House For Rent: ಬೆಂಗಳೂರಲ್ಲಿ ಬಾಡಿಗೆಗೆ ಮನೆ ಬೇಕೆ? ನೀವು ಐಐಟಿ, ಐಐಎಂನಲ್ಲಿ ಓದಿರಬೇಕು!
ವ್ಯಕ್ತಿಯೊಬ್ಬರಿಗೆ ಐಐಟಿ ಅಥವಾ ಐಐಎಂ ಪದವಿ ಪಡೆದಿಲ್ಲ ಎಂದು ಮನೆ ಬಾಡಿಗೆ ನೀಡಲು ಮಾಲೀಕರು ನಿರಾಕರಿಸಿದ್ದಾರೆ. ಇಂತಹದೊಂದು ಅನುಭವ ಬೆಂಗಳೂರಿನಲ್ಲಿ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವೀಧರನಿಗೆ ಆಗಿದೆ. ನಂಬಲು ಅಸಾಧ್ಯವಾದರೂ ನಂಬಲೇಬೇಕು.
ಬೆಂಗಳೂರು: ಈಗಿನ ಕಾಲದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಗಂಡು ಐಐಟಿ ಅಥವಾ ಐಐಎಂನ ಪದವೀಧ ಆಗದಿದ್ದರೂ ಪರವಾಗಿ. ಒಂದೊಳ್ಳೆ ಕೆಲಸದಲ್ಲಿದ್ದು ಕೈತುಂಬ ಸಂಬಳದ ಜೊತೆಗೆ ನಡೆ-ನುಡಿ ಚೆನ್ನಾಗಿದ್ರೆ ಸಾಕು ಅಂತಾರೆ. ಇನ್ನೂ ಕೆಲವರು ಮದುವೆಯಾಗಲು ಐಐಟಿ, ಐಐಎಂ ಪದವೀಧರರೇ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ಹಾಕಿಕೊಳ್ಳವುದು ಸಾಮಾನ್ಯ. ಆದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ(House Rent In Bengaluru) ನೀಡುವ ಮಾಲೀಕರು ಬಾಡಿಗೆದಾರರಿಗೆ ಐಐಟಿ, ಐಐಎಂ ಪದವಿ ಅರ್ಹತೆ ಕೇಳುತ್ತಿದ್ದಾರೆ. ಅರೇ…ಇದೇನಿದು ಮನೆ ಬಾಡಿಗೆ ಕೊಡಲು ಐಐಟಿ ಅಥವಾ ಐಐಎಂ ಪದವಿ ಅರ್ಹತೆ ಕೇಳ್ತಾರೆ ಅಂತ ಶಾಕ್ ಆಯ್ತಾ. ಶಾಕ್ ಆಗಲೇ ಬೇಕು. ಇಂತಹದೊಂದು ಅನುಭವ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವೀಧರನಿಗೆ ಆಗಿದೆ.
ಹೌದು… ಐಐಟಿ ಅಥವಾ ಐಐಎಂ ಪದವಿ ಪಡೆದಿಲ್ಲ ಎಂದು ಮನೆ ಬಾಡಿಗೆ ನೀಡಲು ಮಾಲೀಕರು ನಿರಾಕರಿಸಿದ್ದಾರೆ. ವೆಲ್ಲೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರ ಪ್ರಿಯಾಂಶ್ ಜೈನ್ ಎನ್ನುವರಿಗೆ ಬೆಂಗಳೂರಿನಲ್ಲಿ ಇಂತಹ ಅನುಭವವಾಗಿದೆ. ಅವರು ಐಐಟಿ, ಐಐಎಂ, ಐಎಸ್‌ಬಿಯಲ್ಲಿ ಪದವಿ ಪಡೆದಿಲ್ಲ ಅಥವಾ ಸಿಎ ವೃತ್ತಿಯಲ್ಲಿಲ್ಲ ಎಂದು ಮನೆ ಮಾಲೀಕರು ಮನೆ ಬಾಡಿಗೆ ನೀಡಲು ನಿರಾಕರಿಸಿದರಂತೆ. ಬೆಂಗಳೂರಿನಲ್ಲಿ ಕೆಲವು ಕಡೆ ಮನೆ ಪಡೆಯಲು ಬಾಡಿಗೆದಾರರು ಅತ್ಯುತ್ತಮ ಲಿಂಕ್ಡ್‌ಇನ್ ಪ್ರೊಫೈಲ್ ಹೊಂದಿರುವುದು ಅಗತ್ಯವಂತೆ. ಈ ಬಗ್ಗೆ ಪ್ರಿಯಾಂಶ್ ಜೈನ್ ಜೈನ್ ಅವರು ಬೆಂಗಳೂರಿನ ಬ್ರೋಕರ್ ಜೊತೆ ನಡೆಸಿದ ಚಾಟಿಂಗ್ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
#Bangalore flat owners, why do you do this?? ?
P.S looking for a single vacancy (preferably vegetarian) near EGL(Indiranagar, Domlur, HAL). Flexible budget based on how good the flat is Bonus: I can also teach house-party/campfire guitar@BangaloreRoomi @FindFlatmate @twitrbnb pic.twitter.com/ike3kGI9qm
— Priyansh Jain (@Presto412) November 17, 2022
ಬೆಂಗಳೂರು ಫ್ಲ್ಯಾಟ್ ಮಾಲೀಕರೇ, ನೀವು ಇದನ್ನು ಏಕೆ ಮಾಡುತ್ತೀರಿ? (ಇಂದಿರಾನಗರ, ದೊಮ್ಮಲೂರು, ಎಚ್‌ಎಎಲ್) ಬಳಿ ಒಂದೇ ಖಾಲಿ ಮನೆಯನ್ನು (ಸಸ್ಯಾಹಾರಿ) ಹುಡುಕುತ್ತಿದ್ದೆ. ಫ್ಲ್ಯಾಟ್ ಎಷ್ಟು ಉತ್ತಮವಾಗಿದೆ ಎಂಬುದರ ಆಧಾರದ ಬಜೆಟ್. ನಾನು ಮನೆ-ಪಾರ್ಟಿ ಕ್ಯಾಂಪ್ ಫೈರ್ ಗಿಟಾರ್ ಸಹ ಕಲಿಸಬಲ್ಲೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮನೆ ನೀಡುವ ಮಾಲೀಕರು ಬಾಡಿಗೆದಾರರ ನಿರ್ದಿಷ್ಟ ಹಿನ್ನೆಲೆ ತಿಳಿದುಕೊಳ್ಳುತ್ತಿದ್ದಾರೆ. ಜೈನ್ ತಮ್ಮ ಆಫೀಸ್ ಮತ್ತು ಕಾಲೇಜು ವಿವರವನ್ನು ಕೇಳಿರುವ ಕುರಿತು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಾನು ಆಸ್ಟ್ರೇಲಿಯಾ ಮೂಲದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಮತ್ತು ಸಸ್ಯಹಾರಿ ಎಂಬ ಮಾಹಿತಿಯನ್ನು ಪ್ರಿಯಾಂಶ್ ಜೈನ್ ಹಂಚಿಕೊಂಡಿದ್ದಾರೆ.
ಮನೆ ಮಾಲೀಕರು ನಿರ್ದಿಷ್ಟ ಹಿನ್ನೆಲೆಯ ಜನರನ್ನು ಹುಡುಕುತ್ತಿದ್ದರು. ಜೈನ್ ಅವರ ಕಚೇರಿ ಮತ್ತು ಕಾಲೇಜಿನ ವಿವರಗಳನ್ನು ಕೇಳಿದರು. ಸಾಫ್ಟ್‌ವೇರ್ ಡೆವಲಪರ್ ಎಂಜಿನಿಯರ್ ಆಗಿರುವ ಜೈನ್ ಅವರು ಆಸ್ಟ್ರೇಲಿಯನ್ ಸಾಫ್ಟ್‌ವೇರ್ ಕಂಪನಿಯಾದ ಅಟ್ಲಾಸಿಯನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಸಸ್ಯಾಹಾರಿ ಎಂದು ಬರೆದುಕೊಂಡಿದ್ದನ್ನು ಸ್ಕ್ರೀನ್ ಶಾಟ್‌ನಲ್ಲಿ ಕಾಣಬಹುದು. ಸಸ್ಯಾಹಾರಿ ಎಂದು ಹೇಳಿದ್ರೆ ಮನೆ ದೊರೆಯಬಹುದೆಂದು ಪ್ರಿಯಾಂಶ್ ಜೈನ್ ವೆಜ್ ಈ ಐಡಿಯಾ ಮಾಡಿದ್ದಾರೆ. ಆದರೂ ಜೈನ್ ಅವರ ವಿದ್ಯಾಭ್ಯಾಸ ವಿವರವನ್ನು ಬ್ರೋಕರ್ ಕೇಳಿದ್ದಾರೆ. ಅವರು ವಿಐಟಿಯಿಂದ ಕಲಿತು ಬಂದವರು ಎಂದು ತಿಳಿದ ನಂತರ, ಜೈನ್ ಅವರಿಗೆ ಫ್ಲ್ಯಾಟ್ ಬಾಡಿಗೆಗೆ ನೀಡಲು ನಿರಾಕರಿಸಲಾಗಿದೆ.
ಇದು ಒಬ್ಬರ ಬ್ರೋಕರ್ ಕಥೆಯಾಗಿದ್ರೆ, ಜೈನ್ ಮತ್ತೋರ್ವ ಬ್ರೋಕರ್ನೊಂದಿಗೆ ನಡೆಸಿದ ವಾಟ್ಸಾಪ್ ಚಾಟ್ ಹಂಚಿಕೊಂಡಿದ್ದು, ಅದರಲ್ಲಿ ಬ್ರೋಕರ್ ಉದ್ಯೋಗದಲ್ಲಿರುವ ಅವರ ಕಂಪನಿಯ ಬಗ್ಗೆ ಕೇಳಿದ್ದಾರೆ. ಆ ನಂತರ ಲಿಂಕ್ಡ್‌ಇನ್ ಪ್ರೊಫೈಲ್ ಲಿಂಕ್ ನೀಡುವಂತೆ ಹೇಳಿದ್ದಾರೆ. ಜೈನ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ಮನೆ ಸಿಕ್ತಾ ಎಂದು ಕೇಳಿದ್ದು, ಅವರಿಗೆ ಜೈನ್, ಕರ್ನಾಟಕದ ರಾಜಧಾನಿಯಲ್ಲಿ ಇನ್ನೂ ಬಾಡಿಗೆಗೆ ಮನೆ ಪಡೆಯಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಇಂತಹವು ಚಾಲ್ತಿಯಲ್ಲಿವೆ ಎಂದು ಹೇಳಿದ್ದಾರೆ. ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಹೈದರಾಬಾದ್‌ನಲ್ಲಿಯೂ ಪ್ರಾರಂಭವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇನ್ನು ಕೆಲವರು ಕೆಟ್ಟ ಜನರಿಗೆ ಬಾಡಿಗೆ ಕೊಟ್ಟು ಆ ಮೇಲೆ ಗೋಳಾಡುವುದಕ್ಕಿಂತ ಬಾಡಿಗೆ ಕೊಡುವ ಮೊದಲೇ ಒಳ್ಳೆಯ ಬಾಡಿಗೆದಾರರನ್ನು ಹುಡುತ್ತಿದ್ದಾರೆ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:43 pm, Sat, 26 November 22