Smriti Irani: ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ತಾವು ಮಾಡಿದ್ದ ಜಾಹೀರಾತಿನ ವಿಡಿಯೋ ಹಂಚಿಕೊಂಡ ಸ್ಮೃತಿ ಇರಾನಿ

|

Updated on: May 05, 2023 | 11:49 AM

ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ, ತಮ್ಮ ದೈನಂದಿನ ಜೀವನ ಹಾಗೂ ವೃತ್ತಿ ಜೀವನದ ಆಸಕ್ತಿದಾಯಕ ಪೋಸ್ಟ್​ಗಳು ಹಾಗೂ ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.

Smriti Irani: ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ತಾವು ಮಾಡಿದ್ದ ಜಾಹೀರಾತಿನ ವಿಡಿಯೋ ಹಂಚಿಕೊಂಡ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us on

ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ, ತಮ್ಮ ದೈನಂದಿನ ಜೀವನ ಹಾಗೂ ವೃತ್ತಿ ಜೀವನದ ಆಸಕ್ತಿದಾಯಕ ಪೋಸ್ಟ್​ಗಳು ಹಾಗೂ ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ. ಸ್ಮೃತಿ ಇರಾನಿ ಆಗಾಗ ತಮ್ಮ ಹಳೆಯ ನೆನಪುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಮತ್ತು ವಿಶೇಷವಾಗಿ ತಮ್ಮ ನಟನೆಯ ದಿನಗಳು ಮತ್ತು ಶೂಟಿಂಗ್‌ಗೆ ಸಂಬಂಧಿಸಿದ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.  ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಈ ವೇಳೆ ಸ್ಮೃತಿ ಇರಾನಿ ತಮ್ಮ ಮೊದಲ ಜಾಹೀರಾತಿನ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸ್ಮೃತಿ ಇರಾನಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೇಗವಾಗಿ ವೈರಲ್ ಆಗುತ್ತಿದೆ.
ಕುತೂಹಲಕಾರಿ ಸಂಗತಿಯೆಂದರೆ, ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಜನರು ಹಿಂದೆ ಸರಿಯುತ್ತಿದ್ದ  ಸಂದರ್ಭದಲ್ಲಿ 25 ವರ್ಷಗಳ ಹಿಂದೆ ಸ್ಮೃತಿ ಇರಾನಿ ಯಾವುದೇ ಹಿಂಜರಿಕೆಯಿಲ್ಲದೆ ಜಾಹೀರಾತೊಂದನ್ನು ಮಾಡಿದ್ದರು. ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದ ಜಾಹೀರಾತು ಅದಾಗಿದೆ.’

ಮತ್ತಷ್ಟು ಓದಿ: ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೊ ವೈರಲ್

ಸ್ಮೃತಿ ಇರಾನಿ ಅವರು ಪಾರ್ಸಿ ಉದ್ಯಮಿ ಜುಬಿನ್ ಇರಾನಿ ಅವರನ್ನು ವಿವಾಹವಾಗಿದ್ದಾರೆ ಇಬ್ಬರು ಮಕ್ಕಳಿದ್ದಾರೆ.
ಸ್ಮೃತಿ ಇರಾನಿ ಅವರು 1998 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಿರಿಯ ತಾರೆ 2000ರಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಯಶಸ್ವಿ ನಟಿ ಎನಿಸಿಕೊಂಡರು.

‘ಆತೀಶ್’, ‘ಹಮ್ ಹೈ ಕಲ್ ಆಜ್ ಔರ್ ಕಲ್’, ‘ರಾಮಾಯಣ’, ‘ವಿರುಧ್: ಹರ್ ರಿಶ್ತಾ ಏಕ್ ಕುರುಕ್ಷೇತ್ರ’, ‘ಮಣಿಬೆನ್.ಕಾಮ್’ ಮತ್ತು ‘ಥೋಡಿ ಸಿ ಜಮೀನ್ ಥೋಡಾ ಸಾ ಆಸ್​ಮಾನ್’ ನಂತಹ ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳಲ್ಲಿ ಸ್ಮೃತಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಹೌದು ನಾನು ಆಗ ತುಂಬಾ ತೆಳ್ಳಗಿದ್ದೆ ದಯವಿಟ್ಟು ಅದನ್ನು ನೆನಪಿಸಬೇಡಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:48 am, Fri, 5 May 23