Viral Video: ಪಂಜಾಬಿ ಸಂಗೀತಕ್ಕೆ ಸಖತ್ತಾಗಿ ಸ್ಟೆಪ್ ಹಾಕಿದ ವಿವಿಧ ದೇಶಗಳ ವಿದ್ಯಾರ್ಥಿಗಳು, ವೈರಲ್ ವಿಡಿಯೋ ಇಲ್ಲಿದೆ

ಸಂಗೀತಕ್ಕೆ ಯಾವುದೇ ಗಡಿಗಳು ಇಲ್ಲ, ಬ್ರಿಟನ್​ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪಂಜಾಬಿ ಸಂಗೀತಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಪಂಜಾಬಿ ಸಂಗೀತಕ್ಕೆ ಸಖತ್ತಾಗಿ ಸ್ಟೆಪ್ ಹಾಕಿದ ವಿವಿಧ ದೇಶಗಳ ವಿದ್ಯಾರ್ಥಿಗಳು, ವೈರಲ್ ವಿಡಿಯೋ  ಇಲ್ಲಿದೆ
ಪಂಜಾಬಿ ಸಂಗೀಕ್ಕೆ ವಿದ್ಯಾರ್ಥಿಗಳ ಡಾನ್ಸ್
Edited By:

Updated on: Jul 04, 2022 | 2:30 PM

ವೈರಲ್ ವಿಡಿಯೋ: ಸಂಗೀತಕ್ಕೆ ಹೇಗೆ ಧರ್ಮ, ಜಾತಿ ಇಲ್ಲವೋ ಅದೇ ರೀತಿ ಗಡಿಗಳು ಕೂಡ ಇಲ್ಲ. ಸಂಗೀತವು ಭಾಷೆಯ ಅಡೆತಡೆಗಳನ್ನು ಮೀರಿದ್ದಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಬ್ರಿಟನ್(Britain)​ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪಂಜಾಬಿ ಸಂಗೀತಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದರ ದೃಶ್ಯಾವಳಿಯನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ನೃತ್ಯದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಡೋಲ್​ ಬೀಟ್​ಗಳು ವಿಭಿನ್ನ ಸಂಸ್ಕೃತಿಗಳ ಜನರನ್ನು ಒಂದುಗೂಡಿಸಿದ್ದನ್ನು ಮತ್ತು ಅವರನ್ನು ಇನ್ನಷ್ಟು ರಂಜಿಸಿರುವುದನ್ನು ವಿಡಿಯೋ ತೋರಿಸುತ್ತದೆ.

ಇದನ್ನೂ ಓದಿ:

ಬ್ರಿಟನ್‌ನ ಕಾಲೇಜೊಂದರಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳ ಗುಂಪೊಂದು ವಿವಿಧ ಧ್ವಜಗಳನ್ನು ಹಿಡಿದು ವಿಭಿನ್ನ ನೃತ್ಯವನ್ನು ಮಾಡಿದ್ದಾರೆ. ವಿದ್ಯಾರ್ಥಿಯೊಬ್ಬರು ಡೋಲು ಹಿಡಿದುಕೊಂಡು ಪಂಜಾಬಿ ಸಂಗೀತವನ್ನು ಬಾರಿಸುತ್ತಾರೆ. ಈ ವೇಳೆ ವಿದ್ಯಾರ್ಥಿಯೊಬ್ಬ ಗುಂಪಿನ ಮಧ್ಯೆ ಬಂದು ಡೋಲು ಬಡಿತಕ್ಕೆ ಸರಿಯಾಗಿ ಸ್ಟೆಪ್ ಹಾಕುತ್ತಾನೆ. ಈ ವೇಳೆ ಉಳಿದ ವಿದ್ಯಾರ್ಥಿಗಳು ಕೂಡ ಹುಚ್ಚೆದ್ದು ಕುಣಿಯುತ್ತಾರೆ. ಅಲ್ಲದೆ ನಡುವಿನಲ್ಲಿ ನಿಂತಿರುವ ವಿದ್ಯಾರ್ಥಿಗೆ ಚೈತನ್ಯವನ್ನು ತುಂಬುತ್ತಾರೆ ಮತ್ತು ಹುರಿದುಂಬಿಸುತ್ತಾರೆ.

ಸನ್ನಿ ಹುಂಡಾಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿದ್ಯಾರ್ಥಿಗಳು ಪಂಜಾಬಿ ಸಂಗೀತಕ್ಕೆ ಕುಣಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಮಾಡರ್ನ್ ಬ್ರಿಟನ್ ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ ಪಂಜಾಬಿ ನೃತ್ಯದ ಕ್ಲಿಪ್ ಅನ್ನು ಹಂಚಿಕೊಂಡು ಹುಂಡಾಲ್ ಅವರು “ಪಂಜಾಬಿ ಸಂಗೀತವು ಯಾವಾಗಲೂ ಎಲ್ಲರನ್ನೂ ಒಟ್ಟಿಗೆ ತರುತ್ತದೆ” ಎಂದು ಬರೆದಿದ್ದಾರೆ. 36 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಅನ್ನು ಶುಕ್ರವಾರ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದು 2.7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 56ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ”ಇದು ಸಂಪೂರ್ಣವಾಗಿ ಅದ್ಭುತವಾಗಿದೆ ಮತ್ತು ಆಧುನಿಕ ಬ್ರಿಟನ್ ಎಲ್ಲವನ್ನೂ ಒಳಗೊಂಡಿದೆ. ಅಲ್ಲದೆ ಪಂಜಾಬಿ ಸಂಗೀತವು ಅದ್ಭುತವಾಗಿ ಉತ್ತೇಜನಕಾರಿಯಾಗಿದೆ, ನಾನು ಅದಕ್ಕೆ ನೃತ್ಯ ಮಾಡಲು ಇಷ್ಟಪಡುತ್ತೇನೆ”ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, “ವೀಡಿಯೊದಲ್ಲಿರುವ ಹುಡುಗ ನನ್ನ ಮಗ. ನಾನು ಅವನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಯುವಕರು ಪರಸ್ಪರ ವಿನೋದ ಮತ್ತು ಗೌರವವನ್ನು ಹೊಂದಿದ್ದಾರೆ, ಅದ್ಭುತ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ, “ನನ್ನ ಮಗ ಬೆಳೆಯಬೇಕೆಂದು ನಾನು ಬಯಸಿದ ಬ್ರಿಟನ್ ಇದು, ನನ್ನ ಪೀಳಿಗೆಯು ಆದಷ್ಟು ಬೇಗ ಇತಿಹಾಸದ ಕಸದ ಬುಟ್ಟಿಗೆ ಸೇರುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ:

Published On - 2:30 pm, Mon, 4 July 22