ್​ ಇಟ್ಟುಕೊಂಡಿರುವುದಾಗಿ ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ.

Viral Video: ಪಿಎಚ್‌ಡಿ ಮಾಡುತ್ತಲೇ ಬೀದಿಬದಿ ಸಣ್ಣ ಫುಡ್​​​ ಸ್ಟಾಲ್​ ಇಟ್ಟುಕೊಂಡು ಕುಟುಂಬಕ್ಕೆ ನೆರವಾಗುತ್ತಿರುವ ಯುವಕ
Follow us
|

Updated on: Sep 08, 2024 | 11:56 AM

ಚೆನ್ನೈ: ವಿದ್ಯಾಭ್ಯಾಸದ ಜೊತೆಗೆ ಪಾರ್ಟ್ ಟೈಂ ಕೆಲಸ ಮಾಡುತ್ತಾ ಕುಟುಂಬಕ್ಕೆ ನೆರವಾಗುತ್ತಿರುವ ತಮಿಳುನಾಡಿನ ಯುವಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ತರುಲ್ ರಾಯನ್ ಸಂಜೆಯ ಹೊತ್ತಿನಲ್ಲಿ ಬೀದಿ ಬದಿಯಲ್ಲಿ ಸಣ್ಣ ಫುಡ್​​​ ಸ್ಟಾಲ್​ ಇಟ್ಟುಕೊಂಡು ಆರ್ಥಿಕವಾಗಿ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾರೆ.

ಅಮೆರಿಕದ ಖ್ಯಾತ ವ್ಲಾಗರ್‌ ಕ್ರಿಸ್ಟೋಫರ್ ಲೂಯಿಸ್ ಗೂಗಲ್ ಮ್ಯಾಪ್‌ ಸಹಾಯದಿಂದ ತರುಲ್ ರಾಯನ್ ನಡೆಸುತ್ತಿದ್ದ ಫುಡ್​​​ ಸ್ಟಾಲ್​​ಗೆ ಭೇಟಿ ಕೊಟ್ಟಿದ್ದು, ಈ ಯುವಕ ಪಿಎಚ್‌ಡಿ ವಿದ್ಯಾರ್ಥಿ ಎಂದು ತಿಳಿದು ಲೂಯಿಸ್ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ವ್ಲಾಗರ್‌ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವ್ಯಾಪಾರಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು 8.5 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ವಿಡಿಯೋದಲ್ಲಿ ಯುವಕ “ನೀವು ನನ್ನ ಹೆಸರನ್ನು ಗೂಗಲ್ ಮಾಡಿದರೆ, ನನ್ನ ಸಂಶೋಧನಾ ಲೇಖನಗಳು ಸಿಗುತ್ತವೆ” ಎಂದು ಹೇಳಿರುವುದು ಸೆರೆಯಾಗಿದೆ. ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಲ್ಲಿ ಬಯೋಟೆಕ್ನಾಲಜಿಯಲ್ಲಿ ರಾಯನ್ ಪಿಎಚ್‌ಡಿ ಮಾಡುತ್ತಿದ್ದು, ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಪಾರ್ಟ್ ಟೈಂ ಫುಡ್​​​ ಸ್ಟಾಲ್​ ಇಟ್ಟುಕೊಂಡಿರುವುದಾಗಿ ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ