Viral Video: ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಬುಡಕಟ್ಟು ಹಾಡಿಗೆ ಡ್ಯಾನ್ಸ್​ ಮಾಡಿದ ರಾಹುಲ್ ಗಾಂಧಿ

Bharat Jodo Yatra: ತೆಲಂಗಾಣದ ಭದ್ರಾಚಲಂನಲ್ಲಿ ಆದಿವಾಸಿಗಳೊಂದಿಗೆ ನೃತ್ಯದಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ವೇಳೆ ಬುಡಕಟ್ಟು ಜನಾಂಗದವರ ರೀತಿಯಲ್ಲೇ ತಲೆಗೆ ಕಿರೀಟ ತೊಟ್ಟು ಡ್ಯಾನ್ಸ್​ ಮಾಡಿದ್ದಾರೆ.

Viral Video: ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಬುಡಕಟ್ಟು ಹಾಡಿಗೆ ಡ್ಯಾನ್ಸ್​ ಮಾಡಿದ ರಾಹುಲ್ ಗಾಂಧಿ
ಬುಡಕಟ್ಟು ಜನಾಂಗದವರ ಜೊತೆ ಡ್ಯಾನ್ಸ್​ ಮಾಡಿದ ರಾಹುಲ್ ಗಾಂಧಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 29, 2022 | 12:46 PM

ಭಾರತ್ ಜೋಡೋ ಯಾತ್ರೆ (Bharat Jodo Yatra) ಪ್ರಯುಕ್ತ ಕರ್ನಾಟಕ ದಾಟಿ ತೆಲಂಗಾಣಕ್ಕೆ (Telangana) ತೆರಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಲ್ಲಿ ತಮ್ಮ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ. ತೆಲಂಗಾಣದ ಧರ್ಮಪುರದಿಂದ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಬುಡಕಟ್ಟು ಜನಾಂಗದವರ ಜೊತೆ ಅವರ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಭಾರೀ ವೈರಲ್ (Video Viral) ಆಗಿದೆ.

ತೆಲಂಗಾಣದ ಭದ್ರಾಚಲಂನಲ್ಲಿ ಆದಿವಾಸಿಗಳೊಂದಿಗೆ ಕೊಮ್ಮು ಕೋಯಾ ಎಂಬ ಪುರಾತನ ಕಲಾ ಪ್ರಕಾರದ ನೃತ್ಯದಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ವೇಳೆ ಬುಡಕಟ್ಟು ಜನಾಂಗದವರ ರೀತಿಯಲ್ಲೇ ತಲೆಗೆ ಕಿರೀಟ ತೊಟ್ಟು ಡ್ಯಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: ಆದಿವಾಸಿ ವೇಷ ತೊಟ್ಟು, ಡ್ಯಾನ್ಸ್​ ಮಾಡಿದ ರಾಹುಲ್

ಇದಕ್ಕೂ ಮೊದಲು, 3 ದಿನಗಳ ಕಾಲ ದೀಪಾವಳಿ ಪ್ರಯುಕ್ತ ವಿರಾಮದ ತೆಗೆದುಕೊಂಡಿದ್ದ ರಾಹುಲ್ ಗಾಂಧಿ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯಿಂದ ತಮ್ಮ ಯಾತ್ರೆಯನ್ನು ಪುನರಾರಂಭಿಸಿದಾಗ ಸ್ಥಳೀಯ ಕಲಾವಿದರೊಂದಿಗೆ ಡೋಲು ನುಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಡಕಟ್ಟು ಸಂಗೀತದ ಟ್ಯೂನ್‌ಗೆ ನೃತ್ಯ ಮಾಡಿದ್ದು ಇದೇ ಮೊದಲೇನಲ್ಲ. 2019ರಲ್ಲಿ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವದಲ್ಲಿ ರಾಹುಲ್ ಗಾಂಧಿ ಡ್ಯಾನ್ಸ್ ಮಾಡಿದ್ದರು.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 27ರಂದು 50 ದಿನಗಳನ್ನು ಪೂರೈಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 29 October 22