‌Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ

ರಿಚರ್ಡ್ ಈಗಾಗಲೇ 6 ಮದುವೆಯಾಗಿದ್ದರು. ಇದಲ್ಲದೇ 5 ಲಕ್ಷ ಡಾಲರ್ ಅಂದರೆ 4 ಕೋಟಿಗೂ ಅಧಿಕ ಹಣ ನೀಡಿ ಖ್ಯಾತ ಮಾಡೆಲ್‌ ಹಾಗೂ ಉದ್ಯಮಿಯಾಗಿರುವ ಕಿಮ್ ಕಾರ್ಡಶಿಯಾನ್ ಜೊತೆ ಡೇಟಿಂಗ್‌ ಮಾಡಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

‌Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ
Richard Lugner Dies At 91
Follow us
ಅಕ್ಷತಾ ವರ್ಕಾಡಿ
|

Updated on:Aug 16, 2024 | 12:26 PM

ಆಸ್ಟ್ರಿಯಾ: ಖ್ಯಾತ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ (91) ಸೋಮವಾರ ವಿಯೆನ್ನಾದಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿರುವುದಾಗಿ ಎಂದು ಆಸ್ಟ್ರೀಯಾದ ಮಾಧ್ಯಮಗಳು ವರದಿ ಮಾಡಿವೆ. 2 ತಿಂಗಳ ಹಿಂದಷ್ಟೇ 45 ವರ್ಷದ ಮಹಿಳೆಯೊಂದಿಗೆ ಆರನೇ ಮದುವೆಯಾಗಿದ್ದ ರಿಚರ್ಡ್ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಇತ್ತೀಚಿಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ನಿಧನರಾಗಿದ್ದಾರೆ.

ಹೆಣ್ಣಿನ ಮೇಲೆ ಅತಿಯಾದ ಮೋಹ ಹೊಂದಿದ್ದ ರಿಚರ್ಡ್ ಈಗಾಗಲೇ 6 ಮದುವೆಯಾಗಿದ್ದರು. ಇದಲ್ಲದೇ ಖ್ಯಾತ ಮಾಡೆಲ್‌ ಹಾಗೂ ಉದ್ಯಮಿಯಾಗಿರುವ ಕಿಮ್ ಕಾರ್ಡಶಿಯಾನ್ ಜೊತೆ ಡೇಟಿಂಗ್‌ಗಾಗಿ 5 ಲಕ್ಷ ಡಾಲರ್ ಅಂದರೆ 4 ಕೋಟಿಗೂ ಅಧಿಕ ಹಣ ನೀಡಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು.

ಮತ್ತಷ್ಟು ಓದಿ: ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನದ ಯುವತಿಯನ್ನು ವರಿಸಿದ ಭಾರತದ ವ್ಯಕ್ತಿ

ಎರಡು ತಿಂಗಳ ಹಿಂದಷ್ಟೇ ಜೂನ್‌ 1 ರಂದು ತನ್ನ 91 ನೇ ವಯಸ್ಸಿನಲ್ಲಿ ರಿಚರ್ಡ್ ತನ್ನ ಬಹುಕಾಲದ ಗೆಳತಿಯೊಂದಿಗೆ ಅದ್ಧೂರಿಯಾಗಿ ವಿವಾಹವಾಗಿದ್ದರು. ತನ್ನಗಿಂತ 50 ವರ್ಷ ಚಿಕ್ಕವಳಾದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು ಮದುವೆಯಾಗಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ರಿಚರ್ಡ್ ಇದೀಗ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಗಣ್ಯರು ಕಂಬನಿ ಮಿಡಿದ್ದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:26 pm, Fri, 16 August 24