ಒಬ್ಬ ವ್ಯಕ್ತಿ ಅದೆಷ್ಟೋ ಬಾರಿ ಜೀವನದಲ್ಲಿ ಸೋಲು ಅನುಭವಿಸುತ್ತಾರೆ, ಅದೆಷ್ಟೋ ಬಾರಿ ಸಾಧನೆಯ ಓಟದಲ್ಲಿ ಹಿಂದೆಬೀಳುತ್ತಾನೆ. ಇಂಥ ಸಮಯದಲ್ಲಿ ಬೆನ್ನು ತಟ್ಟಿ ಬೆಂಬಲಿಸಲು ಒಬ್ಬರು ಇದ್ದರೆ ಅದೆಂಥ ಸೋಲು ಕೂಡ ಮನಸ್ಸಿಗೆ ಬೇಸರ ತರುವುದಿಲ್ಲ. ಸದ್ಯ ಹೇಳಲು ಹೊರಟಿರುವ ವಿಚಾರ ಏನೆಂದರೆ, ಬಾಲಕನೊಬ್ಬ ಓಟದಲ್ಲಿ ಸೋತು ನಿಂತಾಗ ಓಡಿ ಬಂದ ಅಕ್ಕ ತಬ್ಬಿಕೊಂಡು ಪ್ರೋತ್ಸಾಹಿಸಿದ್ದಾಳೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು
ಮೈದಾನದಲ್ಲಿ ಸಣ್ಣ ಮಕ್ಕಳ ಓಟದ ಸ್ಪರ್ಧೆಯನ್ನು ಆಯೋಜಿಸಿದಂತಿರುವ ವೈರಲ್ ವಿಡಿಯೋದಲ್ಲಿ, ಸಣ್ಣ ಬಾಲಕನೊಬ್ಬ ಓಟಿ ಗುರಿ ತಲುಪಲು ಸಾಧ್ಯವಾಗದೆ ಅರ್ಧದಲ್ಲೇ ನಿಂತುಬಿಡುತ್ತಾನೆ. ಈ ವೇಳೆ ಆತನ ಬಳಿ ಓಡಿ ಹೋದ ಆತನ ಸಹೋದರಿ ತಬ್ಬಿಕೊಂಡು ಪ್ರೋತ್ಸಾಹಿಸಿದ್ದಾಳೆ. ಸ್ವಲ್ಪದರಲ್ಲೇ ಆ ಬಾಲಕ ಮತ್ತೆ ಖುಷಿಯಿಂದ ಓಡಲು ಪ್ರಾರಂಭಿಸುತ್ತಾನೆ. ಈ ವೇಳೆ ಆತನ ಸಹೋದರಿ ಕೂಡ ಖುಷಿ ಪಡುವುದನ್ನು ಕಾಣಬಹುದು.
ಸಾಮಾನ್ಯವಾಗಿ ಸೋಲಿನ ಹಾದಿಯಲ್ಲಿದ್ದವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಆ ವ್ಯಕ್ತಿ ಮತ್ತೆ ಗೆಲುವಿನ ದಾರಿಯನ್ನು ನೋಡಲು ಪ್ರಾರಂಭಿಸುತ್ತಾನೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂಬಂತಿದೆ. ಈ ವಿಡಿಯೋವನ್ನು amandawinnett22 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಪಡೆದು 2.1 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 1.26 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.
ವಿಡಿಯೋ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ
ತಮ್ಮನಿಗೆ ಸಹೋದರಿಯ ಪ್ರೀತಿಯ ಅಪ್ಪುಗೆ ನೀಡುವ ವಿಡಿಯೋವನ್ನು ನೋಡಿದ ವೀಕ್ಷಕರು ಫಿದಾ ಆಗಿದ್ದು, ಕಾಮೆಂಟ್ ಬಾಕ್ಸ್ನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು “ಅವನು ಸಿದ್ಧವಾದಾಗ, ಅವಳು ಅವನನ್ನು ಹೋಗಲು ಬಿಟ್ಟಳು” ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಳೆಕೆದಾರ, “ಆ ಅಪ್ಪುಗೆ ಮತ್ತು ಕೈ ಹಹಿಡಿದ ನಂತರ ಆತ ಚೈತನ್ಯವನ್ನು ತುಂಬಿಕೊಂಡನು” ಎಂದು ಹೇಳಿದ್ದಾರೆ. “ಹೇಗೆ ಪ್ರೀತಿ ಮತ್ತು ಸಹಾನುಭೂತಿಯಿಂದ ಇರಬೇಕೆಂದು ತೋರಿಸುವ ಮೂಲಕ ಅವಳ ಪೋಷಕರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ” ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ
Published On - 2:34 pm, Sun, 26 June 22