Viral Video: ಬಕ್ರೀದ್​ಗೆ ಬಲಿ ನೀಡುವ ಕುರಿ ಮೇಲೆ ರಾಮನ ಹೆಸರು; ಮೂವರ ಬಂಧನ

ಮುಂಬೈನಲ್ಲಿ ಬಕ್ರೀದ್ ಹಬ್ಬಕ್ಕೆ ಬಲಿ ನೀಡಿದ ಕುರಿಯ ಮೇಲೆ 'ರಾಮ' ಎಂದು ಬರೆದಿರುವ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಈ ವಿಡಿಯೊ ವೈರಲ್ ಆದ ನಂತರ, ಬಜರಂಗದಳದ ಕಾರ್ಯಕರ್ತರು ದೂರು ನೀಡಲು ಪೊಲೀಸರಿಗೆ ತೆರಳಿದರು. ನಂತರ ಮಾಂಸದ ಅಂಗಡಿಯನ್ನು ಸೀಲ್ ಮಾಡಲಾಗಿದೆ.

Viral Video: ಬಕ್ರೀದ್​ಗೆ ಬಲಿ ನೀಡುವ ಕುರಿ ಮೇಲೆ ರಾಮನ ಹೆಸರು; ಮೂವರ ಬಂಧನ
ಬಲಿ ನೀಡುವ ಕುರಿ ಮೇಲೆ ರಾಮನ ಹೆಸರು

Updated on: Jun 17, 2024 | 8:43 PM

ಮುಂಬೈ: ಇಸ್ಲಾಮಿಕ್ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ (Bakrid) ಅನ್ನು ಈ ವಾರ ದೇಶ ಮತ್ತು ಪ್ರಪಂಚದಾದ್ಯಂತ ಆಚರಿಸಲಾಗುವುದು. ಇತರರಿಗೆ ತೊಂದರೆಯಾಗದಂತೆ ಅವರ ನಂಬಿಕೆಯನ್ನು ಅನುಸರಿಸುವಂತೆ ಸರ್ಕಾರ ಮತ್ತು ಆಡಳಿತವು ಜನರಿಗೆ ಸೂಚನೆ ನೀಡಿದೆ. ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಬಲಿ ನೀಡಲು ಮಾರಾಟಕ್ಕಿಟ್ಟಿದ್ದ ಕುರಿಯ ಮೇಲೆ “ರಾಮ” (Ram) ಎಂದು ಬರೆದಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆಯು ನವಿ ಮುಂಬೈ ಪ್ರದೇಶದ ಬೆಲಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿ “ಗುಡ್‌ಲಕ್ ಕುರಿ ಮಾಂಸದ ಅಂಗಡಿ”ಯಲ್ಲಿ ನಡೆದಿದೆ. ಈ ಮಟನ್ ಅಂಗಡಿಯ ಮಾಲೀಕ ಮಹಮ್ಮದ್ ಶಾಫಿ ತಮ್ಮ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬಿಳಿ ಕುರಿಯ ಮೇಲೆ ಹಳದಿ ಬಣ್ಣದಲ್ಲಿ ರಾಮ ಎಂದು ಬರೆದಿದ್ದರು. ಜೂನ್ 15 ರಂದು ಹಿಂದೂ ಸಂಘಟನೆಯ ಕೆಲವರು ಅಲ್ಲಿಗೆ ಆಗಮಿಸಿ ಅದನ್ನು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ರೀತಿ ರಾಮನ ಹೆಸರನ್ನು ಬರೆದು ಕುರಿಯನ್ನು ಬಲಿ ನೀಡುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಅವರ ಕೋರ್ಟ್​ ವಿಡಿಯೋ ಡಿಲೀಟ್ ಮಾಡಿ; ಸುನಿತಾ ಕೇಜ್ರಿವಾಲ್​ಗೆ ದೆಹಲಿ ಹೈಕೋರ್ಟ್ ಸೂಚನೆ

ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಅಧಿಕಾರಿಗಳು ಆ ಕುರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಮಟನ್ ಅಂಗಡಿಯ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪೊಲೀಸರು ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವಾಗ ಅಂಗಡಿಯ ಮಾಲೀಕರು ಮತ್ತು ಅಂಗಡಿಯಲ್ಲಿ ಜಮಾಯಿಸಿದ ಹಿಂದೂ ಗುಂಪಿನ ಸದಸ್ಯರು ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು, ಹಿಂದೂ ಸಂಘಟನೆಗಳು ಸೇರಿ ಅಪರಾಧಿಗಳ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ