Viral Video: ಮಂಗಗಳಿಗೆ ಮಾವಿನ ಹಣ್ಣು ತಿನ್ನಿಸಿದ ಕಾನ್​ಸ್ಟೆಬಲ್​, ಇದುವೇ ಮಾನವೀಯತೆ ಎಂದ ನೆಟ್ಟಿಗರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 14, 2022 | 12:51 PM

ಮಂಗಗಳಿಗೆ ಮಾವಿನ ಹಣ್ಣು ತಿನ್ನಿಸಿದ ಉತ್ತರಪ್ರದೇಶ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಖಾತೆಲ್ಲಿ ವಿಡಿಯೋ ಹಂಚಿಕೊಂಡು ಶ್ಲಾಘಿಸಿದೆ.

Viral Video: ಮಂಗಗಳಿಗೆ ಮಾವಿನ ಹಣ್ಣು ತಿನ್ನಿಸಿದ ಕಾನ್​ಸ್ಟೆಬಲ್​, ಇದುವೇ ಮಾನವೀಯತೆ ಎಂದ ನೆಟ್ಟಿಗರು
ಕೋತಿಗೆ ಆಹಾರ ನೀಡಿದ ಪೊಲೀಸ್ ಸಿಬ್ಬಂದಿ
Follow us on

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ನೀರಿನ ದಾಹ ಹೆಚ್ಚಾಗಿರುತ್ತದೆ. ಪ್ರಾಣಿಗಳು ಕುಡಿಯಲು ನೀರು ಸಿಗದೆ, ತಿನ್ನಲು ಆಹಾರ ಸಿಗದೆ ಕಂಗೆಡುತ್ತವೆ. ಇಂಥ ಸಂದರ್ಭದಲ್ಲಿ ಪ್ರಾಣಿಗಳಿಗೆ ಆಹಾರ, ನೀರು ನೀಡುವುದು ಮಾನವೀಯತೆಯೇ ಸರಿ. ಉತ್ತರಪ್ರದೇಶದ ಪೊಲೀಸ್ ಕಾನ್​ಸ್ಟೆಬಲ್  ನ್ಸ್ಟೇಬಲ್ ಒಬ್ಬರು ವಾಹನದಲ್ಲಿ ಕುಳಿತುಕೊಂಡು ಮಗಗಳಿಗೆ ಆಹಾರ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಮೆಚ್ಚೆಗೆ ವ್ಯಕ್ತಪಡಿಸಿದ ನೆಟ್ಟಿಗರು ಇದುವೇ ಮಾನವೀಯತೆ ಎಂದು ಹೇಳಿದ್ದಾರೆ.

ವೈರಲ್ ಆಗತ್ತಿರುವ 17 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ನಲ್ಲಿ, ಪೊಲೀಸ್ ಸಿಬ್ಬಂದಿಯೊಬ್ಬರು ವಾಹನದಲ್ಲಿ ಕುಳಿತುಕೊಂಡು ಚಾಕು ತೆಗೆದುಕೊಂಡು ಮಾವಿನ ಹಣ್ಣನ್ನು ಕಟ್ ಮಾಡಿ ತಿನ್ನಲು ಮುಂದಾಗುವುದನ್ನು ಕಾಣಬಹುದು. ಈ ವೇಳೆ ಬೆನ್ನಿನ ಮೇಲೆ ಮರಿಯನ್ನು ಹೊತ್ತುಕೊಂಡಿದ್ದ ಕೋತಿಯೊಂದು ಸಿಬ್ಬಂದಿಯನ್ನು ನೋಡುತ್ತದೆ ಮತ್ತು ಹಣ್ಣಿಗಾಗಿ ಕೈಚಾಚುತ್ತದೆ. ಅದರಂತೆ ಆ ಸಿಬ್ಬಂದಿ ಮಾವಿನ ಹಣ್ಣನ್ನು ಕಟ್ ಮಾಡಿ ಕೋತಿಗೆ ನೀಡುತ್ತಾರೆ. ಮತ್ತೊಂದು ತುಂಡನ್ನು ದೂರದಲ್ಲಿರುವ ಕೋತಿಗೆ ಎಸೆಯುವುದನ್ನು ಕಾಣಬಹುದು. ಮೊದಲೇ ಕೋತಿಗಳಿಗೆ ಮಾವಿನ ಹಣ್ಣು ಎಂದರೆ ಪಂಚಪ್ರಾಣ, ಹೀಗಿದ್ದಾಗ ಸಿಬ್ಬಂದಿ ರಸಭರಿತ ಮಾವಿನ ಹಣ್ಣನ್ನು ನೀಡಿದಾಗ ಸುಮ್ಮನೆ ಇರುತ್ತದೆಯೇ? ಚಪ್ಪರಿಸಿಕೊಂಡು ಹಣ್ಣನ್ನು ಸವಿದಿದೆ.

ಇದರ ವಿಡಿಯೋವನ್ನು ಉತ್ತರ ಪ್ರದೇಶ ಪೊಲೀಸರು ತಮ್ಮ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡು ಶಹಜಹಾಪುರದ ಸಿಬ್ಬಂದಿ ಮೋಹಿತ್ ಅವರ ಒಳ್ಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ”UP 112, सबके ‘Mon-key’ समझे..” ಶೀರ್ಷಿಕೆ ನೀಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, 40,000 ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅನೇಕ ನೆಟಿಜನ್‌ಗಳು ಪೊಲೀಸ್ ಕಾನ್ಸ್‌ಟೇಬಲ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರು, “ಮಾನವೀಯತೆಯು ಒಳಗಿನಿಂದ ಬರುತ್ತದೆ. ಇದು ಮಾನವೀಯತೆ” ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ