‘90ರ ದಶಕದಲ್ಲಿ ಇಡೀ ಬಾಲಿವುಡ್​ ಪುರುಷರ ಕೈವಶದಲ್ಲಿತ್ತು’; ನೇರ ಮಾತಲ್ಲಿ ಹೇಳಿದ ಜೂಹಿ ಚಾವ್ಲಾ

ಬಾಲಿವುಡ್​ನಲ್ಲಿ ಈ ಮೊದಲು ಮಹಿಳೆಯರು ಅಷ್ಟಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಜೂಹಿ ಚಾವ್ಲಾ ಅವರ ವಾದ. ಆದರೆ, ಇತ್ತೀಚೆಗೆ ಬಾಲಿವುಡ್​ನಲ್ಲಿ ಬದಲಾವಣೆ ಕಂಡಿದೆ.

‘90ರ ದಶಕದಲ್ಲಿ ಇಡೀ ಬಾಲಿವುಡ್​ ಪುರುಷರ ಕೈವಶದಲ್ಲಿತ್ತು’; ನೇರ ಮಾತಲ್ಲಿ ಹೇಳಿದ ಜೂಹಿ ಚಾವ್ಲಾ
ಜೂಹಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 27, 2022 | 8:52 PM

ನಟಿ ಜೂಹಿ ಚಾವ್ಲಾ (Juhi Chawla)  ಅವರು 90ರ ದಶಕದಲ್ಲಿ ಬೇಡಿಕೆಯ ನಟಿಯಾಗಿದ್ದರು. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇತ್ತೀಚೆಗೆ ಅವರು ಚಿತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ‘ಹಶ್​​ ಹಶ್​​’ ಸೀರಿಸ್ (Hush Hush Series) ಮೂಲಕ ಅವರು ಒಟಿಟಿ ಲೋಕಕ್ಕೂ ಕಾಲಿಟ್ಟಿದ್ದಾರೆ. ಈ ಸೀರಿಸ್ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದ್ದು, ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಸೀರಿಸ್​ನಲ್ಲಿ ಪ್ರಮುಖ ಪಾತ್ರ ಮಾಡಿದವರೆಲ್ಲರೂ ಮಹಿಳೆಯರು. ಇದು ಜೂಹಿ ಚಾವ್ಲಾಗೆ ಖುಷಿ ನೀಡಿದೆ. ಅಷ್ಟೇ ಅಲ್ಲ, ಈ ಮೊದಲಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಬಾಲಿವುಡ್​ನಲ್ಲಿ ಈ ಮೊದಲು ಮಹಿಳೆಯರು ಅಷ್ಟಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಜೂಹಿ ಚಾವ್ಲಾ ಅವರ ವಾದ. ಆದರೆ, ಇತ್ತೀಚೆಗೆ ಬಾಲಿವುಡ್​ನಲ್ಲಿ ಬದಲಾವಣೆ ಕಂಡಿದೆ. ಅನೇಕ ನಿರ್ದೇಶಕಿಯರು ಹಾಗೂ ನಿರ್ಮಾಪಕಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ಕೂಡ ಸಿದ್ಧವಾಗುತ್ತಿದೆ. ಈ ಬಗ್ಗೆ ಜುಹಿ ಚಾವ್ಲಾಗೆ ಖುಷಿ ಇದೆ.

‘90ರ ದಶಕದಲ್ಲಿ ಬಾಲಿವುಡ್​ನಲ್ಲಿ ಇಡೀ ಸೆಟ್ ಪುರುಷರ ಪ್ರಾಬಲ್ಯವನ್ನು ಹೊಂದಿತ್ತು. ನಟಿ, ಅವರ ಕೇಶ ವಿನ್ಯಾಸಕಿ ಹಾಗೂ ನಟಿಯ ತಾಯಿಯನ್ನು ಬಿಟ್ಟು ಬೇರಾವ ಮಹಿಳೆಯರೂ ಸೆಟ್​​ನಲ್ಲಿ ಇರುತ್ತಿರಲಿಲ್ಲ. ಇಡೀ ಬಾಲಿವುಡ್​ ಅವರ ಕೈಯಲ್ಲಿತ್ತು. ಆದರೆ, ಈಗ ಕಾಲ ಬದಲಾಗಿದೆ. ಶೇ. 50ಕ್ಕೂ ಹೆಚ್ಚು ಮಹಿಳೆಯರು ಸೆಟ್​ನಲ್ಲಿ ಇರುತ್ತಾರೆ’ ಎಂದಿದ್ದಾರೆ ಜೂಹಿ.

ಇದನ್ನೂ ಓದಿ
Image
ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ

‘ಹಶ್ ಹಶ್ ಸೀರಿಸ್​​​ನಲ್ಲಿ ಕೆಲಸ ಮಾಡುವುದು ನಿಜಕ್ಕೂ ಒಂದೊಳ್ಳೆಯ ಅನುಭವ ನೀಡಿದೆ. ಏಕೆಂದರೆ ನಿರ್ದೇಶಕಿ ತನುಜಾ ಚಂದ್ರ ಅವರೊಂದಿಗೆ ನಾನು ಮುಕ್ತವಾಗಿ ಮಾತನಾಡುವ ಅವಕಾಶ ಇತ್ತು. ಅದೇ ಜಾಗದಲ್ಲಿ ನಿರ್ದೇಶಕನಿದ್ದರೆ ಹಾಗೆ ಚರ್ಚೆ ನಡೆಸಲು ಸಾಧ್ಯವಿತ್ತೇ ಎಂಬುದು ನನಗೆ ತಿಳಿದಿಲ್ಲ’ ಎಂದಿದ್ದಾರೆ ಜೂಹಿ ಚಾವ್ಲಾ.

ಇದನ್ನೂ ಓದಿ: ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ

1990ರಲ್ಲಿ ಸಾಕಷ್ಟು ನಟಿಯರು ಮಿಂಚಿದ್ದರು. ಅವರೆಲ್ಲರೂ ಈಗ ಒಟಿಟಿ ಸೀರಿಸ್​ಗಳಲ್ಲಿ ಮಿಂಚುತ್ತಿದ್ದಾರೆ. ಮಾಧುರಿ ದೀಕ್ಷಿತ್, ರವೀನಾ ಟಂಡನ್, ಸುಷ್ಮಿತಾ ಸೇನ್ ಸೇರಿ ಅನೇಕ ನಟಿಯರು ಒಟಿಟಿಯಲ್ಲಿ ಹಲವು ಯಶಸ್ವಿ ಸೀರಿಸ್​ಗಳಲ್ಲಿ ನಟಿಸಿದ್ದಾರೆ.

Published On - 8:30 pm, Tue, 27 September 22