ನಾಗರಹಾವನ್ನು ಹಿಡಿದು ಎಗರೆಗರಿ ಬ್ರೇಕ್​​ ಡ್ಯಾನ್ಸ್​ ಮಾಡಿದ ಯುವಕ, ಇದು ಭಯಂಕರ ಸ್ನೇಕ್ ಡ್ಯಾನ್ಸ್ ಎಂದ ನೆಟ್ಟಿಗರು

| Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2024 | 11:31 AM

Snake dance: ವಿಡಿಯೋದಲ್ಲಿ ಯುವಕನೊಬ್ಬ ನಿರ್ಭಯವಾಗಿ ನಾಗರಹಾವಿನ ಬಾಲವನ್ನು ಹಿಡಿದು ಅದನ್ನು ತಿರುಗಿಸಿ ಅದರಚಲನೆಗೆ ತಕ್ಕಂತೆ ತಾನು ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ನಂತರ ಅದರ ಬಾಲವನ್ನು ಬಿಟ್ಟು ಅದರ ಮುಂದೆ ಕುಣಿಯತೊಡಗಿದ್ದಾನೆ. ಅದೊಮ್ಮೆ ಹಾವು ಯುವಕನಿಗೆ ಕಚ್ಚಲು ಯತ್ನಿಸಿದೆ. ಆದರೂ, ಧೃತಿಗೆಡದ ಯುವಕ ಚಾಣಾಕ್ಷತನದಿಂದ ತಪ್ಪಿಸಿಕೊಂಡು, ಮತ್ತೆ ಮತ್ತೆ ಕುಣಿದಾಡಿದ್ದಾನೆ.

ನಾಗರಹಾವನ್ನು ಹಿಡಿದು ಎಗರೆಗರಿ ಬ್ರೇಕ್​​ ಡ್ಯಾನ್ಸ್​ ಮಾಡಿದ ಯುವಕ, ಇದು ಭಯಂಕರ ಸ್ನೇಕ್ ಡ್ಯಾನ್ಸ್ ಎಂದ ನೆಟ್ಟಿಗರು
Follow us on

ಅಪಾಯಕಾರಿ ನಾಗರ ಹಾವಿನ (King Cobra) ಬಾಲ ಹಿಡಿದು ಯುವಕನೊಬ್ಬ ಬ್ರೇಕ್ ಡ್ಯಾನ್ಸ್ ಮಾಡಿದ್ದಾನೆ. ಅದನ್ನು ನೋಡಿದ ನೆಟ್ಟಿಗರು ಹಾವು ಕಚ್ಚುವ ಮೂಡ್ ನಲ್ಲಿಲ್ಲ, ಅದಕ್ಕೆ ಅವಯ್ಯ ಬಚಾವು ಅಂದಿದ್ದಾರೆ. ಇಷ್ಟಕ್ಕೂ ಅದು ಎಲ್ಲಿ ಏನಾಯಿತು ಎಂದು ತಿಳಿದುಕೊಳ್ಲುವುದಕ್ಕೆ ಮುನ್ನ ದಿನೇ ದಿನೆ ಅನೇಕಾನೇಕ ಚಿತ್ರವಿಚಿತ್ರ ವಿಡಿಯೋಗಳು ಅಂತರ್ಜಾಲದಲ್ಲಿ ಲೀಲಾಜಾಲವಾಗಿ ಜಾಲಾಡುತ್ತಾ ಇರುತ್ತವೆ. ಜನ ಮುಗಿಬಿಟ್ಟು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ವೀಡಿಯೋಗಳು ವೈರಲ್ ಆಗಿ ನೆಟ್ಟಿಗರನ್ನು ಪುಳಕಿತಗೊಳಿಸುತ್ತವೆ. ಕೆಲವು ವಿಡಿಯೋಗಳಂತೂ ಭಯಂಕರವಾಗಿ ಭಯ ಹುಟ್ಟಿಸುತ್ತವೆ. ಯುವಕ-ಯುವತಿಯರು ಕೋತಿಗಳು ಮತ್ತು ನಾಯಿಗಳೊಂದಿಗೆ ಆಟವಾಡುವ ವೀಡಿಯೊಗಳು ತಮಾಷೆಯಾಗಿಯೂ, ಆಕರ್ಷಕವಾಗಿಯೂ ಇರುತ್ತವೆ. ಆದರೆ ಕೆಲವಂತೂ ಅಬ್ಬಾ… ಸದ್ಯ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಅತಿ ವಿಷಕಾರಿ ಹಾವಿನ ಬಾಲವನ್ನು ಹಿಡಿದುಕೊಂಡು ಅದರ ಮುಂದೆ ಕುಣಿದು ಕುಪ್ಪಳಿಸಿದ್ದಾನೆ (snake dance)!

ಕೆಲವು ಹಾವುಗಳು ಸಾಕು ಪ್ರಾಣಿಗಳಂತೆ ಸೌಮ್ಯ ಸ್ವಭಾವದ್ದಾಗಿರುತ್ತವೆ. ಇನ್ನು ಕೆಲವರು ವಿಷಪೂರಿತ ಹಾವನ್ನು ಹಿಡಿದುಕೊಂಡು ಆಟವಾಡುತ್ತಾರೆ. ಇತ್ತೀಚಿನ ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಉಗ್ರ ರಾಜ ನಾಗರಹಾವಿನ ಬಾಲವನ್ನು ಹಿಡಿದುಕೊಂಡು ಒಂದು ರೀತಿಯ ವಿಚಿತ್ರ ನೃತ್ಯ ಮಾಡಿದ್ದಾನೆ. ಈ ವಿಡಿಯೋ ನೆಟ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲಿ ಯುವಕನೊಬ್ಬ ನಿರ್ಭಯವಾಗಿ ನಾಗರಹಾವಿನ ಬಾಲವನ್ನು ಹಿಡಿದು ಅದನ್ನು ತಿರುಗಿಸಿ ಅದರಚಲನೆಗೆ ತಕ್ಕಂತೆ ತಾನು ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ನಂತರ ಅದರ ಬಾಲವನ್ನು ಬಿಟ್ಟು ಅದರ ಮುಂದೆ ಕುಣಿಯತೊಡಗಿದ್ದಾನೆ. ಅದೊಮ್ಮೆ ಹಾವು ಯುವಕನಿಗೆ ಕಚ್ಚಲು ಯತ್ನಿಸಿದೆ. ಆದರೂ, ಧೃತಿಗೆಡದ ಯುವಕ ಚಾಣಾಕ್ಷತನದಿಂದ ತಪ್ಪಿಸಿಕೊಂಡು, ಮತ್ತೆ ಮತ್ತೆ ಕುಣಿದಾಡಿದ್ದಾನೆ.

ಈ ವಿಡಿಯೋ ಅಂತರ್ಜಾಲದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕೆಲವರು ಯುವಕನ ಅಸಾಧಾರಣ ಶೌರ್ಯವನ್ನು ಹೊಗಳಿದರೆ, ಇತರರು ಅವನ ದುಸ್ಸಾಹಸವನ್ನು ಟೀಕಿಸಿದ್ದಾರೆ. ಜೀವನವೆಂದರೆ ಇಷ್ಟೊಂದು ಅಸಡ್ಡೆ ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇವತ್ತು ಆ ನಾಗರಹಾವು ಡ್ಯಾನ್ಸ್ ಮಾಡುವ ಮೂಡ್ ನಲ್ಲಿಲ್ಲ, ಬಿಡು ಎಂದು ನೆಟಿಜನ್ ಒಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಒಂದೇ ಒಂದು ದಾಳಿ ನಿನ್ನ ಜೀವನಕ್ಕೆ ಅಂತ್ಯ ಹಾಡಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ವರ್ತನೆಗೆ ಯುವಕರು ಕಡಿವಾಣ ಹಾಕಬೇಕು, ದಯವಿಟ್ಟು ಇಂತಹ ಪ್ರಯತ್ನಗಳನ್ನು ಮಾಡಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ