ಪಾಕಿಸ್ತಾನವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ, ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನಿಂದ ಹಿಡಿದು ಎಲ್ಲವೂ ತೀರಾ ದುಬಾರಿಯಾಗಿದೆ.
ಆದರೆ, ಪರಿಸ್ಥಿತಿ ಏನೇ ಇರಲಿ, ಶುಭ ಕಾರ್ಯಗಳಂತೂ ನಿಲ್ಲುವುದಿಲ್ಲ, ಮದುವೆಗೆ ಸಾಮಾನ್ಯವಾಗಿ ಕುದುರೆಗಾಡಿ ಅಥವಾ ಇನ್ಯಾವುದೇ ವಾಹನಗಳನ್ನು ಸಿಂಗರಿಸಿ ಅದರಲ್ಲಿ ಬರುವುದುಂಟು, ಇನ್ನು ಹಳ್ಳಿ ಕಡೆಗಳಲ್ಲಿ ಮೊದಲು ಎತ್ತಿನ ಗಾಡಿಯಲ್ಲಿ ಮದುವೆಯ ದಿಬ್ಬಣ ಹೋಗುತ್ತಿತ್ತು. ಆದರೆ ಈ ವಧು-ವರರು ಮದುವೆ ಮನೆಗೆ ಕತ್ತೆಯ ಗಾಡಿಯಲ್ಲಿ ಎಂಟ್ರಿ ಕೊಟ್ಟಿದ್ದು, ಎಲ್ಲರಲ್ಲಿ ನಗು ತರಿಸಿತ್ತು.
ಈ ವಿಡಿಯೋ ಪಾಕಿಸ್ತಾನದ್ದು ಎಂದು ಹೇಳಲಾಗಿದೆ, ಅನೇಕ ಪಾಕಿಸ್ತಾನಿ ಬಳಕೆದಾರರು ಈ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವಧು-ವರರು ಕತ್ತೆಗಾಡಿಯಲ್ಲಿ ಕುಳಿತು ಮದುವೆಮನೆಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕತ್ತೆಗೂ ಮಾಲೆ ಹಾಕಿರುವುದು ಕಂಡುಬರುತ್ತದೆ, ಸುತ್ತಮುತ್ತಲು ಇರುವವರು ವಿಡಿಯೋ ಮಾಡುವುದರಲ್ಲಿ ತೊಡಗಿದ್ದಾರೆ. ಮದುವೆಗೆ ಬಂದಿದ್ದ ವಿಡಿಯೋಗ್ರಾಫರ್ ಕೂಡ ತನ್ನ ಕ್ಯಾಮರಾದಲ್ಲಿ ಇಡೀ ಘಟನೆಯನ್ನು ಸೆರೆ ಹಿಡಿದಿದ್ದಾರೆ.
ಮತ್ತಷ್ಟು ಓದಿ: ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?
ಕೆಲವರು ಉತ್ತಮ ಆಯ್ಕೆ ಎಂದಿದ್ದಾರೆ, ಇನ್ನೂ ಕೆಲವರು ಬೇಗ ಜನಪ್ರಿಯತೆಗಳಿಸಲು ಸುಲಭ ಮಾರ್ಗ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಹಣದುಬ್ಬರ ಏರುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ ಎಂದು ಕೆಲವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 22 ರೂ ನಿಂದ ಇದೀಗ 272 ರೂ.ವರೆಗೆ ಏರಿಕೆಯಾಗಿದೆ. 2021ರಲ್ಲಿ ಮದುವೆಯೊಂದು ಚರ್ಚೆಯಾಗಿತ್ತು, ಅಜ್ಲಾನ್ ಷಾ ತನ್ನ ಬೇಗಂ ವಾರಿಷಾಗೆ ಕತ್ತೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ