ಇತ್ತೀಚಿಗೆ ನಮ್ಮ ದೇಶದಲ್ಲಿಯೂ ಡಿವೋರ್ಸ್ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಕೆಲ ಮಹಿಳೆಯರು ಕಾನೂನನ್ನು ದುರುಪಯೋಗಪಡಿಸಿಕೊಂಡು ಗಂಡನಿಂದ ಸಿಗುವ ಜೀವನಾಂಶಕ್ಕಾಗಿಯೇ ಬೇಕು ಬೇಕಂತಲೇ ಗಂಡನ ಮೇಲೆ ಆರೋಪಗಳನ್ನು ಹೊರಿಸಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಡಿವೋರ್ಸ್ ಅನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲೊಂದು ಇದಕ್ಕೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಲಾಯರ್ ಆಫೀಸಿನಲ್ಲಿ ಗಂಡ ಬಹಳ ನೋವಿನಿಂದ ತಾನು ಕಷ್ಟಪಟ್ಟು ಕೂಡಿಟ್ಟ ಅಥವಾ ಸಾಲ ಮಾಡಿ ತಂದಂತಹ ಹಣವನ್ನು ಮಾಜಿ ಹೆಂಡತಿಯ ಕೈಗೆ ಕೊಟ್ರೆ, ಆಕೆ ಒಂದು ಚೂರು ದುಃಖ ಪಡದೆ ಖುಷಿ ಖುಷಿಯಾಗಿ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಒಂದು ಕಡೆ ಹೆಂಡತಿಯ ಕಾಟ ಹಾಗೂ ಕಾನೂನು ನಮ್ಮ ಕಡೆ ಇಲ್ಲ ಎಂದು ಬೇಸತ್ತು ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಒಂದಷ್ಟು ಹೆಂಗಸರು ಕಾನೂನನ್ನು ದುರುಪಯೋಗಪಡಿಸಿಕೊಂಡು ಹಣಕ್ಕಾಗಿಯೇ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತಿರುವ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಲಾಯರ್ ಮುಂದೆಯೇ ನಗು ನಗುತ್ತಾ ಬಹಳ ಖುಷಿಯಿಂದ ಮಾಜಿ ಗಂಡನ ಕೈಯಿಂದ ಸಿಕ್ಕ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ.
Ladki ki smile toh dekho… jab paise milte hi
It’s in a lawyer’s office. So, it has to be some kind of settlement.#alimony #Maintenance #Divorce pic.twitter.com/IUcOJ206bc
— ShoneeKapoor (@ShoneeKapoor) January 11, 2025
ಶೋನಿ ಕಪೂರ್ (ShoneeKapoor) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಲಾಯರ್ ಆಫೀಸಿನಲ್ಲಿ ಗಂಡ ತನ್ನ ಮಾಜಿ ಹೆಂಡ್ತಿಗೆ ಪರಿಹಾರ ಹಣವನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಗಂಡ ಬಹಳ ನೋವಿನಿಂದ ತಾನು ಕೂಡಿಟ್ಟ ಅಥವಾ ಯಾರದ್ದೋ ಕೈಯಲ್ಲಿ ಸಾಲ ಮಾಡಿ ಹಣವನ್ನು ಕೊಟ್ರೆ, ಹೆಂಡ್ತಿ ಮಾತ್ರ ಒಂದು ಚೂರು ದುಃಖ ಪಡದೆ, ನಾಚಿಕೆಯಿಲ್ಲದೆ ನಗು ನಗುತ್ತಾ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ.
ಇದನ್ನೂ ಓದಿ: ಪೊಂಗಲ್ ಆಚರಣೆಗೆ ಪಂಚೆಯುಟ್ಟು ಸಖತ್ ಸ್ಟೆಪ್ಸ್ ಹಾಕಿದ ಚೆಸ್ ಚಾಂಪಿಯನ್ಸ್; ಮುದ್ದಾದ ವಿಡಿಯೋ ವೈರಲ್
ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪುರುಷರ ಪರವಾಗಿಯೂ ಕಾನೂನುಗಳನ್ನು ತರಬೇಕಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣವನ್ನು ಪುರುಷರಿಗೆ ಕಿರುಕುಳ ನೀಡುವ ಅಸ್ತ್ರವನ್ನಾಗಿ ಬದಲಾಯಿಸಲಾಗಿದೆʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈಗಂತೂ ಮದುವೆ, ಡಿವೋರ್ಸ್ ಎಲ್ಲವೂ ವ್ಯಾಪಾರವಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Tue, 14 January 25