Viral Video: ರೀಲ್ಸ್​ಗಳಿಗಾಗಿ ನೀವು ಮಾಡುವ ಸ್ಟಂಟ್​ಗಳು ರಿಯಲ್​ ಆಗಿ ಜೀವಕ್ಕೆ ಅಪಾಯ ತರಬಹುದು ಎಚ್ಚರ

ಸಾಮಾಜಿಕ ಜಾಲತಾಣಗಳಲ್ಲಿ ನೀವು ಅಪಾಯಕಾರಿ ಸ್ಟಂಟ್​(Stunt)ಗಳ ವಿಡಿಯೋ, ರೀಲ್ಸ್​ಗಳನ್ನು ನೋಡಿರುತ್ತೀರಿ, ಆದರೆ ಈ ಸ್ಟಂಟ್​ಗಳು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು.

Viral Video: ರೀಲ್ಸ್​ಗಳಿಗಾಗಿ ನೀವು ಮಾಡುವ ಸ್ಟಂಟ್​ಗಳು ರಿಯಲ್​ ಆಗಿ ಜೀವಕ್ಕೆ ಅಪಾಯ ತರಬಹುದು ಎಚ್ಚರ
ಅಪಾಯಕಾರಿ ಸ್ಟಂಟ್
Image Credit source: ABP Live

Updated on: Jun 23, 2023 | 3:02 PM

ಸಾಮಾಜಿಕ ಜಾಲತಾಣಗಳಲ್ಲಿ ನೀವು ಅಪಾಯಕಾರಿ ಸ್ಟಂಟ್​(Stunt)ಗಳ ವಿಡಿಯೋ, ರೀಲ್ಸ್​ಗಳನ್ನು ನೋಡಿರುತ್ತೀರಿ, ಆದರೆ ಈ ಸ್ಟಂಟ್​ಗಳು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಕೈಕಾಲುಗಳು ಮುರಿಯಬಹುದು, ಮೇಲಿಂದ ಬೀಳಬಹುದು, ಏಟು ಮಾಡಿಕೊಳ್ಳಬಹುದು. ಕೆಲವರು ರೈಲ್ವೆ ಟ್ರ್ಯಾಕ್, ಚಲಿಸುತ್ತಿರುವ ರೈಲು, ಚಲಿಸುತ್ತಿರುವ ಬೈಕ್, ಕಾರುಗಳಲ್ಲಿ ಸ್ಟಂಟ್ ಮಾಡುತ್ತಾರೆ.

ಈ ವ್ಯಕ್ತಿಯೊಬ್ಬ ಆಳವಾದ ಕಂದಕದ ಬಳಿ ಸ್ಟಂಟ್ ಮಾಡಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ, ಕಂದಕದ ಬಳಿ ವ್ಯಕ್ತಿಯೊಬ್ಬ ಬ್ಯಾಕ್​ಫ್ಲಿಪ್ ಅನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ಓದಿ: Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

ವ್ಯಕ್ತಿಗೆ ಹೆಚ್ಚಿನ ವಿಶ್ವಾಸವೇನೋ ಇರುತ್ತದೆ ಆದರೆ ಆತನ ಲಕ್ ಕೈ ಕೊಡುತ್ತದೆ. ಆತ ಸಮತೋಲನ ಕಳೆದುಕೊಂಡು ಕಂದಕಕ್ಕೆ ಬಿದ್ದಿದ್ದಾನೆ. ಈ ಅಪಾಯ ಕಾರಿ ಸ್ಟಂಟ್​ ನೋಡಿ ಸುತ್ತಮುತ್ತಲಿನವರೂ ಭಯಗೊಂಡಿದ್ದಾರೆ.

ಆದರೆ ವ್ಯಕ್ತಿ ಬದುಕಿದ್ದಾನೋ, ಸತ್ತಿದ್ದಾನೋ ಎಂಬುದು ತಿಳಿದಿಲ್ಲ, ವಿಡಿಯೋ ಮಾಡುತ್ತಿರುವ ವೇಳೆ ಪ್ರಾಣಕ್ಕೆ ಅಪಾಯವಾಗಿರುವ ಘಟನೆ ಇದೇನು ಮೊದಲಲ್ಲ ಇಂತಹ ಹಲವು ಅಪಾಯಕಾರಿ ಸ್ಟಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವು ನಿತ್ಯ ನೋಡಬಹುದು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us