Good news; ಟೆಕ್ ಕಂಪನಿಗಳ ಉದ್ಯೋಗ ಕಡಿತದ ನಡುವೆ Zomatoದಲ್ಲಿ 800 ಉದ್ಯೋಗದ ಆಫರ್

ವಿಪ್ರೋ , ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್, ಮೆಟಾ ಮತ್ತು ಟ್ವಿಟರ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಮಧ್ಯೆ , ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಸೋಮವಾರ ತನ್ನ ಕಂಪನಿಯಲ್ಲಿ ಸುಮಾರು 800 ಹುದ್ದೆಗಳು ಖಾಲಿ ಇದೆ ಎಂದು ಲಿಂಕ್ಡ್‌ಇನ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Good news; ಟೆಕ್ ಕಂಪನಿಗಳ ಉದ್ಯೋಗ ಕಡಿತದ ನಡುವೆ Zomatoದಲ್ಲಿ 800 ಉದ್ಯೋಗದ ಆಫರ್
Zometo
Follow us
|

Updated on:Jan 24, 2023 | 2:15 PM

ಜಗತ್ತಿನ ದೈತ್ಯ ಕಂಪನಿಗಳು ತನ್ನ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಈ ಸಮಯದಲ್ಲಿ Zomato ಉದ್ಯೋಗವನ್ನು ನೀಡುತ್ತಿದೆ. ಹೌದು ವಿಪ್ರೋ , ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್, ಮೆಟಾ ಮತ್ತು ಟ್ವಿಟರ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಮಧ್ಯೆ , ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಸೋಮವಾರ ತನ್ನ ಕಂಪನಿಯಲ್ಲಿ ಸುಮಾರು 800 ಹುದ್ದೆಗಳು ಖಾಲಿ ಇದೆ ಎಂದು ಲಿಂಕ್ಡ್‌ಇನ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಂಸ್ಥೆಯು ಸಿಇಒ, ಜನರಲ್‌ಲಿಸ್ಟ್, ಗ್ರೋತ್ ಮ್ಯಾನೇಜರ್, ಉತ್ಪನ್ನ ಮಾಲೀಕರು ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್‌ಗೆ ಸಿಬ್ಬಂದಿ ಮುಖ್ಯಸ್ಥರನ್ನು ಒಟ್ಟು ಐದು ಹುದ್ದೆಗಳಿಗೆ ನೇಮಿಸಿಕೊಳ್ಳುತ್ತಿದೆ ಎಂದು ಗೋಯಲ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಜೊಮಾಟೊ ತನ್ನ ಸುಮಾರು 3% ಉದ್ಯೋಗಿಗಳನ್ನು ವಜಾಗೊಳಿಸಿದ ಕೇವಲ ಎರಡು ತಿಂಗಳ ನಂತರ ನೇಮಕಾತಿ ಆಹ್ವಾನ ನೀಡಿದೆ. ಸೂಕ್ತವಾದ ಅಭ್ಯರ್ಥಿಗಳು ಈ ಫೋಸ್ಟ್​ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಉದ್ಯೋಗ ಪ್ರೊಫೈಲ್‌ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು deepinder@zomato.com ಇಮೇಲ್ ಮೂಲಕ ಅವರನ್ನು ಸಂಪರ್ಕಿಸಲು ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.

Zometo

ಇದನ್ನು ಓದಿ;Zomato InterCity Legends: ಎಲ್ಲೇ ಇರಿ, ಭಾರತದ ವಿವಿಧ ನಗರಗಳ ಆಹಾರ ಸವಿಯಿರಿ; ಝೊಮೆಟೊದ ವಿನೂತನ ಪ್ರಯತ್ನ

ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ಸುಮಾರು 3 ಪ್ರತಿಶತದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ ಎರಡು ತಿಂಗಳ ನಂತರ ಅನೇಕ ಲಿಂಕ್ಡ್‌ಇನ್ ಬಳಕೆದಾರರು ಸಾಮೂಹಿಕ ನೇಮಕಾತಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ ಮತ್ತು ಇದು ಮಾರ್ಕೆಟಿಂಗ್ ಗಿಮಿಕ್ ಎಂದು ಹೇಳಿದ್ದಾರೆ. ಕೆಲವು ಲಿಂಕ್ಡ್‌ಇನ್ ಬಳಕೆದಾರರು ಇದನ್ನು ಇದು ಉದ್ಯೋಗಿಗಳ ಮೇಲೆ “ಶೋಷಣೆ” ಮತ್ತು ಸಿಇಒಗಳು ಮಾಡುತ್ತಿರುವ “ವಿಷಕಾರಿ” ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Tue, 24 January 23