ಮಹಿಳೆಯೋರ್ವರು ಚಲಿಸುತ್ತಿರುವ ರೈಲಿನ ಅಡಿಗೆ ಬಿದ್ದ ವಿಡಿಯೋವೊಂದು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅರ್ಜೆಂಟೀನಾದಲ್ಲಿ ಘಟನೆ ನಡೆದಿದ್ದು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯೂನಸ್ ಐರಿಸ್‌ನ ನಿಲ್ದಾಣವೊಂದರಲ್ಲಿ ಘಟನೆ ನಡೆದಿದ್ದು, ರೈಲೊಂದು ನಿಲ್ದಾಣಕ್ಕೆ ಬರುತ್ತಿರುವ ವೇಳೆ ಮಹಿಳೆಯೋರ್ವರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಪ್ಲಾಟ್ಫಾರ್ಮ್ನಿಂದ ತುಸು ದೂರ ನಿಂತಿದ್ದ ಮಹಿಳೆ, ಮೂರ್ಛೆ ತಪ್ಪುತ್ತಿದ್ದಂತೆ ಚಲಿಸುತ್ತಿರುವ ರೈಲು ಮತ್ತು ಟ್ರಾಕ್ನ ಪಕ್ಕ ಬಿದ್ದಿದ್ದಾರೆ. ಸುದೈವವಶಾತ್ ಮಹಿಳೆ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಮಹಿಳೆ ಬಿದ್ದ ಕೆಲವೇ ಕ್ಷಣಗಳಲ್ಲಿ ರೈಲು ನಿಂತಿದ್ದು, ಪ್ರಯಾಣಿಕರು ಆಕೆಯನ್ನು ಮೇಲೆತ್ತಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ವಿಡಿಯೋದಲ್ಲಿ ಸೆರೆಯಾಗಿರುವಂತೆ ಮಹಿಳೆಯು ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದಾರೆ. ಅವರಂತೆ ಇತರೆ ಪ್ರಯಾಣಿಕರೂ ನಿಂತಿದ್ದಾರೆ. ಇದ್ದಕ್ಕಿದ್ದಂತೆ ಕಾಲುಗಳು ಬಲಕಳೆದುಕೊಂಡಂತಾಗಿ ಮಹಿಳೆ ರೈಲು ಹಾಗೂ ಪ್ಲಾಟ್ಫಾರ್ಮ್ ನಡುವಿನ ಕಿರಿದಾದ ಸ್ಥಳಕ್ಕೆ ಬೀಳುತ್ತಾರೆ. ಸ್ಥಳದಲ್ಲಿದ್ದವರು ಇದ್ದಕ್ಕಿದ್ದಂತೆ ಕಣ್ಮುಚ್ಚಿ ಬಿಡುವುದರ ಒಳಗೆ ನಡೆದ ಘಟನೆಯಿಂದ ಗಾಬರಿಯಾಗಿದ್ದಾರೆ. ಯುವಕನೊಬ್ಬ, ಯುವತಿಯ ಕಣ್ಣನ್ನು ಮುಚ್ಚುತ್ತಿರುವ ದೃಶ್ಯವೂ ಸೆರೆಯಾಗಿದೆ. ನಂತರ ಮಹಿಳೆಯನ್ನು ಅಲ್ಲಿಂದ ರಕ್ಷಿಸುತ್ತಿರುವ ಹಾಗೂ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
(ವಿ.ಸೂ.: ವಿಡಿಯೋ ಸೆನ್ಸಿಟಿವ್ ಕಂಟೆಂಟ್ ಹೊಂದಿದೆ, ವಿವೇಚನೆಯ ಮೇರೆಗೆ ವೀಕ್ಷಿಸಲು ಸಲಹೆ ನೀಡಲಾಗಿದೆ)
ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಕ್ಯಾಂಡೆಲಾ ಎಂದು ಗುರುತಿಸಲಾಗಿದ್ದು, ಅವರನ್ನು ಬ್ಯೂನಸ್ ಐರಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದು, ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
‘‘ಬಿಪಿ ಮಟ್ಟ ಕಡಿಮೆಯಾದ ಕಾರಣ ಕುಸಿದು ಬಿದ್ದು, ಮೂರ್ಛೆ ಹೋದೆ. ಬೇರೆಯವರನ್ನು ಎಚ್ಚರಿಸಲು ಪ್ರಯತ್ನಿಸಿದೆ. ಆದರೆ ರೈಲಿಗೆ ಡಿಕ್ಕಿ ಹೊಡೆದದ್ದು ನೆನಪಿದೆ, ಅದರ ಹೊರತಾಗಿ ಬೇರೇನೂ ನೆನಪಿಲ್ಲ. ನಾನಿನ್ನೂ ಹೇಗೆ ಜೀವಂತವಾಗಿದ್ದೇನೆ ಎಂಬುದು ತಿಳಿದಿಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ’’ ಎಂದು ಅರ್ಜೆಂಟೀನಾದ ಮಾಧ್ಯಮವೊಂದಕ್ಕೆ ಕ್ಯಾಂಡೆಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?
Viral Video: ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್
Published On - 2:42 pm, Thu, 21 April 22