ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್

Viral Video: ಮೂವರು ವ್ಯಕ್ತಿಗಳು ಸೇರಿ ಮನೆಯ ಮೇಲಿನ ಮಹಡಿಯಿಂದ ಕಿಟಕಿಯ ಮೂಲಕ ಸೋಫಾವನ್ನು ಕೆಳಗಿಳಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್
Updated By: shruti hegde

Updated on: Sep 30, 2021 | 10:18 AM

ಸಾಮಾನ್ಯವಾಗಿ ಮನೆಯನ್ನು ಬದಲಾಯಿಸುವಾಗ ವಸ್ತುಗಳನ್ನೆಲ್ಲಾ ಸಾಗಿಸುತ್ತೇವೆ. ದೊಡ್ಡದಾದ ವಸ್ತುಗಳನ್ನು ಸಾಗಿಸುವಾಗ ಮನೆಯ ಎದುರಿನ ಬಾಗಿಲಿನಿಂದ ನಿಧಾನವಾಗಿ ಎಚ್ಚರದಲ್ಲಿ ಸಾಗಿಸುತ್ತೇವೆ. ಕೆಲವು ಸಂದರ್ಭದಲ್ಲಿ ಜನರು ವಿಲಕ್ಷಣ ತಂತ್ರಗಳನ್ನು ಅನ್ವಯಿಸುತ್ತಾರೆ. ಇಲ್ಲಿ ಮೂವರು ಸೇರಿ ಯೋಚಿಸಿ, ಮನೆಯ ಕಿಟಕಿಯಿಂದ ಸೋಫಾವನ್ನು ಕೆಳಗಿಳಿಸಲು ಯೋಚನೆ ಮಾಡಿದ್ದಾರೆ. ಕೊಂಚ ಸ್ಲಿಪ್ ಆದರೂ ಸೋಫಾ ಮೈಮೆಲೆಯೇ ಬೀಳುವುದು ಗ್ಯಾರೆಂಟಿ! ಇಂಥದ್ದೊಂದು ಯೋಚನೆಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಮೂವರು ವ್ಯಕ್ತಿಗಳು ಸೇರಿ ಮನೆಯ ಮೇಲಿನ ಮಹಡಿಯಿಂದ ಕಿಟಕಿಯ ಮೂಲಕ ಸೋಫಾವನ್ನು ಕೆಳಗಿಳಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಎದುರಿನ ಬಾಗಿಲಿನಿಂದ ಸೋಫಾವನ್ನು ಇಳಿಸಲು ಸಾಧ್ಯವಾಗದ ಕಾರಣ ಉಪಾಯ ಮಾಡಿ ಕಿಟಕಿಯಿಂದ ಸೋಫಾವನ್ನು ಕೆಳಗಿಳಿಸುಲು ಪ್ರಯತ್ನ ಮಾಡಿದ್ದಾರೆ.

ಐರ್ಲೆಂಡ್​ನಲ್ಲಿ ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಓರ್ವರು ಮನೆಯ ಒಳಗಿನ ಕಿಟಕಿಯಿಂದ ಸೋಫಾವನ್ನು ಇಳಿಸುತ್ತಿದ್ದಾರೆ. ಕೆಳಗೆ ನಿಂತ ಇಬ್ಬರು ಎಚ್ಚರಿಕೆಯಿಂದ ಸೋಫಾ ಕೆಳಗಿಳಿಸುತ್ತಿದ್ದಾರೆ. ಸೋಫಾ ಕೆಳಗೆ ಬೀಳದಂತೆ ನೆಲವನ್ನು ಒರೆಸುವ ಬ್ರಷ್​ಗಳನ್ನು ಬಳಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಮಾಸ್ಟರ್ ಪ್ಲ್ಯಾನ್ ಇದು ಎಂದು ಓರ್ವರು ಹೇಳಿದ್ದಾರೆ. ಇಷ್ಟು ಕಷ್ಟ ಪಡುವುದಕ್ಕಿಂತ ಸೋಫಾದ ಒಂದು ಭಾಗವನ್ನು ಕಳಚುವುದು ಸುಲಭ ಎಂದು ಮತ್ತೋರ್ವರು ಹೇಳಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ. ಎಂಥಾ ಪ್ಲ್ಯಾನ್ ಗುರೂ.. ಎಂದು ಮತ್ತೋರ್ವರು ಹೇಳಿದ್ದಾರೆ. ಇನ್ನು ಕೆಲವರು, ಎದುರು ಬಾಗಿಲಿನಿಂದ ಹೊರ ತೆಗೆಯಲು ಆಗದಿದ್ದಾಗ ಸೋಫಾವನ್ನು ಸಂಪೂರ್ಣವಾಗಿ ಬಿಚ್ಚುವುದು ಒಳ್ಳೆಯದಿತ್ತು ಎಂಬ ಅಭಿಪ್ರಾಯಗಳೂ ಕೇಳಿ ಬಂದಿದೆ.

ಇದನ್ನೂ ಓದಿ:

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ