ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವ್ ಏನು ಮಾಡುತ್ತಿರೋ ಗೊತ್ತಿಲ್ಲ. ನನಗೆ ಸ್ವಲ್ಪ ಕೆಲಸ ಇದೆ ನಾನು ಇವತ್ತು ಬರೊದಿಲ್ಲ ಎಂದು ಬರೆದಿರುವ ಮಾಡರ್ನ್ ಲೀವ್ ಲೆಟರ್ ಕುರಿತ ರೀಲ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಶಾಲೆ ಅಥವಾ ಕಾಲೇಜನಲ್ಲಿ ರಜೆ ಮಾಡಬೇಕೆಂದರೆ ಮೊದಲೇ ಲೀವ್ ಲೆಟರ್ ಬರೆದು ಶಿಕ್ಷಕರ ಬಳಿ ರಜೆಗಾಗಿ ಮನವಿ ಮಾಡಿಕೊಳ್ಳಬೇಕು. ರಜೆ ಮಾಡಿದ ಮರು ದಿನವೂ ಲೀವ್ ಲೆಟರ್ ಕೊಡಬೇಕಾಗುತ್ತದೆ. ನಾವೆಲ್ಲರೂ ಕಾಲೇಜ್‌ಗಿಂತ ಶಾಲಾದಿನಗಳಲ್ಲಿ ಹೆಚ್ಚಾಗಿ ಲೀವ್ ಲೆಟರ್ ಬರೆಯುತ್ತಿದೆವು ಅಲ್ವಾ. ಅದೂ ಕೂಡಾ ಶಿಸ್ತುಬದ್ಧವಾಗಿ ಲೀವ್ ಲೆಟರ್ ಬರೆದುಕೊಡುತ್ತಿದ್ದೆವು. ಆದರೆ ಇಲ್ಲೊಂದು ವೈರಲ್ ಆಗಿರುವ ಮಾಡರ್ನ್ ಲೀವ್ ಲೆಟರ್ ಇದೆ. ಈ ತಮಾಷೆಯ ಲೀವ್ ಲೆಟರ್ನಲ್ಲಿ ವಿಷಯವನ್ನು ಕೇಳಿದರೆ ನಗು ಬರುತ್ತದೆ.
ತಮಾಷೆಗೆಂದು ಈ ಮಾಡರ್ನ್ ಲೀವ್‌ಲೆಟರ್‌ನ್ನು ಇನ್‌ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ. ಈ ಲೀವ್ ಲೇಟರ್ನಲ್ಲಿ ಏನೆಲ್ಲಾ ಇತ್ತು ಎಂಬುದು ಇಲ್ಲಿದೆ.
ಮಾಡರ್ನ್ ಲೀವ್ ಲೆಟರ್
ರಿಗೆ,
ಹೆಡ್ ಮಾಸ್ಟರ್, ನಮ್ ಸ್ಕೂಲು, ನಮ್ಮ ಊರು
ಇಂದ,
ನಾನು, ನಿಮ್ ಸ್ಕೂಲು, ಇದೇ ಊರು
ವಿಷಯ: ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವು ಏನ್ ಮಾಡ್ಕೋತೀರೋ ಮಾಡ್ಕೊಳಿ, ನನಗೆ ಸ್ವಲ್ಪ ಕೆಲಸ ಇದೆ. ಇವತ್ತು ಬರೋದಿಲ್ಲ ಅಷ್ಟೆ.
ನಿಮ್ಮ ಶಿಷ್ಯ
ದಿನಾಂಕ: ಇವತ್ತೇ
ಊರು: ಇದೇ ಊರು
ಇದನ್ನು ಓದಿದವರು ನಕ್ಕು ನಲಿಯುವುದಂತು ನಿಜ. ಇದು ಲೀವ್‌ಲೆಟರ್ ಅಥವಾ ಶಿಕ್ಷಕರಿಗೆ ರಜಾ ಕೊಡುವಂತೆ ಅವಾಜ್ ಹಾಕಿದ್ದೋ ಒಂದು ತಿಳಿಯುವುದಿಲ್ಲ. ಆದರೂ ಈ ವೀಡಿಯೋ ಮಾತ್ರ ಸಕ್ಕತ್ ಮಜಾವಾಗಿದೆ. ನಿಜವಾಗಿಯೂ ಈ ರೀತಿಯ ಲೀವ್ ಲೆಟರ್‌ನ್ನು ಸ್ಕೂಲ್ ಟೀಚರ್ಸ್ಗೆ ಮಕ್ಕಳು ನೀಡಿದರೆ, ಮಕ್ಕಳಿಗೆ ಜನ್ಮದಲ್ಲಿಯೂ ರಜೆ ಸಿಗಲಿಕ್ಕಿಲ್ಲ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋ 1.8 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಹಾಗೂ ಕಮೆಂಟ್ಸ್ಗಳು ಬಂದಿದೆ. ಒಬ್ಬ ಬಳಕೆದಾರರು ಇಂತಹದ್ದೊಂದು ಪತ್ರ ಬರೆಯಬೇಕು, ಪೆನ್ ಕೊಡ್ರೋ. ಇಂತಹ ಪತ್ರ ಬರೆಯಬೇಕೆಂದರೆ ಒಂದು ಗತ್ತು ಇರಬೇಕು ಎಂದು ತಮಾಷೆಯ ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬ ಬಳಕೆದಾದರು ಈ ರೀತಿಯ ರಜಾರ್ಜಿಯನ್ನು ಬರೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇದ್ದಪ್ಪ ಲೆಟರ್ ಅಂದ್ರೆ, ಉಡಾಲ್ ಶಿಷ್ಯ ಎಂದು ಹೆಳಿದ್ದಾರೆ.