Dog Ball Balancing Video: ಬಾಲ್ ಬ್ಯಾಲೆನ್ಸ್ ಹೇಗೆ ಮಾಡುತ್ತೆ ನೋಡಿ ಈ ಮುದ್ದು ಮರಿ, ಈ ನಾಯಿಯನ್ನು ಕೂಡ ಫುಟ್​ಬಾಲ್​ ಟೀಂಗೆ ಸೇರಿಸಿಕೊಳ್ಳಿ

ಸಾಮಾಜಿಕ ಜಾಲತಾಣಗಳಲ್ಲಿ ನೀವು ಸ್ಕ್ರೋಲ್ ಮಾಡುವಾಗ ಹಲವು ಆಸಕ್ತಿದಾಯಕ ವಿಡಿಯೋಗಳು ನಿಮ್ಮ ಕಣ್ಣಿಗೆ ಬೀಳಬಹುದು. ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುತ್ತವೆ.

Dog Ball Balancing Video: ಬಾಲ್ ಬ್ಯಾಲೆನ್ಸ್ ಹೇಗೆ ಮಾಡುತ್ತೆ ನೋಡಿ ಈ ಮುದ್ದು ಮರಿ, ಈ ನಾಯಿಯನ್ನು ಕೂಡ ಫುಟ್​ಬಾಲ್​ ಟೀಂಗೆ ಸೇರಿಸಿಕೊಳ್ಳಿ
ನಾಯಿ ಬಾಲ್​ ಬ್ಯಾಲೆನ್ಸ್ ಮಾಡುತ್ತಿರುವ ಚಿತ್ರ

Updated on: Feb 05, 2023 | 11:31 AM

ಸಾಮಾಜಿಕ ಜಾಲತಾಣಗಳಲ್ಲಿ ನೀವು ಸ್ಕ್ರೋಲ್ ಮಾಡುವಾಗ ಹಲವು ಆಸಕ್ತಿದಾಯಕ ವಿಡಿಯೋಗಳು ನಿಮ್ಮ ಕಣ್ಣಿಗೆ ಬೀಳಬಹುದು. ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುತ್ತವೆ. ಹಾಗೆಯೇ ನಾಯಿಯೊಂದು ಬಾಲ್​ ಅನ್ನು ಬ್ಯಾಲೆನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ @buitengebiden ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ, ಇದು Twitter ನಲ್ಲಿ 2 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಅನ್ನು ಹೊಂದಿದೆ.

ಈ ಆಸಕ್ತಿದಾಯಕ ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ ನಾಯಿಯ ಕಡೆಗೆ ಚೆಂಡನ್ನು ಎಸೆದ ತಕ್ಷಣ, ನಾಯಿ ಅದನ್ನು ತನ್ನ ತಲೆಯ ಮೇಲೆ ತ್ವರಿತವಾಗಿ ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲ, ಈ ನಾಯಿ ಈ ಚೆಂಡನ್ನು ನೆಲದ ಮೇಲೆ ಬೀಳಲು ಬಿಡದೆ, ಚೆಂಡನ್ನು ತನ್ನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿ ಅಲ್ಲಿ ಇಲ್ಲಿ ಓಡುತ್ತದೆ ಮತ್ತು ಪುಟಿಯುತ್ತದೆ.

ಮತ್ತಷ್ಟು ಓದಿ: ಓಹ್​ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್​​ಗೆ, ಕಿಮೋಥೆರಪಿಗೆ, ಸರ್ಜರಿಗೆ…

ಈ ವಿಶಿಷ್ಟ ವೀಡಿಯೊವನ್ನು ಫೆಬ್ರವರಿ 1 ರಂದು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ನಂತರ, ಈ ವೀಡಿಯೊವನ್ನು ಇಲ್ಲಿಯವರೆಗೆ 17 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಕ್ಲಿಪ್‌ನಲ್ಲಿ ಅನೇಕ ಕಾಮೆಂಟ್‌ಗಳು ಬಂದಿವೆ, ಇದು ಈ ನಾಯಿಯ ಬಾಲ್ ಬ್ಯಾಲೆನ್ಸಿಂಗ್ ಸ್ಕಿಲ್ ವೀಡಿಯೊದಿಂದ ಬಳಕೆದಾರರು ಎಷ್ಟು ಪ್ರಭಾವಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, “ಇದು ಅದ್ಭುತವಾಗಿದೆ, ಬಹುಶಃ ಯಾವುದೇ ಫುಟ್ಬಾಲ್ ತಂಡದಲ್ಲಿ ಆಡಬಹುದು ಎಂದು ಬರೆದಿದ್ದಾರೆ. ಹೀಗೆ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us