ಪ್ರತಿಯೊಬ್ಬರ ಜೀವನದಲ್ಲಿ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಕೆಲವೊಂದು ಬಾರಿ ನಮ್ಮ ಸಹಾಯ ಇನ್ನೊಬ್ಬರಿಗೆ ದೊಡ್ಡ ಲಾಭವನ್ನು ಉಂಟು ಮಾಡಬಹುದು. ಅದು ಜೀವನದ ಅನಿರೀಕ್ಷಿತವಾಗಿರುತ್ತದೆ ಮತ್ತು ಸಹಾಯ ಮಾಡಿದವರಿಗೆ ಕೃತಜ್ಞರಾಗಿರಬೇಕು. ಈ ಸಮಾಜದಲ್ಲಿ ಎಲ್ಲರೂ ಶ್ರೀಮಂತರಾಗಿಲು ಸಾಧ್ಯವಿಲ್ಲ. ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ, ಬಡತನದ ಜೀವನವು ಇರುತ್ತದೆ. ಅದಕ್ಕಾಗಿ ಅವರು ಹೋರಾಟ ಮಾಡುವುದನ್ನು ನಾವು ಕಾಣಬಹುದು ಈ ಕಾರಣಕ್ಕೆ ಅದೆಷ್ಟೋ ಬಡವರ ಆರೋಗ್ಯದ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ ಅಷ್ಟು ಕಷ್ಟ ಇರುತ್ತದೆ. ಈ ಬಡ ಕುಟುಂಬಗಳಿಗೆ ಅನೇಕ ಸಂಘ – ಸಂಸ್ಥೆಗಳು ಕೆಲಸ ಮಾಡುತ್ತದೆ. ಯಾಕೆ ಇಷ್ಟೆಲ್ಲ ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿರಬಹುದು. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಬಗ್ಗೆ ಹೇಳುತ್ತಿದ್ದೇವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಪುಟ್ಟು ಹುಡುಗಿಯ ವಿಡಿಯೋ ಒಮ್ಮೆ ಎಲ್ಲರ ಕಣ್ಣಿನಲ್ಲಿ ಕಣ್ಣೀರು ಬರಿಸುವಂತೆ ಮಾಡಿ. ಈ ಪುಟ್ಟ ಹುಡುಗಿಗೆ ಚಿಕ್ಕ ವಯಸ್ಸಿನಲ್ಲಿ ಶ್ರವಣದಲ್ಲಿ ತೊಂದರೆಯಾಗಿದ್ದು. ಮೊದಲ ಬಾರಿಗೆ ಆಕೆ ಶಬ್ದ ಕೇಳುತ್ತಿರುವ ಅನುಭವ ಆಗಿದೆ. ಈ ವಿಡಿಯೋವನ್ನು ನೀವು ಕೂಡ ನೋಡಿದ್ರು ಖಂಡಿತ ಕಣ್ಣೀರು ಹಾಕುವುದು ಖಂಡಿತ.
ಈ ವಿಡಿಯೋ ವೇರ್ ದಿ ಪೀಸ್ ಎಂಬ ಬ್ರ್ಯಾಂಡ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 7 ವರ್ಷದ ಕೀನ್ಯಾದ ನೆಸ್ತೈಹಾ ಎಂಬ ಹುಡುಗಿಗೆ ಶ್ರವಣ ದೋಷ ಇದೆ ಎಂದು ಹೇಳಲಾಗಿತ್ತು. ಆಕೆ ಚಿಕ್ಕ ವಯಸ್ಸಿನಿಂದಲೇ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾಳೆ. ಇದೀಗ ನೆಸ್ತೈಹಾಗೆ ಎಲ್ಲ ಶಬ್ದವನ್ನು ಕೇಳುವ ಅದೃಷ್ಟ ಸಿಕ್ಕಿದೆ. ಒಂದು ಚಿಕ್ಕ ಕ್ಲಿಪ್‌ನಂತಹ ತಂತ್ರಜ್ಞಾನವನ್ನು ಅವಳ ಕಿವಿಗೆ ಇಂಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ನಂತರದಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನೋಡಲು ಚಪ್ಪಾಳೆ ತಟ್ಟುವ ಮೂಲಕ ಪರೀಕ್ಷೆ ಮಾಡಲಾಗಿದೆ. ಆ ವ್ಯಕ್ತಿ ಚಪ್ಪಾಳೆಗೆ ತಕ್ಷಣ ಆಕೆ ಪ್ರತಿಕ್ರಿಯೆ ನೀಡಿದ್ದಾಳೆ. ಅಲ್ಲಿದ್ದವರು ಎಲ್ಲರೂ ಕೂಡ ಈ ಕ್ಷಣವನ್ನು ಕಂಡು ಆನಂದಿಸಿದ್ದಾರೆ.
ವಾಜಿರ್‌ನ 7 ವರ್ಷದ ಬಾಲಕಿ ನೆಸ್ತೈಹಾ ಅವರು ಚಿಕ್ಕವಳಿದ್ದಾಗ ಅನಾರೋಗ್ಯಕ್ಕೆ ಒಳಗಾದ ನಂತರ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾಳೆ. ಅವಳು ಇಂದಿನವರೆಗೂ ಕೇಳಲು ಸಾಧ್ಯವಾಗಲಿಲ್ಲ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಸ್ಟಯ್ಹಾ ಕಣ್ಣೀರು ಹಾಕಿರುವ ಬಗ್ಗೆ ಅನೇಕರು ಈ ಬಗ್ಗೆ ಭಾವನಾತ್ಮಕವಾಗಿ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ನನ್ನ ನನ್ನ ಹೃದಯ ಮೀಡಿದಿದೆ. ನನ್ನ ಕಣ್ಣಿನಲ್ಲಿ ಕಣ್ಣೀರು ತಂದಿತು. ನಿಮ್ಮ ಈ ಅದ್ಭುತವಾದ ಕೆಲಸಕ್ಕೆ ಈ ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸುತ್ತಾನೆ ಎಂದು ಬಳಕೆದಾರರು ಬರೆದಿದ್ದಾರೆ.