Viral Video: ಆಟಿಕೆ ಮಾರುತ್ತಿದ್ದ ಮಗುವನ್ನು ನೋಡಿ ಅಪ್ಪಿಕೊಂಡ ಮತ್ತೊಂದು ಮುದ್ದಾದ ಮಗು; ಕ್ಯೂಟ್ ವಿಡಿಯೊ ವೈರಲ್

ಇಬ್ಬರ ಮಕ್ಕಳು ಒಬ್ಬರನ್ನೊಬ್ಬರು ನೋಡಿ ನಕ್ಕು ಅಪ್ಪಿಕೊಂಡ ಕ್ಯೂಟ್ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮುದ್ದಾದ ಮಗುವಿನ ರಿಯಾಕ್ಷನ್ ಮನಗೆಲ್ಲುವುದಂತೂ ಸತ್ಯ.

Viral Video: ಆಟಿಕೆ ಮಾರುತ್ತಿದ್ದ ಮಗುವನ್ನು ನೋಡಿ ಅಪ್ಪಿಕೊಂಡ ಮತ್ತೊಂದು ಮುದ್ದಾದ ಮಗು; ಕ್ಯೂಟ್ ವಿಡಿಯೊ ವೈರಲ್
ಆಟಿಕೆ ಮಾರುತ್ತಿದ್ದ ಮಗುವನ್ನು ನೋಡಿ ಅಪ್ಪಿಕೊಂಡ ಮತ್ತೊಂದು ಮುದ್ದಾದ ಮಗು
Edited By:

Updated on: Nov 17, 2021 | 9:23 AM

ಮಕ್ಕಳು ಪರಿಶುದ್ಧ ಮನಸ್ಸುಳ್ಳವರು. ಮುಗ್ಧ ಮಕ್ಕಳಿಗೆ ಯಾರ ಬಗ್ಗೆಯೂ ಅಸಹ್ಯ ಭಾವ ಇರುವುದಿಲ್ಲ. ಆ ಮುದ್ದಾದ ಮಗುವಿನ ನಗು ಸಾಕು ಎಲ್ಲ ಬೇಸರವನ್ನು ಮರೆಯಲು. ಇದೀಗ ನಿಮಗೂ ಇಷ್ಟವಾಗುವ ಕ್ಯೂಟ್​ ವಿಡಿಯೊವೊಂದು ಫುಲ್​ ವೈರಲ್​ ಆಗಿದೆ. ಇಬ್ಬರ ಮಕ್ಕಳು ಒಬ್ಬರನ್ನೊಬ್ಬರು ನೋಡಿ ನಕ್ಕು ಅಪ್ಪಿಕೊಂಡ ಕ್ಯೂಟ್ ವಿಡಿಯೊ (Cute Video) ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ಇಬ್ಬರು ಮುದ್ದಾದ ಮಗುವಿನ ರಿಯಾಕ್ಷನ್ ಮನಗೆಲ್ಲುವುದಂತೂ ಸತ್ಯ. ವಿಡಿಯೊ ಇದೆ ನೀವೇ ನೋಡಿ. ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊವನ್ನು ಇಷ್ಟಪಟ್ಟಿದ್ದಾರೆ. ಮಕ್ಕಳ ಪ್ರೀತಿ ಮತ್ತು ಮುಗ್ಧತೆ ತುಂಬಾ ಮುದ್ದಾಗಿ ವ್ಯಕ್ತವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕರು ಹೃದಯದ ಎಮೋಜಿಗಳನ್ನು ಕಳುಹಿಸುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಅಮ್ಮನ ಜೊತೆ ಒಂದು ಮುದ್ದಾದ ಮಗು ಆಟಿಕೆಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಬಹುದು. ಮತ್ತೊಂದು ಮಗುವನ್ನು ನೋಡಿ ಸಂತೋಷಗೊಂಡು ನೃತ್ಯ ಮಾಡಲು ಪ್ರಾರಂಭಿಸಿದೆ. ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಸಂತೋಷಪಟ್ಟಿದ್ದಾರೆ. ಇವರಿಬ್ಬರ ಕ್ಯೂಟ್ ರಿಯಾಕ್ಷನ್ ನೆಟ್ಟಿಗರು ಮನ ಗೆದ್ದಿದೆ.

ತುಂಬಾ ಮುದ್ದಾಗಿದೆ ವಿಡಿಯೊ ಎಂದು ಮತ್ತೋರ್ವರು ಹೇಳಿದ್ದಾರೆ. ಇಬ್ಬರು ಮಕ್ಕಳ ನಡುವಿನ ಬಾಂಧವ್ಯ, ಸ್ನೇಹ ಹಾಗೆಯೇ ಇರಲಿ ಎಂದು ಇನ್ನೋರ್ವರು ಹೇಳಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಒಬ್ಬರು ಮಕ್ಕಳ ಮುಗ್ಧತೆಯ ಬಗ್ಗೆ ನೆಟ್ಟಿಗರು ಸಾಕಷ್ಟು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral Video: ಹನುಮಂತನ ಪಾದಕ್ಕೆ ನಮಸ್ಕರಿಸಿ ದೇವಸ್ಥಾನದ ಹುಂಡಿಯ ಹಣವನ್ನೇ ಕದ್ದೊಯ್ದ ಕಳ್ಳ! ವಿಡಿಯೊ ವೈರಲ್​

Viral Video: ತಿಂಡಿ ಪ್ಯಾಕೇಟ್​ ಕದಿಯಲು ಹೋಗಿ ಸಿಸಿ ಕ್ಯಾಮರಾ ಮುಂದೆ ಕಳ್ಳನ ಬ್ರೇಕ್ ಡಾನ್ಸ್! ವಿಡಿಯೊ ಮಜವಾಗಿದೆ ನೀವೇ ನೋಡಿ