ಒಂದು ಕಾಲದಲ್ಲಿ ಮಕ್ಕಳು ಕೇವಲ 2-3 ಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಬ್ಯಾಗ್ ತೆರೆದು ನೋಡಿದರೆ ಅದರಲ್ಲಿ ಕೈ ಹಾಕಲು ಸ್ಥಳವಿಲ್ಲದಷ್ಟು ಪುಸ್ತಕಗಳು ತುಂಬಿರುತ್ತವೆ. 15-20 ಕೆಜಿ ತೂಕವಿರುವ ಚಿಕ್ಕ ಮಕ್ಕಳು 5 ರಿಂದ 6 ಕೆಜಿ ತೂಕದ ಶಾಲಾ ಬ್ಯಾಗ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಸ್ಥಿತಿ ಈಗಿನದ್ದು. ಇಷ್ಟು ಭಾರದ ಶಾಲಾ ಬ್ಯಾಗ್ ಅನ್ನು ಪಾಪ ಸಣ್ಣ ಮಕ್ಕಳಾದರೂ ಹೇಗೆ ಹೆಗಲಿಗೆ ಹಾಕಿಕೊಂಡು ನಡೆದುಕೊಂಡು ಹೋದಾರು? ಅಯ್ಯಯ್ಯೋ ಕಷ್ಟಪ್ಪಾ ಕಷ್ಟ. ಇಷ್ಟು ಭಾರದ ಚೀಲವನ್ನು ಹೊತ್ತುಕೊಂಡು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂಬುದು ಮಕ್ಕಳಿಗೆ ಗೊತ್ತು. ಈ ಸಂಬಂಧದಲ್ಲಿ ಅನೇಕ ಬಾರಿ ಮಕ್ಕಳು ಅಸಮತೋಲನ ಕಳೆದುಕೊಂಡು ಬೀಳುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಇದನ್ನು ನೋಡಿದಾಗ ಒಂದು ಕ್ಷಣ ನಿಮ್ಮ ಮುಖದಲ್ಲಿ ನಗು ಬಂದರೂ ಸಹ ನೀವು ಆ ಮಗುವಿನ ಮೇಲೆ ಅನುಕಂಪ ತೋರದೆ ಇರಲಾರಿರಿ.
ವಾಸ್ತವವಾಗಿ ಈ ವಿಡಿಯೋ ಒಂದು ಸಣ್ಣ ಮಗು ತನ್ನ ಬೆನ್ನಿನ ಮೇಲೆ ಭಾರವಾದ ಚೀಲವನ್ನು ಹೊತ್ತೊಯ್ಯುವ ಪ್ರಕ್ರಿಯೆಯನ್ನು ತೋರಿಸುತ್ತದೆ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಚಿಕ್ಕ ಮಗುವಿನ ಬೆನ್ನಿಗೆ ಶಾಲಾ ಬ್ಯಾಗ್ ಹಾಕುತ್ತಿರುತ್ತಾನೆ. ನಂತರ ಇನ್ನೇನು ಆತನ ಕೈ ಹಿಡಿದು ನಡೆಯೋಣ ಎನ್ನುವಷ್ಟರಲ್ಲಿ ಬಾಲಕ ಚೀಲದ ಭಾರಕ್ಕೆ ಸಮತೋಲನ ಕಳೆದುಕೊಂಡು ಹಿಂದಕ್ಕೆ ಬೀಳುತ್ತಾನೆ. ಕೂಡಲೇ ಆ ವ್ಯಕ್ತಿ ಬಾಲಕನನ್ನು ಎತ್ತುತ್ತಾನೆ. ಈ ವೀಡಿಯೋ ನೋಡಿದ ನಂತರ ಯಾರಿಗಾದರೂ ಮಗುವಿನ ಮೇಲೆ ಕರುಣೆ ಬರದೆ ಇರಲು ಸಾಧ್ಯವೇ? ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಭಾರವನ್ನು ಹೊರಬೇಕು. ಅಂತಹ ಪರಿಸ್ಥಿತಿಯಲ್ಲಿ ಬಾಲಕನ ಮನಸ್ಸು ಹೇಗೆ ಅಧ್ಯಯನದಲ್ಲಿ ತೊಡಗುತ್ತದೆ?
ಸುಮಾರು 1-2 ಶಾಲೆಗಳಷ್ಟೇ ಅಲ್ಲ ಬಹುತೇಕ ಎಲ್ಲ ಶಾಲೆಯ ಮಕ್ಕಳ ಸ್ಥಿತಿಯೂ ಇದೇ ಆಗಿದೆ. ಆ ಪ್ರೊಜೆಕ್ಟ್, ಈ ಪ್ರೊಜೆಕ್ಟ್, ಅ ನೋಟ್ಸ್, ನೋಟ್ಸ್ ಅಂತೆಲ್ಲಾ ಹೇಳಿಕೊಂಡು ಪುಸ್ತಕ ತರಲು ಶಾಲೆಯಲ್ಲಿ ಹೇಳುತ್ತಾರೆ. ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕ ಪಡೆಯಬೇಕು ಅಂತ ಯೋಚಿಸಿ ಬ್ಯಾಗ್ ತುಂಬಾ ಪುಸ್ತಕವನ್ನು ತುಂಬಿಸಿ ಕಳುಹಿಸುತ್ತಾರೆ. ಅದನ್ನು ಹೊತ್ತು ಸಾಗಿಸುವ ಮಕ್ಕಳ ಕಷ್ಟ ಯಾರು ಕೇಳುವವರು ಅಲ್ವಾ?
ಜನರನ್ನು ಭಾವುಕರನ್ನಾಗಿಸಿರುವ ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ಪ್ರಹ್ಲಾದ್ ಮೀನಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ 6 ಸೆಕೆಂಡುಗಳ ಈ ವೀಡಿಯೊವನ್ನು ಜನರು ಇಷ್ಟಪಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.
"बस्तों के बोझ तले दबता बचपन" pic.twitter.com/pG0afsDjmU
— Prahlad Meena / प्रहलाद मीना, IPS (@IPS_Prahlad) September 21, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ