Juhi Chawla: ಮುಂಬೈನಲ್ಲಿ ದುರ್ವಾಸನೆಗೆ ಬೇಸತ್ತ ಜನ; ಚರಂಡಿಯಲ್ಲಿದ್ದೇವೆ ಎನಿಸುತ್ತಿದೆ ಎಂದ ಜೂಹಿ ಚಾವ್ಲಾ
ಮುಂಬೈನ ಗಾಳಿಯಲ್ಲಿ ದುರ್ವಾಸನೆ ಇದೆ ಎಂಬುದನ್ನು ಯಾರಾದರೂ ಗಮನಿಸಿದ್ದೀರಾ? ನನಗಂತೂ ಚರಂಡಿಯಲ್ಲಿ ವಾಸವಾಗಿದ್ದೇನೇನೋ ಎಂದು ಅನಿಸುತ್ತಿದೆ ಎಂದು ಜೂಹಿ ಚಾವ್ಲಾ ಟ್ವೀಟ್ ಮಾಡಿದ್ದಾರೆ.
ಮುಂಬೈ: ದಕ್ಷಿಣ ಮುಂಬೈನಲ್ಲಿ (Mumbai) ಕೆಲವು ದಿನಗಳಿಂದ ದುರ್ವಾಸನೆ ಹೆಚ್ಚಾಗಿದೆ. ಇದರಿಂದ ಮುಂಬೈ ನಿವಾಸಿಗಳು ಬೇಸತ್ತಿದ್ದಾರೆ. ಈ ಬಗ್ಗೆ ಬಾಲಿವುಡ್ ನಟಿ ಜೂಹಿ ಚಾವ್ಲಾ (Juhi Chawla) ಕೂಡ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಮಾತ್ರ ಈ ರೀತಿಯ ವಾಸನೆ ಬರುತ್ತಿದೆಯೇ? ಅಥವಾ ನನ್ನ ಸುತ್ತಲೂ ವಾಸವಾಗಿರುವವರಿಗೂ ಇದೇ ರೀತಿಯ ಅನುಭವವಾಗುತ್ತಿದೆಯೇ? ನನಗಂತೂ ಚರಂಡಿಯಲ್ಲಿ ವಾಸವಾಗಿದ್ದೇನೇನೋ ಎಂದು ಅನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
“ಮುಂಬೈನ ಗಾಳಿಯಲ್ಲಿ ದುರ್ವಾಸನೆ ಇದೆ ಎಂಬುದನ್ನು ಯಾರಾದರೂ ಗಮನಿಸಿದ್ದೀರಾ?? ಮೊದಲು ವರ್ಲಿ, ಬಾಂದ್ರಾ, ಮಿಥಿ ನದಿಯ ಬಳಿ ಕಲುಷಿತ ಪ್ರದೇಶದಲ್ಲಿ ಹೋಗುವಾಗ ಈ ರೀತಿಯ ವಾಸನೆ ಬರುತ್ತಿತ್ತು. ಆದರೆ, ಈಗ ದಕ್ಷಿಣ ಮುಂಬೈ ತುಂ ಅದೇ ರೀತಿಯ ಗಬ್ಬು ವಾಸನೆ ಹರಡಿದೆ. ಅದೊಂಥರಾ ರಾಸಾಯನಿಕ ಮಿಶ್ರಿತ ಕೆಟ್ಟ ವಾಸನೆ. ಹಗಲು- ರಾತ್ರಿಯೆನ್ನದೆ ಇಡೀ ದಿನ ಇದೇ ವಾಸನೆಯನ್ನು ನಾವು ಉಸಿರಾಡುತ್ತಿದ್ದೇವೆ. ನನಗಂತೂ ಚರಂಡಿಯಲ್ಲಿಯೇ ಇದ್ದೇವೆ ಎನಿಸುತ್ತಿದೆ” ಎಂದು ಜೂಹಿ ಚಾವ್ಲಾ ಟ್ವೀಟ್ ಮಾಡಿದ್ದಾರೆ.
Has anyone noticed … there is a STENCH in the air in Mumbai …??? Earlier one could smell this while driving past the khaadis ( almost stagnant polluted water bodies near worli and bandra , mithi river ) now it’s all across south mumbai … that & a strange chemical polluted air
— Juhi Chawla (@iam_juhi) October 29, 2022
ಹಲವರು ಟ್ವಿಟರ್‌ನಲ್ಲಿ ಜೂಹಿ ಚಾವ್ಲಾ ಅವರ ಅಭಿಪ್ರಾಯಕ್ಕೆ ತಮ್ಮ ಧ್ವನಿಯನ್ನೂ ಸೇರಿಸಿದ್ದಾರೆ. ನಾನು ಕೂಡ ಇದೇ ವಿಚಾರವಾಗಿ ಯೋಚನೆ ಮಾಡುತ್ತಿದ್ದೆ. ವಾಸನೆ ಬಹಳ ಗಾಢವಾಗಿ ಹರಡುತ್ತಿದೆ. ಕಾರಿನ ಗಾಜು ಏರಿಸಿಕೊಂಡರೂ ವಾಸನೆ ಕಂಟ್ರೋಲ್ ಆಗುತ್ತಿಲ್ಲ. ಜನರು ಇಷ್ಟು ದುಸ್ಥಿತಿಯಲ್ಲಿ ಹೇಗೆ ಬದುಕುತ್ತಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ‘90ರ ದಶಕದಲ್ಲಿ ಇಡೀ ಬಾಲಿವುಡ್ ಪುರುಷರ ಕೈವಶದಲ್ಲಿತ್ತು’; ನೇರ ಮಾತಲ್ಲಿ ಹೇಳಿದ ಜೂಹಿ ಚಾವ್ಲಾ
ಜೂಹಿ ಚಾವ್ಲಾ ಪ್ರಕೃತಿ ಪ್ರೇಮಿಯಾಗಿದ್ದು, ಜೂನ್‌ನಲ್ಲಿ ಅವರು ದೆಹಲಿ ಹೈಕೋರ್ಟ್‌ನಲ್ಲಿ 5G ತಂತ್ರಜ್ಞಾನದ ವಿರುದ್ಧ ಅರ್ಜಿ ಸಲ್ಲಿಸಿದ್ದರು. 5ಜಿ ತಂತ್ರಜ್ಞಾನ ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. “5ಜಿ ತಂತ್ರಜ್ಞಾನ ಮಕ್ಕಳಿಗೆ, ಗರ್ಭಿಣಿಯರಿಗೆ, ಹುಟ್ಟಲಿರುವ ಮಕ್ಕಳಿಗೆ, ವಯಸ್ಸಾದವರಿಗೆ, ಸಸ್ಯ, ಪ್ರಾಣಿಗಳಿಗೆ ಸುರಕ್ಷಿತವಾಗಿದೆಯೇ? ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ” ಎಂದು ಅವರು ವಿಡಿಯೋವೊಂದನ್ನು ಮಾಡಿ ಅಪ್ಲೋಡ್ ಮಾಡಿದ್ದರು.
ಅಂದಹಾಗೆ, ಜೂಹಿ ಚಾವ್ಲಾ ಇತ್ತೀಚೆಗಷ್ಟೇ ಹುಶ್ ಹುಶ್ ಎಂಬ ವೆಬ್ ಶೋ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಸೋಹಾ ಅಲಿ ಖಾನ್, ಕೃತಿಕಾ ಕಮ್ರಾ, ಕರಿಷ್ಮಾ ತನ್ನಾ ಮತ್ತು ಶಹಾನಾ ಗೋಸ್ವಾಮಿ ಕೂಡ ನಟಿಸಿದ್ದಾರೆ. ಈ ಹಿಂದೆ ರಿಷಿ ಕಪೂರ್ ನಾಯಕ ನಟನಾಗಿದ್ದ ಶರ್ಮಾಜಿ ನಮ್ಕೀನ್ ಚಿತ್ರದಲ್ಲಿ ಜೂಹಿ ಚಾವ್ಲಾ ಕಾಣಿಸಿಕೊಂಡಿದ್ದರು.