ಇಲ್ಲೊಬ್ಬರು ಜೊಮಾಟೊ(Zomato) ದಿಂದ ವೆಜ್ ಫುಡ್ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿರೋ ಫುಡ್ ಬಂತಲ್ಲ ಎಂದು ಪ್ಲೇಟ್ಗೆ ಹಾಕಿ ತಿನ್ನಲು ನೋಡಿದಾಗ ಮಾಂಸದ ತುಂಡು ಕಂಡುಬಂದಿದೆ. ಈ ಅನುಭವನನ್ನು ಸ್ವಂತಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿರುಪಮಾ ಸಿಂಗ್ ಅವರು ಹಂಚಿಕೊಂಡಿದ್ದು, ಈ ಟ್ವೀಟ್ ಇದೀಗಾ ಭಾರೀ ವೈರಲ್ ಆಗಿದೆ.
Hi @zomato , ordered veg food and got all non veg food. 4/5 of us were vegetarians. What is this service, horrible experience. pic.twitter.com/6hDkyMVBPg
— Nirupama Singh (@nitropumaa) March 4, 2023
ಜೊಮಾಟೊದಿಂದ ವೆಜ್ ಫುಡ್ ಆರ್ಡರ್ ಮಾಡಿದಾಗ, ನನಗೆ ನಾನ್‌ವೆಜ್ ಊಟ ಸಿಕ್ಕಿತು. ಇದು ನನಗೆ ಭಯಾನಕ ಅನುಭವ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಮಾರ್ಚ್ 4ರಂದು ಹಂಚಿಕೊಂಡಿದ್ದು, ಇದೀಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಿಸಿದ್ದಾರೆ. ಜೊತೆಗೆ ಸಾಕಷ್ಟು ಲೈಕ್ ಹಾಗೂ ಕಾಮೆಂಟ್ಗಳನ್ನು ಕೂಡ ಕಾಣಬಹುದು.
ಇದನ್ನೂ ಓದಿ: ಪ್ರಾಣಿ, ಪಕ್ಷಿಗಳಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆ ಅಲ್ವಾ, ಇಲ್ಲಿದೆ ಹೃದಯಸ್ಪರ್ಶಿ ವಿಡಿಯೊ
ಈ ವೀಡಿಯೋ ಭಾರೀ ವೈರಲ್ ಆಗುತ್ತಿದ್ದಂತೆ ಜೊಮಾಟೊದ ಅಧಿಕೃತ ಟ್ವಿಟರ್ ಖಾತೆಯಿಂದ ಗ್ರಾಹಕರಿಗೆ ತ್ವರಿತವಾಗಿ ಪ್ರತ್ಯುತ್ತರ ನೀಡಿ ಮತ್ತು ಈ ಘಟನೆಗೆ ಕ್ಷಮೆಯಾಚಿಸಿದೆ. ವೆಜ್ ಆಂಡ್ ನಾನ್ ವೆಜ್ ರೆಸ್ಟೊರೆಂಟ್‌ನಿಂದ ಆರ್ಡರ್ ಮಾಡುವಾಗ ಸಾಕಷ್ಟು ಬಾರಿ ಸಂದೇಹವನ್ನುಂಟು ಮಾಡುತ್ತದೆ ಎಂದು ಬಳಕೆದಾದರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:36 am, Tue, 7 March 23