ಸಿಹಿ ತಿಂಡಿ ಇಷ್ಟ ಪಡುವವರು ಗೋಧಿ ಹಲ್ವಾ, ರವೆ ಹಲ್ವಾ, ಕ್ಯಾರೆಟ್ ಹಲ್ವಾ, ಬೀಟ್ರೂಟ್ ಹಲ್ವಾ ಮಾಡಿ ರುಚಿ ಸವಿದಿರಬಹುದು. ಆದರೆ ಈ ಮೊಟ್ಟೆ ಹಲ್ವಾದ ಬಗ್ಗೆ ಕೇಳಿರುವುದು ಕಡಿಮೆಯೇ. ಈ ಮೊಟ್ಟೆಯಿಂದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿರಬಹುದು. ಆದರೆ ಮಹಿಳೆಯೊಬ್ಬಳು ಮೊಟ್ಟೆ ಹಲ್ವಾವನ್ನು ಟ್ರೈ ಮಾಡಿದ್ದಾಳೆ. ಹಲ್ವಾ ಮಾಡುವ ರೆಸಿಪಿಯ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಬಾಯಿ ಮೇಲೆ ಕೈ ಇಟ್ಟಿದ್ದಾರೆ.
ವೈರಲ್ ವೀಡಿಯೊದಲ್ಲಿ, ಮಹಿಳೆಯು ಮೊಟ್ಟೆಗಳನ್ನು ಒಡೆದು ಪಾತ್ರೆಗೆ ಹಾಕುತ್ತಿರುವುದನ್ನು ಕಾಣಬಹುದು. ಸಕ್ಕರೆ ಹಾಗೂ ಹಾಲಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿದ್ದಾಳೆ. ಆ ಬಳಿಕ ಗ್ಯಾಸ್ ಮೇಲೆ ಬಾಣಲೆಯಿಟ್ಟು, ತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿದ್ದಾಳೆ. ಈಗಾಗಲೇ ಕಲಸಿಟ್ಟ ಮೊಟ್ಟೆ ಮಿಶ್ರಣವನ್ನು ಬಾಣಲೆಗೆ ಹಾಕಿ ಕೈಯಾಡಿಸುತ್ತಿರುವುದನ್ನು ಕಾಣಬಹುದು. ಆ ಬಳಿಕ ಕೆನೆ ಹಾಲು ಬೆರೆಸಿದ್ದು, ಕೊನೆಗೆ ಬಾದಾಮಿ ಹಾಗೂ ಗೋಡಂಬಿಯನ್ನು ಸೇರಿಸಲಾಗಿದ್ದು ರುಚಿಕರವಾದ ಮೊಟ್ಟೆ ಹಲ್ವಾ ಸಿದ್ಧವಾಗಿದೆ.
ಇದನ್ನೂ ಓದಿ: ಹೇಯ್ ಪ್ರಭು ಯೇ ಕ್ಯಾ ಹುವಾ.. ಪುರುಷರಂತೆ ಕ್ಷೌರದಂಗಡಿಯಲ್ಲಿ ಫೇಸ್ ಶೇವಿಂಗ್ ಮಾಡಿಸಿದ ಯುವತಿ
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಸ್ಮಾ ಗ್ರೇ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕೆಳಗೆ ಬೇಕಾಗುವ ಪದಾರ್ಥಗಳು, 6 ಮೊಟ್ಟೆಗಳು, 1 ಕಪ್ ಸಕ್ಕರೆ, 1 ಕಪ್ ಹಾಲಿನ ಪುಡಿ 1 ಕಪ್ ತುಪ್ಪ ಅಥವಾ ಬೆಣ್ಣೆ, 1 ಕಪ್ ಕೆನೆ” ಎಂದು ಅವರು ಬರೆದಿದ್ದಾರೆ. ಈ ವಿಡಿಯೋಗೆ ಇಪ್ಪತ್ತೊಂದು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ‘ಇದನ್ನು ನೋಡಿದ ನಂತರ ನನಗೆ ವಾಕರಿಕೆ ಬರುತ್ತಿದೆ, ಏನು ತಿನ್ನಬೇಕೆಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ದಯವಿಟ್ಟು ಇಂತಹವರನ್ನು ಮನೆಯಲ್ಲಿ ಬಿಡಬೇಡಿ’ ಎಂದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ