ರಷ್ಯಾ ಮತ್ತು ಉಕ್ರೇನ್ (Russia- Ukraine War) ನಡುವಿನ ಯುದ್ಧದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನ್-ರಷ್ಯಾದಿಂದಾಗಿ ಉಕ್ರೇನಿಯನ್ ನಗರಗಳು ಸಂಪೂರ್ಣ ಹಾನಿಗೊಳಗಾಗಿವೆ. ಯುದ್ಧಪೀಡಿತ ದೇಶವಾದ ಉಕ್ರೇನ್‌ನ ದಂಪತಿ ಬಿಳಿ ಗೌನ್ ಮತ್ತು ಟುಕ್ಸೆಡೊ ಬದಲಿಗೆ ಉಕ್ರೇನ್‌ನ ಮಿಲಿಟರಿ ಸಮವಸ್ತ್ರ (Military Uniform) ಹಾಕಿಕೊಂಡು ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಗೌರವ ಸೂಚಿಸಿದ್ದಾರೆ.
ನವವಿವಾಹಿತರು ಹರ್ಷೋದ್ಗಾರ ಮತ್ತು ಚಪ್ಪಾಳೆಗಳ ನಡುವೆ ತಮ್ಮ ಮದುವೆಯ ಸಂಭ್ರಮವನ್ನು ಆಚರಿಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
Ukrainian weddings these days.
No white dresses and tuxedos but plenty of love and happiness! ?? #StandWithUkraine pic.twitter.com/7w4QoSYkEe— Anton Gerashchenko (@Gerashchenko_en) June 19, 2022
ಇದನ್ನೂ ಓದಿ: Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು
ತಮ್ಮ ಮದುವೆಯಲ್ಲಿ ಸಾಂಪ್ರದಾಯಿಕ ಉಡುಗೆಯ ಬದಲು ಮಿಲಿಟರಿ ಯೂನಿಫಾರಂ ಧರಿಸಿಕೊಂಡ ಉಕ್ರೇನಿಯನ್ ವಧು-ವರರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಧು ಮಿಲಿಟರಿ ಡ್ರೆಸ್ ಹಾಕಿಕೊಂಡು ಅದರ ಜೊತೆಗೆ ತನ್ನ ತಲೆಯ ಮೇಲೆ ಬಿಳಿ ವಸ್ತ್ರವನ್ನು ಧರಿಸಿದ್ದಾಳೆ. ವರ ಕೂಡ ಮಿಲಿಟರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾನೆ. ಚರ್ಚ್ನಲ್ಲಿ ಮದುವೆಯಾದ ಕೂಡಲೆ ಆ ವರ ತನ್ನ ಹೆಂಡತಿಯನ್ನು ಎತ್ತಿಕೊಂಡು ಸಂಭ್ರಮ ಪಟ್ಟಿದ್ದಾನೆ.
This couple, Lesya and Valeriy, just got married next to the frontline in Kyiv. They are with the territorial defense. pic.twitter.com/S6Z8mGpxx9
— Paul Ronzheimer (@ronzheimer) March 6, 2022
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Wed, 22 June 22