ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರ ಸಹ-ಮಾಲೀಕತ್ವದ ರೆಸ್ಟೋರೆಂಟ್ ಒನ್8 ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿವೆ. ಇದೀಗ ಒನ್8 ರೆಸ್ಟೋರೆಂಟ್ಗೆ ವಿರಾಟ್ ಕೊಹ್ಲಿಯನ್ನು ಹೋಲುವ ವ್ಯಕ್ತಿಯೊಬ್ಬರು ಬಂದಿದ್ದು, ರೆಸ್ಟೋರೆಂಟ್ನಲ್ಲಿದ್ದ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಖುದ್ದು ಕೊಹ್ಲಿಯೇ ಬಂದಿದ್ದಾರೆ ಎಂದು ರೆಸ್ಟೋರೆಂಟ್ನಲ್ಲಿದ್ದವರು ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಲು ಮುಗಿ ಬಿದ್ದಿದ್ದಾರೆ. ಈತ ಕೊಹ್ಲಿಯಂತೆಯೇ ತಲೆಯಲ್ಲೊಂದು ಕ್ಯಾಪ್, ಟೀ ಶರ್ಟ್ ಪ್ಯಾಂಟ್ ಧರಿಸಿ ಬಂದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ: Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ
ವಿರಾಟ್ ಕೊಹ್ಲಿಯನ್ನು ಹೋಲುವ ಈತನ ಹೆಸರು ಕಾರ್ತಿಕ್. ಈತ ಸೋಶಿಯಲ್ ಮೀಡಿಯಾಗಳಲ್ಲಿ ಕಾರ್ತಿಕ್ ಕೊಹ್ಲಿ ಎಂದೇ ಫೇಮಸ್ ಆಗಿದ್ದು, 7ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ವಿಡಿಯೋವನ್ನು @sarthaksachdevva ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 5.8 ಮಿಲಿಯನ್ ಅಂದರೆ 5 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 16 August 24