Video: ಟ್ರಕ್ ಓವರ್ಟೇಕ್ ಮಾಡೋಕೆ ಹೋಗಿ ಕೊಂಚ ಸ್ಲಿಪ್ ಆಗಿದ್ರೂ ಪ್ರಪಾತಕ್ಕೆ ಬೀಳ್ತಿದ್ದ ಬೈಕ್ ಸವಾರ! ಶಾಕಿಂಗ್ ವಿಡಿಯೊ ವೈರಲ್
ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯು ತೇವವಾಗಿತ್ತು. ಜೊತೆಗೆ ಕೆಸರಿನಿಂದ ತುಂಬಿತ್ತು. ಟ್ರಕ್ನ್ನು ಹಿಂದಿಕ್ಕಿ ಮುಂದಕ್ಕೆ ಸಾಗಬೇಕು ಅನ್ನುವಷ್ಟರಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪ್ರಪಾತದ ಅಂಚಿನಲ್ಲಿ ಬೈಕ್ ಸವಾರ ವಾಲಿದ್ದಾನೆ.
ಸಾಮಾನ್ಯವಾಗಿ ಸವಾರರು ಬೈಕ್ (Biker) ಓಡಿಸುವಾಗ ಓವರ್ಟೇಕ್ ಮಾಡಿ ಮುನ್ನುಗ್ಗಬೇಕು ಎಂಬ ಕುತೂಹಲದಲ್ಲಿರುತ್ತಾರೆ. ಆದರೆ ಕೆಲವು ಬಾರಿ ಏನೆಲ್ಲಾ ಅಪಾಯ ಉಂಟಾಗಬಹುದು ಎಂಬ ಸಂದೇಶ ಸಾರುವ ಅದೆಷ್ಟೋ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ವೈರಲ್ ಆದ ವಿಡಿಯೊ ನೋಡಿದಾಕ್ಷಣ ಒಮ್ಮೆಲೆ ಭಯವಾಗುವುದಂತೂ ಸತ್ಯ. ಶ್ರೀನಗರದಿಂದ (Srinagar) ಲಡಾಕ್ಗೆ (Ladakh) ಹೋಗುತ್ತಿದ್ದಾಗ ಬೈಕ್ ಸವಾರನೊಬ್ಬ ಸ್ವಲ್ಪದರಲ್ಲಿಯೇ ದೊಡ್ಡ ಅಪಘಾತದಿಂದ ಪಾರಾಗಿದ್ದಾನೆ. ಕಬ್ಬಿಣ ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ಓವರ್ಟೇಕ್ (Overtake) ಮಾಡಲು ಮುಂದಾದ ಬೈಕ್ (Bike) ಸವಾರ ನಿಯಂತ್ರಣ ತಪ್ಪಿ ಬೈಕ್ನಿಂದ ಬೀಳುತ್ತಿದ್ದ. ಹಿಂಬದಿಯಿಂದ ಬರುತ್ತಿದ್ದ ಮತ್ತೋರ್ವ ಬೈಕರ್ ವಿಡಿಯೊವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ. ಶಾಕಿಂಗ್ ವಿಡಿಯೊ (Shocking Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯು ತೇವವಾಗಿತ್ತು. ಜೊತೆಗೆ ಕೆಸರಿನಿಂದ ತುಂಬಿತ್ತು. ಟ್ರಕ್ನ್ನು ಹಿಂದಿಕ್ಕಿ ಮುಂದಕ್ಕೆ ಸಾಗಬೇಕು ಅನ್ನುವಷ್ಟರಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪ್ರಪಾತದ ಅಂಚಿನಲ್ಲಿ ಬೈಕ್ ಸವಾರ ವಾಲಿದ್ದಾನೆ. ಆತನಿಗೆ ಬೈಕ್ಅನ್ನು ನಿಯಂತ್ರಣಕ್ಕೆ ತರಲು ಸಾಧ್ಯಯವಾಗಲಿಲ್ಲ. ಬಳಿಕ ಹಿಂಬದಿಗಿದ್ದ ಮತ್ತೊರ್ವ ಬೈಕ್ ಸವಾರ ಬಂದು ಆತನಿಗೆ ಸಹಾಯ ಮಾಡಿದ್ದಾನೆ. ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಶಾಕಿಂಗ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಕಾಶ್ಮೀರ ಕಣಿವೆ ಮತ್ತು ಲಡಾಕ್ಅನ್ನು ಸಂಪರ್ಕಿಸುವ ಝೋಜಿ ಲಾ ಪಾಸ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಪರ್ವತದ ಹಾದಿಗಳಲ್ಲಿ ಒಂದು ಎಂದು ಹೇಳುತ್ತಾರೆ. ಬೈಕ್ ಅವಾರ ಟ್ರಕ್ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಹಿಂದಿದ್ದ ಮತ್ತೊರ್ವ ಬೈಕ್ ಸವಾರ ಆತನನ್ನು ಎಚ್ಚರಿಸುತ್ತಾನೆ. ಹುಷಾರು, ನಿಧಾನ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದು. ಆದರೂ ಗಮನಿಸದ ಬೈಕ್ ಸವಾರ ಟ್ರಕ್ ಓವರ್ಟೇಕ್ ಮಾಡಲು ಹೋಗಿದ್ದಾನೆ. ಆ ವೇಳೆ ಜಾರುವ ಮಣ್ಣಿಗೆ ಬೈಕ್ ನಿಯಂತ್ರಣ ತಪ್ಪಿದೆ.
ಈ ಘಟನೆ ಕಳೆದ ತಿಂಗಳು ಅಂದರೆ ಅಕ್ಟೋಬರ್ನಲ್ಲಿ ಸಂಭವಿಸಿದೆ. ರಸ್ತೆಯಲ್ಲಿ ಲೋಡ್ ಆಗಿರುವ ಟ್ರಕ್, ಲಾರಿಯಂತಹ ವಾಹನಗಳನ್ನು ಓವರ್ಟೇಕ್ ಮಾಡಲು ಮುಂದಾಗುವಾಗ ಎಚ್ಚರಿಕೆ ಎಂಬ ಸಂದೇಶವನ್ನು ಸಾರುವ ವಿಡಿಯೊ ಇದಾಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಾಹನ ಓಡಿಸುವಾಗ ಎಲ್ಲರೂ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
Shocking Video: ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್; ಶಾಕಿಂಗ್ ವಿಡಿಯೊ ವೈರಲ್
Shocking Video: ರೆಸ್ಟೋರೆಂಟ್ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!