ಈತ ಮದುವೆಗೆ ಬಂದರೆ ಒದ್ದು ಹೊರ ಹಾಕಿ; ವೆಡ್ಡಿಂಗ್ ಕಾರ್ಡ್ನಲ್ಲಿ ಬರೆದ ಸಾಲು ವೈರಲ್
ಉತ್ತರ ಪ್ರದೇಶದ ರೋಹಿತ್ ಮತ್ತು ರಜನಿ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. "ಸೌರಭ್" ಎಂಬ ವ್ಯಕ್ತಿಯನ್ನು ಮದುವೆಗೆ ಬರದಂತೆ ನಿಷೇಧಿಸಲಾಗಿದ್ದು, ಮದುವೆಯ ದಿನ ಸೌರಭ್ ಮಂಟಪದ ಸಮೀಪ ಕಾಣಿಸಿಕೊಂಡರೆ ಒದ್ದು ಹೊರಹಾಕುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ವಿಚಿತ್ರ ಆಮಂತ್ರಣ ಪತ್ರಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉತ್ತರ ಪ್ರದೇಶ: ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಸ್ನೇಹಿತರನ್ನು, ಸಂಬಂಧಿಕರನ್ನು ಮದುವೆಗೆ ಆಹ್ವಾನಿಸುವುದೇ ಮದುವೆ ತಯಾರಿಯ ಮೊದಲ ಸಂಭ್ರಮ. ಆದರೆ ಇದೀಗ ಒಂದು ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಆಮಂತ್ರಣ ಪತ್ರಿಕೆ ವೈರಲ್ ಆಗಲು ಮುಖ್ಯ ಕಾರಣ ವೆಡ್ಡಿಂಗ್ ಕಾರ್ಡ್ನ ವಿನ್ಯಾಸವಲ್ಲ ಬದಲಾಗಿ, ಅದರಲ್ಲಿ ಬರೆದಿರುವ ಒಂದು ಸಾಲು.
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಿಚ್‌ಪುರಿ ಗ್ರಾಮದ ರೋಹಿತ್ ಮತ್ತು ರಜನಿ ಎಂಬ ಜೋಡಿಯ ವಿವಾಹ ಆಮಂತ್ರಣ ಪ್ರತಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಮಂಟಪ, ಮೂಹೂರ್ತದ ಸಮಯದ ಜೊತೆಗೆ ‘ಸೌರಭ್’ ಎಂಬ ವ್ಯಕ್ತಿಯ ಹೆಸರು ಬರೆಯಲಾಗಿದೆ. ಕೇವಲ ಹೆಸರು ಮಾತ್ರ ಬರೆದಿಲ್ಲ ಈತ ಮದುವೆಗೆ ಬಾರದಂತೆ ಶರತ್ತು ವಿಧಿಸಲಾಗಿದೆ. ಅಲ್ಲದೇ ಈತ ಮದುವೆಯ ದಿನ ಮಂಟಪದ ಸುತ್ತ ಎಲ್ಲಿಯಾದರೂ ಕಾಣಿಸಿಕೊಂಡರೆ ಒದ್ದು ಹೊರ ಹಾಕಿ ಎಂದು ಕೂಡ ಬರೆಯಲಾಗಿದೆ.
ಮದುವೆ ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ:

ಇದನ್ನೂ ಓದಿ: ಎಸಿ ಸರಿಯಾಗಿ ವರ್ಕ್ ಆಗ್ತಿಲ್ಲ ಎಂದು ರೈಲ್ವೆ ಚೈನ್ ಎಳೆದ ಪ್ರಯಾಣಿಕನಿಗೆ ಥಳಿಸಿದ ರೈಲ್ವೇ ಪೊಲೀಸ್; ವೈರಲ್ ಆಯ್ತು ವಿಡಿಯೋ
ಸದ್ಯ ಈ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಮೀಮ್‌ಗಳೂ ಹರಿದಾಡುತ್ತಿದೆ. ಅಲ್ಲದೇ ‘ಸೌರಭ್’ ಎಂಬ ಹೆಸರಿನ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಸಿಟ್ಟಿಗೆದ್ದಿದ್ದಾರೆ. ಅನೇಕ ನೆಟ್ಟಿಗರು “ಬಹುಶ: ಸೌರಭ್ ಅವರ ಮಾಜಿ ಗೆಳತಿಯನ್ನು ಈತ ಮದುವೆಯಾಗುತ್ತಿರಬಹುದು” ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




