Viral Video: ಆತ ಕಳ್ಳನೆಂದು ಹಿಡಿದು ಥಳಿಸಿದರು; ಆಕ್ರೋಶ ತಣ್ಣಗಾಗದ ಸ್ಥಳೀಯರು ಮಾಡಿದ್ದೇನು ಗೊತ್ತಾ?
ಆತ ಕಳ್ಳನೆಂದು ಸಾರ್ವಜನಿಕರು ಹಿಡಿದು ಥಳಿಸಿ, ತಲೆ ಬೋಲಿಸಿ ಚರಂಡಿ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ ಕಳ್ಳನೆಂದು ಶಂಕಿಸಿ ಸ್ಥಳೀಯರು ಯುವಕನೊಬ್ಬನನ್ನು ಥಳಿಸಿ, ತಲೆ ಬೋಲಿಸಿ ಅಮಾನವೀಯ ಕೃತ್ಯ ಎಸಗಿದ ವಿಡಿಯೋ ವೈರಲ್ ಆಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದ್ದು, ತಲೆ ಬೋಲಿಸಿದ ನಂತರ ಚರಂಡಿಯನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಕಳ್ಳತನ ಶಂಕೆ ಹಿನ್ನೆಲೆ ಶಕೀಲ್ ಎಂಬ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ” ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಆರೋಪಿಗಳು ವ್ಯಕ್ತಿಯ ತಲೆಯನ್ನು ಬೋಳಿಸಿ ಚರಂಡಿಯನ್ನು ಉಪಯೋಗಿಸುವಂತೆ ಮಾಡಿದ್ದಾರೆ. ಪಿಟಿಐನಲ್ಲಿನ ವರದಿಯ ಪ್ರಕಾರ, ಮನೆಯೊಂದರಿಂದ ನೀರಿನ ಪಂಪ್ ಅನ್ನು ಕದಿಯುವಾಗ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ತನಿಖೆಯಿಂದ ಪ್ರಕಟಿಸಲಾಗಿದೆ.
ಭಾರತೀಯ ದಂಡನೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ), 355 (ವ್ಯಕ್ತಿಯನ್ನು ಅವಮಾನಿಸಲು ಕ್ರಿಮಿನಲ್ ಬಲವನ್ನು ಬಳಸಲಾಗಿದೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ, ಕೃತ್ಯದ ವಿಡಿಯೋ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.
A 28 year old man was allegedly tied to a pole, thrashed, hair chopped on suspicion of theft in North Delhi’s Wazirabad area. Locals didn’t inform the police and even made him clean drains to repent his crime. Video credits : @anilattri1981 pic.twitter.com/tLoFoCsgdV
— Sakshi Chand (@SakshiChand08) August 19, 2022
ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Sat, 20 August 22