Viral Video: ಮೆಟ್ರೋದಲ್ಲಿ ಯುವತಿಯ ಡಾನ್ಸ್, ನೆಟ್ಟಿಗರ ತರಾಟೆ ನಂತರ ಕ್ರಮದ ಭರವಸೆ ನೀಡಿದ ಹೈದರಾಬಾದ್ ಮೆಟ್ರೋ ಸಂಸ್ಥೆ

| Updated By: Rakesh Nayak Manchi

Updated on: Jul 21, 2022 | 10:16 AM

ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡಿದ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಶದ ನಂತರ ಯುವತಿ ವಿರುದ್ಧ ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ ಕ್ರಮಕ್ಕೆ ಮುಂದಾಗಿದೆ.

Viral Video: ಮೆಟ್ರೋದಲ್ಲಿ ಯುವತಿಯ ಡಾನ್ಸ್, ನೆಟ್ಟಿಗರ ತರಾಟೆ ನಂತರ ಕ್ರಮದ ಭರವಸೆ ನೀಡಿದ ಹೈದರಾಬಾದ್ ಮೆಟ್ರೋ ಸಂಸ್ಥೆ
ಮೆಟ್ರೋದಲ್ಲಿ ಡಾನ್ಸ್ ಮಾಡಿದ ಯುವತಿ
Follow us on

ಇತ್ತೀಚಿನ ದಿನಗಳಲ್ಲಿ ಯುವಕ ಮತ್ತು ಯುವತಿಯರು ಇನ್ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡುವುದು ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಬಂದು ಕಣಿಯುವುದು ಇತ್ಯಾದಿಗಳನ್ನು ಮಾಡುವುದನ್ನು ಕಾಣಬಹುದು. ಇದೀಗ ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡಿದ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಶದ ನಂತರ ಯುವತಿ ವಿರುದ್ಧ ಹೈದರಾಬಾದ್ ಮೆಟ್ರೋ (Hyderabad Metro) ರೈಲು ಲಿಮಿಟೆಡ್ ಕ್ರಮಕ್ಕೆ ಮುಂದಾಗಿದೆ. ಚಲಿಸುತ್ತಿರುವ ಮೆಟ್ರೋ ರೈಲಿನೊಳಗೆ ಯುವತಿ ಡಾನ್ಸ್ ಮಾಡುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ಹೈದರಾಬಾದ್ ಮೆಟ್ರೋದಲ್ಲಿ ಇನ್‌ಸ್ಟಾಗ್ರಾಮ್ ರೀಲ್ ರಚಿಸಲು ಹುಡುಗಿಯೊಬ್ಬಳು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಈ ಕೃತ್ಯವನ್ನು ಟೀಕಿಸಿದ್ದಾರೆ. ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣದಲ್ಲಿ ನೃತ್ಯ ಮಾಡಿ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್​ಗಳನ್ನು ಗಳಿಸಿದ್ದಾರೆ. ಆದಾಗ್ಯೂ ಸಾರ್ವಜನಿಕ ಸಾರಿಗೆಯಲ್ಲಿ ಇವುಗಳಿಗೆ ಏಕೆ ಅನುಮತಿಸಲಾಗಿದೆ ಎಂದು ಹಲವರು ಪ್ರಶ್ನಿಸಲಾಗುತ್ತಿದೆ.

“ಮೆಟ್ರೋ ರೈಲುಗಳಲ್ಲಿ ಇದಕ್ಕೆ ಅನುಮತಿ ನೀಡುತ್ತೀರಾ? ನೀವು (ಕೆಲವು ಯುವಕ-ಯುವತಿಯರಿಗೆ) ಹೈದರಾಬಾದ್ ಮೆಟ್ರೋ ನಿಲ್ದಾಣಗಳನ್ನು ಪಿಕ್ನಿಕ್ ತಾಣಗಳು ಮತ್ತು ನೃತ್ಯ ಮಹಡಿಗಳಾಗಿ ಬದಲಾಯಿಸಿದ್ದೀರಾ?” ಎಂದು ಹೈದರಾಬಾದ್ ಮೆಟ್ರೋ ರೈಲ್ ಲಿಮಿಟೆಡ್ ಅನ್ನು ಟ್ಯಾಗ್ ಮಾಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ನಾನು ಚೀನಾದಲ್ಲಿದ್ದಾಗ ಹಳೆಯ ಜನರು ಸಂಗೀತದೊಂದಿಗೆ ಫುಟ್‌ಪಾತ್‌ನಲ್ಲಿ ನೃತ್ಯ ಮಾಡುವುದನ್ನು ನಾನು ನೋಡಿದ್ದೆ. ಇದು ವೀಕ್ಷಿಸಲು ತುಂಬಾ ಆಹ್ಲಾದಕರವಾಗಿರುತ್ತದೆ. ಇಲ್ಲಿ ಹೈದರಾಬಾದ್‌ನಲ್ಲಿ ಆಟೋಗಳು ಸ್ಪೀಕರ್‌ನಲ್ಲಿ ಹಾಡುಗಳನ್ನು ನುಡಿಸುತ್ತಿದ್ದವು, ಮೂರ್ಖ ಟ್ರಾಫಿಕ್ ಸವಾರಿಯನ್ನು ಆನಂದಿಸುವಂತೆ ಮಾಡಿದ್ದು ನನಗೆ ನೆನಪಿದೆ. ಇದು ಯಾರಿಗೂ ಹಾನಿಯಾಗುವುದಿಲ್ಲ ಏಕೆ ಜನರು ತುಂಬಾ ಅಸಹಿಷ್ಣುರಾದರು?” ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರದ ಬೆಳವಣಿಯನ್ನು ಗಂಭೀರವಾಗಿ ಪರಿಗಣಿಸಿದ ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್, ಘಟನೆ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅಧಿಕಾರಿಗಳು ತೆಲಂಗಾಣ ಟುಡೆಗೆ ಮಾಹಿತಿ ನೀಡಿದ್ದಾರೆ.

Published On - 10:16 am, Thu, 21 July 22