ಬೆಂಗಳೂರಿನಲ್ಲಿ ಮನೆ ಬಾಡಿಗೆ ಬೇಕಂದ್ರೆ ಲಿಂಕ್ಡ್‌ಇನ್ ಪ್ರೊಫೈಲ್ ಕೊಡಬೇಕು, ಪೋಸ್ಟ್ ವೈರಲ್
ಬೆಂಗಳೂರಿನ ಮನೆ ಮಾಲೀಕರು ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿ ಮತ್ತು ಲಿಂಕ್ಡ್‌ಇನ್ ಪ್ರೊಫೈಲ್ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಲು ಪ್ರಾರಂಭಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಬಾಡಿಗೆ ಮನೆ (Rented House), ಅಪಾರ್ಟ್‌ಮೆಂಟ್‍ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಟೆಕ್ಕಿಗಳಿಗೆ ವರ್ಕ್ ಫ್ರಮ್ ಹೋಂ ಮುಗಿಯುತ್ತಿದ್ದಂತೆ ಬಾಡಿಗೆ ರೇಟ್ ದಿಢೀರ್ ಏರಿಕೆಯಾಗಿದೆ. ಆದರೆ ಗಗನಕ್ಕೇರಿದ ಮನೆ ಬಾಡಿಗೆಯಿಂದ ಟೆಕ್ಕಿಗಳಿಗೆ ಸಂಕಷ್ಟ ಎದುರಾಗಿದ್ದು, ದುಬಾರಿ ಬಾಡಿಗೆಗೆ ಫುಲ್ ಸುಸ್ತಾಗಿದ್ದಾರೆ. ಇದರ ಮಧ್ಯೆ ಮನೆ ಮಾಲೀಕರು ಬಾಡಿಗೆ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಬಾಡಿಗೆದಾರರ ಲಿಂಕ್ಡ್‌ಇನ್(LinkedIn) ಪ್ರೊಫೈಲ್ ಕೇಳುತ್ತಿದ್ದಾರಂತೆ. ಈ ಬಗ್ಗೆ ಅನೇಕರು ತಮ್ಮ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದು ಇದೀಗ ಸಮಾಆಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುಯತ್ತಿದೆ.
ಇದನ್ನೂ ಓದಿ: House For Rent: ಬೆಂಗಳೂರಲ್ಲಿ ಬಾಡಿಗೆಗೆ ಮನೆ ಬೇಕೆ? ನೀವು ಐಐಟಿ, ಐಐಎಂನಲ್ಲಿ ಓದಿರಬೇಕು!
Day 12 of house hunting Indiranagar @peakbengaluru pic.twitter.com/fsQHGtbsDP
— Goutham (@0xGoutham) March 16, 2023
ಬ್ರೋಕರ್ ಒಬ್ಬ ಮನೆ ಬಾಡಿಗೆದಾರನಿಗೆ ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ್ದಾರೆ. ಈ ಬಗ್ಗೆ ಗೌತಮ್ ಎನ್ನುವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ ಬ್ರೋಕರ್‌ನೊಂದಿಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್ 16 ರಂದು ಇಬ್ಬರು ಬ್ರೋಕರ್‌ಗಳೊಂದಿಗಿನ ಎರಡು ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಇಂದಿರಾ ನಗರದಲ್ಲಿ ಎರಡು ಬೆಡ್ರೂಮ್ (Two BHK) ಮನೆ ಹುಡುಕುತ್ತಿದ್ದ ಗೌತಮ್ ಬ್ರೋಕರ್‌ನೊಂದಿಗೆ ಚಾಟ್ ಮಾಡಿದ್ದಾರೆ. ಚಾಟ್ನಲ್ಲಿ ಬ್ರೋಕರ್ ಲಿಂಕ್ಡ್‌ಇನ್ ಪ್ರೊಫೈಲ್ ಲಿಂಕ್ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಗೌತಮ್ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಶೇರ್ ಮಾಡಿದ್ದಾರೆ. ಅಲ್ಲದೇ ಮತ್ತೊಂದು ಮನೆ ಮಾಲೀಕರೊಬ್ಬರು ನಿಮ್ಮ ಬಗ್ಗೆ ಸ್ವಲ್ಪ ಬರೆದು ಕಳುಹಿಸಿ ಎಂದು ಗೌತಮ್ಗೆ ಹೇಳಿದ್ದಾರೆ.
This guy wants blurb about me? pic.twitter.com/hvGSGyQaWR
— Goutham (@0xGoutham) March 16, 2023
ಅದನ್ನು ಗೌತಮ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದಕ್ಕೆ 900 ಲೈಕ್ಸ್, 50 ರೀಟ್ವೀಟ್ ಆಗಿದ್ದು, 49 ಕಮೆಂಟ್ಗಳು ಬಂದಿವೆ. ಇನ್ನು ಕೆಲವು ಟೆಕ್ಕಿಗಳು ಗುರುಗ್ರಾಮ್‌ನಲ್ಲೂ ತಮಗೆ ಆಗಿರುವ ಇಂತಹ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಅನೇಕ ಟೆಕ್ಕಿಗಳು ಮತ್ತು ವೃತ್ತಿಪರರು ಅಂತಹ ಸಂದರ್ಭಗಳನ್ನು ಎದುರಿಸಿದ್ದರೆ ಎಂದು ಹಂಚಿಕೊಂಡಿದ್ದಾರೆ. ಗುರ್‌ಗಾಂವ್‌ನಲ್ಲೂ ಬಾಡಿಗೆದಾರರು ಪ್ರೊಫೈಲ್ ಕಳುಹಿಸಬೇಕು. ಒಳ್ಳೆ ಸಂಬಂಳ, ಉದ್ಯೋಗಿಯಲ್ಲದಿದ್ದರೆ ಮನೆ ಸಿಗುವುದಿಲ್ಲ. ಸ್ಟಾರ್ಟ್ಅಪ್ ಉದ್ಯೋಗಿಗಳಿಗೂ ಮನೆಗಳು ಸಿಗುವುದಿಲ್ಲ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.
ಐಐಟಿ, ಐಐಎಂ, ಐಎಸ್‌ಬಿಯಲ್ಲಿ ಪದವಿ ಪಡೆದಿಲ್ಲ ಅಥವಾ ಸಿಎ ವೃತ್ತಿಯಲ್ಲಿಲ್ಲ ಎಂದು ಮನೆ ಮಾಲೀಕರೊಬ್ಬರು ವೆಲ್ಲೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರರೊಬ್ಬರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು, ಇದರ ಬೆನ್ನಲ್ಲೇ ಇದೀಗ ಮನೆ ಮಾಲೀಕರೊಬ್ಬರು ಬಾಡಿಗೆದಾರರಿಗೆ ಲಿಂಕ್ ಡಿನ್ ಪ್ರೊಫೈಲ್ ಕೇಳಿದ್ದಾರೆ.