Viral Video: ಸ್ನೇಹಿತನಿಗೆ ಹೆದರಿಸಿ ತಮಾಷೆ ಮಾಡಲು ವಿಚಿತ್ರ ವೇಷ ಧರಿಸಿದ ವ್ಯಕ್ತಿ; ಮಜವಾದ ವಿಡಿಯೊ ನೋಡಿ

TV9 Digital Desk

| Edited By: shruti hegde

Updated on: Nov 16, 2021 | 2:56 PM

ಸ್ನೇಹಿತನಿಗೆ ಹೆದರಿಸಲು ಬಿಳಿ ಬಣ್ಣದ ವಸ್ತ್ರ ತೊಟ್ಟು ನಿಂತ ವ್ಯಕ್ತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಮಾಷೆಯ ವಿಡಿಯೊ ನೀವೂ ನೋಡಿ.

Viral Video: ಸ್ನೇಹಿತನಿಗೆ ಹೆದರಿಸಿ ತಮಾಷೆ ಮಾಡಲು ವಿಚಿತ್ರ ವೇಷ ಧರಿಸಿದ ವ್ಯಕ್ತಿ; ಮಜವಾದ ವಿಡಿಯೊ ನೋಡಿ
ಸ್ನೇಹಿತನಿಗೆ ಹೆದರಿಸಲು ಬಿಳಿ ಬಣ್ಣದ ವಸ್ತ್ರ ತೊಟ್ಟು ನಿಂತ ವ್ಯಕ್ತಿ

ಸ್ನೇಹಿತನಿಗೆ ತಮಾಷೆ ಮಾಡಲು ಮನುಷ್ಯಾಕೃತಿಯ ವೇಷ ಧರಿಸಿದ ವ್ಯಕ್ತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೊ ಜನರನ್ನು ನಗೆ ಗಡಲಲ್ಲಿ ತೇಲಿಸಿದೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ನಿಮಗೂ ನಗು ತರಿಸುತ್ತದೆ. ಮಜವಾದ ವಿಡಿಯೊ ಇದೆ ನೀವೇ ನೋಡಿ. ವಿಡಿಯೊವನ್ನು ಇತ್ತೀಚೆಗೆ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಮೊದಲಿಗೆ ಯೂಟ್ಯೂಬ್​ನಲ್ಲಿ ಹಂಚಿಕೊಂಡ ವಿಡಿಯೊ ಬಳಿಕ ಇತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಬಿಳಿ ಬಟ್ಟೆಯ ವೇಷವನ್ನು ಧರಿಸಿಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಮನುಷ್ಯನಾಕೃತಿಯ ಬಟ್ಟೆ ಧರಿಸಿದ ವ್ಯಕ್ತಿ ಮೂಲೆಯಲ್ಲಿ ಹೋಗಿ ಮಲಗಿಕೊಳ್ಳುತ್ತಾನೆ. ಆಗ ತಾನೆ ಕೋಣೆಯೊಳಗೆ ಬಂದ ಸ್ನೇಹಿತ ಮನುಷ್ಯನಾಕೃತಿಯ ಕಾಲು ಕೈ ಹೀಗೆ ಒಂದೊಂದೇ ಭಾಗವನ್ನು ಎತ್ತಿ ಬದಿಗಿಡುತ್ತಾನೆ. ಕೆಳಗೆ ಮಲಗಿಕೊಂಡಿದ್ದ ಆಕೃತಿಯನ್ನೂ ಸಹ ಮೇಲೆತ್ತಲು ಪ್ರಯತ್ನಿಸುತ್ತಾನೆ.

View this post on Instagram

A post shared by YouTube (@youtube)

ಇದ್ದಕ್ಕಿದ್ದಂತೆ ವಿಚಿತ್ರ ಬಟ್ಟೆ ಧರಿಸಿದ ವ್ಯಕ್ತಿ ಮಾತನಾಡಲು ಪ್ರಾರಂಭಿಸಿದ್ದಾನೆ. ಭಯಗೊಂಡ ಸ್ನೇಹಿತ ಕೆಳಗೆ ಬಿದ್ದಿದ್ದಾನೆ. ವ್ಯಕ್ತಿ ಕೂತು ಬಿದ್ದು ಬಿದ್ದು ನಕ್ಕ ವಿಡಿಯೊ ಇದೀಗ ಸಕತ್​ ವೈರಲ್​ ಆಗಿದೆ. ಈ ತಮಾಷೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಪೋಸ್ಟ್ ಮಾಡಿದ ಬಳಿಕ ಎರಡು ಲಕ್ಷಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಸಂಗ್ರಹಿಸಿದೆ. ಜನರು ತಮಾಷೆಯ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನನ್ನ ಅಣ್ಣ ಮತ್ತು ನಾನು ಎಂದು ಓರ್ವರು ಹೇಳಿದ್ದಾರೆ. ಇನ್ನು ಕೆಲವರು ತಮ್ಮ ಸ್ನೇಹಿತನಿಗೆ ಭಯಬೀಳಿಸಿದ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಘಟಂ ತಾಳವಾದ್ಯದ ಜೊತೆ ಮನಿಕೆ ಮಗೆ ಹಿತೆ ಹಾಡು; ವೈರಲ್ ಆಯ್ತು ವಿಡಿಯೊ

Viral Video: ತಿಂಡಿ ಪ್ಯಾಕೇಟ್​ ಕದಿಯಲು ಹೋಗಿ ಸಿಸಿ ಕ್ಯಾಮರಾ ಮುಂದೆ ಕಳ್ಳನ ಬ್ರೇಕ್ ಡಾನ್ಸ್! ವಿಡಿಯೊ ಮಜವಾಗಿದೆ ನೀವೇ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada