ನಾಯಿ ಕುದುರೆ ಸವಾರಿ ಮಾಡುವುದನ್ನು ನೋಡಿದ್ದೀರಾ? ಇಲ್ಲಿದೆ ವಿಡಿಯೋ

ವಿಡಿಯೋ ಯಾವೂರಲ್ಲಿ ಶೂಟ್ ಆಗಿದೆ ಅಂತ ಗೊತ್ತಾಗಿಲ್ಲ. ಈ ಕ್ಲಿಪ್ ಮೂರು ವಿಡಿಯೋಗಳ ಸಂಯೋಜನೆಯಾಗಿದೆ. ಕುದುರೆ ಮೇಲೆ ಹಾಕಿರುವ ಥಡಿ ಮೇಲೆ ನಿಂತಿರುವ ನಾಯಿ ಒಬ್ಬ ನುರಿತ ಸವಾರಂತೆ ಯಾವುದೇ ಆತಂಕವಿಲ್ಲದೆ ಸವಾರಿ ಮಾಡುತ್ತಿರುವುದು ನೆಟ್ಟಿಗರಲ್ಲಿ ಆಶ್ಚರ್ಯ ಮೂಡಿಸಿದೆ.

ನಾಯಿ ಕುದುರೆ ಸವಾರಿ ಮಾಡುವುದನ್ನು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಕುದುರೆ ಸವಾರಿ ಮಾಡುತ್ತಿರುವ ನಾಯಿ!
TV9kannada Web Team

| Edited By: Arun Belly

Jul 20, 2022 | 2:26 PM

ಪ್ರಾಣಿಗಳ (animals) ಮೇಲೆ ಅದರಲ್ಲೂ ವಿಶೇಷವಾಗಿ ನಮ್ಮೆಲ್ಲೆರ ಅಚ್ಚುಮೆಚ್ಚಿನ ಸಾಕುಪ್ರಾಣಿ ನಾಯಿಯ ಮೇಲೆ ಮಾಡುವ ವಿನೋದಮಯ (humorous) ವಿಡಿಯೋಗಳು ಸಖತ್ ವೈರಲ್ ಆಗುತ್ತವೆ ಮಾರಾಯ್ರೇ. ಈ ನಾಯಿಯೇ ಹಾಗೆ, ನಮ್ಮನ್ನು ಅಳಿಸಬಲ್ಲದು ಹಾಗೂ ನಗಿಸಲೂಬಲ್ಲದು. ಇಲ್ಲಿ ನಾವು ನಗಿಸುತ್ತಿರುವ ನಾಯಿಯ ಬಗ್ಗೆ ಮಾತಾಡುತ್ತಿದ್ದೇವೆ. ಹೌದು ಮಾರಾಯ್ರೇ ಕುದುರೆ ಸವಾರಿ (horse riding) ಮಾಡುತ್ತಿರುವ ನಾಯಿಯ ವಿಡಿಯೋ ವೈರಲ್ ಆಗಿದೆ.

ಟ್ವಿಟರ್ ನಲ್ಲಿ ಶೇರ್ ಆಗಿರುವ ವಿಡಿಯೋನಲ್ಲಿ ನಾಯಿಯೊಂದು ಸಂತೋಷದಿಂದ ಕುದುರೆ ಸವಾರಿ ಮಾಡುತ್ತಿದೆ. ನಾಯಿಯನ್ನು ಬೆನ್ನ ಮೇಲೆ ಹೊತ್ತ ಕುದುರೆಯು ನಗರಭಾಗದಲ್ಲೆಲ್ಲ ಓಡಾಡುತ್ತಿದೆ ಟ್ರಾಫಿಕ್ ಸಿಗ್ನಲ್ ಕಂಡ ಕಡೆ ನಿಲ್ಲುತ್ತಿದೆ. ಪೋಸ್ಟ್ ಗೆ ಶೀರ್ಷಿಕೆ ನೀಡಿರುವುದು ‘ಪಾ ಪೆಟ್ರೋಲ್’ (Paw Patrol) ಅಂತ.

ವಿಡಿಯೋ ಯಾವೂರಲ್ಲಿ ಶೂಟ್ ಆಗಿದೆ ಅಂತ ಗೊತ್ತಾಗಿಲ್ಲ. ಈ ಕ್ಲಿಪ್ ಮೂರು ವಿಡಿಯೋಗಳ ಸಂಯೋಜನೆಯಾಗಿದೆ. ಕುದುರೆ ಮೇಲೆ ಹಾಕಿರುವ ಥಡಿ ಮೇಲೆ ನಿಂತಿರುವ ನಾಯಿ ಒಬ್ಬ ನುರಿತ ಸವಾರಂತೆ ಯಾವುದೇ ಆತಂಕವಿಲ್ಲದೆ ಸವಾರಿ ಮಾಡುತ್ತಿರುವುದು ನೆಟ್ಟಿಗರಲ್ಲಿ ಆಶ್ಚರ್ಯ ಮೂಡಿಸಿದೆ.

ಅವರಿಗೆ ವಿಡಿಯೋ ನೋಡಿ ನಗು ತಡೆಯಲಾಗುತ್ತಿಲ್ಲ. ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ ಮತ್ತು 20,000 ಲೈಕ್ ಗಳನ್ನು ಅದು ಈಗಾಗಲೇ ಶೇಖರಿಸಿದೆ.

‘ಇಲ್ಲೇನಾಗುತ್ತಿದೆ ಅಂತ ನಂಗರ್ಥವಾಗುತ್ತಿಲ್ಲ, ಆದರೆ ನನಗಿದು ತುಂಬಾ ಇಷ್ಟವಾಗಿದೆ,’ ಎಂದು ಒಬ್ಬ ಯೂಸರ್ ಬರೆದಿದ್ದಾರೆ. ಮತ್ತೊಬ್ಬರು ‘ನಂಗ್ಯಕೋ ಇದು ಪಿಕ್ಸರ್ ಅನಿಮೇಟೆಡ್ ಸಿನಿಮಾವೊಂದರ ಕತೆ ಥರ ಅನಿಸುತ್ತಿದೆ,’ ಅಂತ ಬರೆದುಕೊಂಡಿದ್ದಾರೆ.

‘ಥಡಿ ಯಾಕೆ ಬೇಕಿತ್ತು ಅನ್ನೋದು ನನ್ನಲ್ಲಿ ಸೋಜಿಗ ಮೂಡಿಸಿದೆ. ಯಾಕೆಂದರೆ ನಾಯಿಗೆ ಅದರ ಅವಶ್ಯಕತೆಯಿಲ್ಲ. ಪ್ರಾಯಶ: ನಾಯಿಯೊಂದಿಗೆ ಮತ್ತೊಬ್ಬ ವ್ಯಕ್ತಿ ಸರದಿಯಂತೆ ಕುದುರೆ ಮೇಲೆ ಸವಾರಿ ಮಾಡುತ್ತಿರಬಹುದು,’ ಎಂದು ಮೂರನೇಯವರು ಬರೆದಿದ್ದಾರೆ. ‘ಬಹಳ ಕ್ಯೂಟಾಗಿದೆ, ಮನಸ್ಸಿಗೆ ಮುದ ನೀಡುವಂಥದ್ದು,’ ಅಂತ 4 ನೇ ವ್ಯಕ್ತಿ ಬರೆದುಕೊಂಡಿದ್ದಾರೆ.

ಮತ್ತೊಬ್ಬ ಯೂಸರ್ ಈ ಕ್ಲಿಪ್ ಅನ್ನು ಬಾಲಿವುಡ್ ಚಿತ್ರ ವೆಲ್ ಕಮ್ ನಲ್ಲಿನ ‘ಮಂಜು ಭಾಯಿಯ ಪೇಂಟಿಂಗ್’ ಗೆ ಹೋಲಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada