ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಚಿತ್ರ ವಿಚಿತ್ರವಾದ ಬಟ್ಟೆಗಳನ್ನು ಧರಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಅನೇಕ ಬಾರಿ, ಫ್ಯಾಷನ್ ಸಲುವಾಗಿ, ವಿಚಿತ್ರವಾದ ಹೈ ಹೀಲ್ಸ್ ಅನ್ನು ಸಹ ಧರಿಸಿ ನಡೆಯಲಾಗದೇ ಪಜೀತಿಗೆ ಸಿಲುಕುದುಂಟು. ಇತ್ತೀಚಿನ ದಿನಗಳಲ್ಲಿ, ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ವಿಚಿತ್ರವಾದ ಹೈ ಹೀಲ್ಸ್ ಧರಿಸಿದ್ದಾಳೆ. ಈ ದೃಶ್ಯವನ್ನು ನೋಡಿದ ಎಲ್ಲರೂ ಇದೇನು ಫ್ಯಾಷನ್ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ವಿಡಿಯೋದಲ್ಲಿ ಇಲಿ ಬೋನಿನ ರೀತಿಯಲ್ಲಿ ವಿನ್ಯಾಸಗೊಳಿಸಿದ ಹೈ ಹೀಲ್ಸ್ ಧರಿಸಿ ರಸ್ತೆಯ ಬದಿ ನಿಂತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಯುವತಿ ಧರಿಸಿರುವ ಬೂಟ್, ಅದರ ಮೇಲಿನ ಭಾಗವು ಸಾಮಾನ್ಯ ಶೂನಂತೆ ಕಾಣುತ್ತದೆ, ಆದರೆ ಅದರ ಕೆಳಗಿನ ಭಾಗವು ಇಲಿ ಬೋನಿನಂತಿದೆ. ಅದರಲ್ಲಿ ಇಲಿಗಳನ್ನು ಸಹ ಲಾಕ್ ಮಾಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ಅಂಬಾನಿಯ 15,000 ಕೋಟಿ ರೂ.ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ ಯಾರು ಗೊತ್ತಾ? ಈಕೆ ಬಾಲಿವುಡ್ನ ಸ್ಟಾರ್ ನಟನ ಪತ್ನಿ
ಈ ವೀಡಿಯೊವನ್ನು @inmyseams ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ 11.5 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 20 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Thu, 15 February 24